Home Uncategorized Lakshana Serial: ಬದಲಾಗ್ತೀನಿ ಅಂದರೂ ಮೌರ್ಯನಿಗೆ ಶಕುಂತಳಾದೇವಿ ಬಳಿ ಕ್ಷಮೆಯಿಲ್ಲ

Lakshana Serial: ಬದಲಾಗ್ತೀನಿ ಅಂದರೂ ಮೌರ್ಯನಿಗೆ ಶಕುಂತಳಾದೇವಿ ಬಳಿ ಕ್ಷಮೆಯಿಲ್ಲ

1
0
bengaluru

ಧಾರಾವಾಹಿ: ಲಕ್ಷಣ (Lakshana)

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

bengaluru

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ತಾನು ಮಾಡಿದಂತಹ ತಪ್ಪಿಗೆಲ್ಲ ನಕ್ಷತ್ರಳ ಬಳಿ ಮಂಡಿಯೂರಿ ಅತ್ತಿಗೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕ್ಷಮೆ ಕೇಳುತ್ತಾನೆ ಮೌರ್ಯ. ಪೋಲಿಸರಿಗೆ ನಾನೇ ಸೆರೆಂಡರ್ ಆಗುತ್ತೇನೆ ಎಂದು ಹೇಳುತ್ತಾನೆ. ಮೈದುನನ ಈ ಬದಲಾವಣೆಯನ್ನು ಕಂಡು ನಕ್ಷತ್ರಳಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ.

ಮೌರ್ಯ ನಿನಗೆ ನನ್ನ ಬಳಿ ಯಾವ ಕ್ಷಮೆಯೂ ಇಲ್ಲ

ಮೌರ್ಯ ಹೋದ ಬಳಿಕ ನಕ್ಷತ್ರ ತನ್ನ ತಂದೆಯಿರುವ ಜಾಗಕ್ಕೆ ಬಂದು ಅವರ ಕೈ ಕಟ್ಟಿರುವ ಹಗ್ಗವನ್ನು ಬಿಡಿಸುತ್ತಾಳೆ. ಮಗಳಿಗೆ ತೊಂದರೆ ಕೊಡಲು ಮೌರ್ಯನೇ ಈ ಕೆಲಸ ಮಾಡಿದ್ದಾನೆ ಅಂತ ಅಂದುಕೊಂಡ ಸಿ.ಎಸ್ ಗನ್ ತೆಗೆದುಕೊಂಡು ಮೌರ್ಯನನ್ನು ಕೊಂದು ಬಿಡುತ್ತೇನೆ ಎಂದು ಹೊರಟು ನಿಂತಾಗ, ನಕ್ಷತ್ರ ಅವರನ್ನು ತಡೆದು ನಡೆದ ಘಟನೆಯನ್ನೆಲ್ಲಾ ವಿವರಿಸಿ ಮೌರ್ಯನೇ ನನ್ನ ಪ್ರಾಣವನ್ನು ಕಾಪಾಡಿದ್ದು ಎಂದು ಹೇಳುತ್ತಾಳೆ. ಮಗಳ ಈ ಮಾತುಗಳನ್ನು ಕೇಳಿ ಚಂದ್ರಶೇಖರ್‌ಗೆ ನಂಬಲಾಗುತ್ತಿಲ್ಲ.

ಇದನ್ನು ಓದಿ:ಮಾಡಿದ ತಪ್ಪಿಗೆಲ್ಲಾ ನಕ್ಷತ್ರಳ ಬಳಿ ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ

ಈ ವಿಷಯವನ್ನು ಆರತಿ ಕೂಡ ಫೋನ್ ಮಾಡಿ ತಿಳಿಸಿ ನಂತರ ನಕ್ಷತ್ರಳನ್ನು ಅವಳ ಗಂಡನ ಮನೆಗೆ ಬಿಟ್ಟು ಬರಲು ಹೊರಡುತ್ತಾರೆ. ಹೋಗವ ದಾರಿ ಮಧ್ಯೆ ಚಂದ್ರಶೇಖರ್ ಬಳಿ ಅಪ್ಪ ನಿಮ್ಮ ಬಳಿ ಏನೋ ಒಂದು ಕೇಳುತ್ತೇನೆ ಅದನ್ನು ನೆರವೇರಿಸಿ ಕೊಡುತ್ತೀರಾ ಎಂದು ನಕ್ಷತ್ರ ಕೇಳುತ್ತಾಳೆ. ಮಗಳು ಕೇಳಿದ್ದನ್ನಿ ಇಲ್ಲ ಅಂತ ಹೇಳುವುದಕ್ಕೆ ಆಗುತ್ತಾ ಅದೇನು ಬೇಕು ಪುಟ್ಟ ಕೇಳು ಅಂತ ಸಿ.ಎಸ್ ಹೇಳುತ್ತಾರೆ.

ಆಗ ಮೌರ್ಯನ ಮೇಲಿರುವ ಕೇಸ್‌ಗಳೆಲ್ಲವನ್ನು ನೀವು ವಾಪಸ್ ಪಡೆಯಬೇಕು. ಅವರು ಕ್ರಿಮಿನಲ್ ಆಗಲು ಒಂದು ಲೆಕ್ಕದಲ್ಲಿ ನಾವೇ ಕಾರಣವಲ್ಲ. ಈಗ ಬದಲಾಗಿ ಉತ್ತಮ ವ್ಯಕ್ತಿಯಾಗಿದ್ದಾರೆ. ಇದಕ್ಕಿಂತ ಮತ್ತೇನು ಬೇಕು ಅಪ್ಪ. ಇದು ಮಾತ್ರವಲ್ಲದೆ ನನ್ನನ್ನು ಮನಸಾರೆ ಅತ್ತಿಗೆಯೆಂದು ಒಪ್ಪಿಕೊಂಡಿದ್ದಾರೆ. ಜೈಲಿಗೆ ಹೋಗಿ ಅವರ ಜೀವನ ಹಾಳಾಗುವುದು ಬೇಡ ಎಂದು ನಕ್ಷತ್ರ ಕೇಳಿಕೊಳ್ಳುತ್ತಾಳೆ.

ಮಗಳ ಮಾತಿಗೆ ಮೊದಲು ಒಪ್ಪಿಗೆ ನೀಡಲಿಲ್ಲವಾದರೂ ನಂತರ ಮಗಳ ಒಳ್ಳೆಯತನಕ್ಕೆ ಮಣಿದು ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಸಿ.ಎಸ್ ಹೇಳುತ್ತಾರೆ. ಇನ್ನು ಈ ಕಡೆ ಅಮ್ಮ, ಅಣ್ಣಂದಿರ ಬಳಿ ಕ್ಷಮೆ ಕೇಳಲು ಮನೆಗೆ ಬಂದ ಮೌರ್ಯನನ್ನು ಗೇಟಿನ ಬಳಿಯೇ ನಿಲ್ಲಿಸಿ ನೀವು ಒಳಗೆ ಹೋಗುವಂತಿಲ್ಲ ಎಂದು ಹೇಳಿ ಸೆಕ್ಯುರಿಟಿ ಗಾರ್ಡ್ ಶೌರ್ಯ ಮತ್ತು ಪೃಥ್ವಿಯನ್ನು ಕೂಗಿ ಕರೆಯುತ್ತಾನೆ.

ಅವರಿಬ್ಬರು ಗಾಬರಿಯಿಂದ ಏನಾಗಿರಬಹುದೆಂದು ಓಡಿ ಬರುತ್ತಾರೆ. ಆಗ ಮೌರ್ಯ ಅಲ್ಲಿರುವುದನ್ನು ಕಂಡು ಗಾಬರಿಯೊಂದಿಗೆ ಸಿಟ್ಟಾಗುತ್ತಾರೆ. ನೀನ್ಯಾಕೆ ಇಲ್ಲಿಗೆ ಬಂದಿದ್ದೀಯಾ ಮತ್ತೆ ಏನಾದ್ರೂ ಸ್ಕೆಚ್ ಹಾಕಬೇಕೆಂದುಕೊಂಡಿದ್ದೀಯಾ ಎಂದು ತಮ್ಮನನ್ನು ಶೌರ್ಯ ಹಿಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಾನೆ.

ಅಣ್ಣನ ಮಾತನ್ನು ಕೇಳಿ ಅಳುತ್ತಾ ದಯವಿಟ್ಟು ಒಳಗೆ ಹೋಗಲು ಬಿಡಿ ಅಣ್ಣ. ಒಂದು ಸಲ ಅಮ್ಮ ಹಾಗೂ ಭೂಪತಿಯೊಂದಿಗೆ ಮಾತನಾಡಿ ಬರುತ್ತೇನೆ. ಪ್ಲೀಸ್ ಮನೆ ಒಳಗೆ ಹೋಗಲು ಒಂದೇ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಹೇಗೋ ನಕ್ಷತ್ರ ಮನೆಯಲ್ಲಿ ಇಲ್ಲಲ್ವ, ಇವನು ಯಾರಿಗೆ ಅಂತ ತೊಂದರೆ ಕೊಡುತ್ತಾನೆ ನೋಡಬೇಕು. ಹೋಗು ಒಳಗೆ ಎಂದು ಶೌರ್ಯ ಹೇಳುತ್ತಾನೆ.

ಮೌರ್ಯ ಒಳಗೆ ಹೋಗುತ್ತಿದ್ದಂತೆಯೇ ಅವನ ಕೊರಳ ಪಟ್ಟಿಯನ್ನು ಹಿಡಿದು ನೀನ್ಯಾಕೋ ಇಲ್ಲಿಗೆ ಬಂದೆ. ಎಷ್ಟು ಧೈರ್ಯ ಇರಬೇಕು ನಿನಗೆ ಎಂದು ಭೂಪತಿ ಅವನ ಮೇಲೆ ಗದರುತ್ತಾನೆ. ಭೂಪತಿ ಏನೇ ಬೈದರು ಬೇಜಾರು ಪಡದ ಮೌರ್ಯ ಒಂದೇ ಒಂದು ಸಲ ಅಮ್ಮನ ಜೊತೆ ಮಾತನಾಡಬೇಕು, ಅಮ್ಮ ಎಲ್ಲಿ ಎಂದು ಪುಟ್ಟ ಮಗುವಿನಂತೆ ಕೇಳಿಕೊಳ್ಳುತ್ತಾನೆ.

ಆ ಸಂದರ್ಭದಲ್ಲಿ ಅಲ್ಲಿಗೆ ಶಕುಂತಳಾದೇವಿ ಬರುತ್ತಾರೆ. ಅಮ್ಮನನ್ನು ಕಂಡು ಓಡಿ ಹೋಗಿ ಕಾಲಿಗೆ ಬಿದ್ದು ಅಮ್ಮ ನನನ್ನು ದಯವಿಟ್ಟು ಕ್ಷಮಿಸಿ ಬಿಡಿ. ನಾನು ಬಹಳ ದೊಡ್ಡ ತಪ್ಪು ಮಾಡಿದ್ದೇನೆ. ಅದು ಇವಾಗ ನನಗೆ ಗೊತ್ತಾಗುತ್ತಿದೆ. ಪ್ಲೀಸ್ ಅಮ್ಮ ಒಂದೇ ಒಂದು ಬಾರಿ ನನ್ನನ್ನು ಕ್ಷಮಿಸಿದ್ದೇನೆ ಎಂದು ಹೇಳಿ ನಾನು ಹೊರಟು ಹೋಗುತ್ತೇನೆ ಎಂದು ಮೌರ್ಯ ಹೇಳುತ್ತಾನೆ. ಮಗ ಬದಲಾಗುತ್ತೇನೆ ಅಂದರೂ ಕಾನೂನಿಗೆ ಗೌರವ ಕೊಟ್ಟು ಮಗ ಮಾಡಿರುವ ತಪ್ಪನ್ನು ಶಕುಂತಳಾದೇವಿ ಕ್ಷಮಿಸುವುದಿಲ್ಲ. ಕ್ರಿಮಿನಲ್ ನನ್ನ ಮಗನಲ್ಲ.

ಭೂಪತಿ ನಿನ್ನ ಅಮ್ಮನನ್ನು ಇನ್ಯಾರೋ ಅಮ್ಮ ಎಂದು ಕರೆದರೆ ಅದು ಹೇಗೆ ಸುಮ್ಮನೆ ಇದ್ದೀಯಾ, ಇವನು ಇನ್ನೊಂದು ನಾಟಕ ಮಾಡಿ ತಪ್ಪಿಸಿಕೊಂಡು ಹೋಗುವ ಮೊದಲು ಇವನನ್ನು ಪೋಲಿಸರಿಗೆ ಒಪ್ಪಿಸಿಬಿಡು. ಹಾಗೆ ಮೌರ್ಯ ನಿನಗೆ ನನ್ನ ಬಳಿ ಯಾವ ಕ್ಷಮೆಯೂ ಇಲ್ಲ ಎಂದು ಶಕುಂತಳಾದೇವಿ ಹೇಳುತ್ತಾರೆ. ಬದಲಾದ ಮೌರ್ಯನಿಗೆ ತನ್ನ ತಪ್ಪು ತಿದ್ದಿ ಬದುಕಲು ಅವಕಾಶ ಸಿಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here