Home Uncategorized Laththi: ಪೊಲೀಸ್ ಕಾನ್‌ ಸ್ಟೇಬಲ್ ಪಾತ್ರದಲ್ಲಿ ಲಾಠಿ ಹಿಡಿದು ಬಂದ ನಟ ವಿಶಾಲ್: ಡಿ. 22ಕ್ಕೆ...

Laththi: ಪೊಲೀಸ್ ಕಾನ್‌ ಸ್ಟೇಬಲ್ ಪಾತ್ರದಲ್ಲಿ ಲಾಠಿ ಹಿಡಿದು ಬಂದ ನಟ ವಿಶಾಲ್: ಡಿ. 22ಕ್ಕೆ ಚಿತ್ರ ರಿಲೀಸ್​

0
0
bengaluru

ಕಾಲಿವುಡ್ ಸ್ಟಾರ್​ ನಟ ವಿಶಾಲ್​ ಅಭಿನಯನದ ‘ಲಾಠಿ’ (Laththi) ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲು ಸಿದ್ದವಾಗಿದ್ದು, ಡಿ. 22ರಂದು ಬಿಡುಗಡೆಯಾಗಲಿದೆ. ಈಗಾಗಲೇ ನಟ ವಿಶಾಲ್​ ಕರ್ನಾಟಕದ ಹಲವೆಡೆ ಚಿತ್ರದ ಪ್ರಮೋಷನ್ ಕೂಡ ಮಾಡಿದ್ದಾರೆ. ಇಂದು (ಡಿ. 17) ಬೆಂಗಳೂರಿನಲ್ಲಿ ‘ಲಾಠಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ರೇಂಜಿಗೆ ಬಿಡುಗಡೆ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈಗಾಗಲೇ ಚಿತ್ರದ ಫಸ್ಟ್​ ಲುಕ್​​ ಮತ್ತು ಟೀಸರ್​ನಿಂದಲೇ ‘ಲಾಠಿ’ ಚಿತ್ರ ಗಮನಸೆಳೆದಿದೆ.

‘ಲಾಠಿ’ ಚಿತ್ರದಲ್ಲಿ ನಟ ವಿಶಾಲ್​ ಅವರು ಪೊಲೀಸ್ ಕಾನ್‌ ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಕುಮಾರ್ ನಿರ್ದೇಶಿಸಿದ್ದು, ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಇದೇ ವೇಳೆ ಮಾತನಾಡಿದ ನಟ ವಿಶಾಲ್​ ‘ಚಿತ್ರ ಉತ್ತಮ ಕಥಾಹಂದರ ಹೊಂದಿದೆ. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಸಂತಸ ತಂದಿದೆ. ಅಭಿಮಾನಿಗಳಿಗೆ ತಮ್ಮ ನಟನೆ ಸಿಕ್ಕಾಪಟ್ಟೆ ಖುಷಿ ಕೊಡಲಿದೆ. ಒಂದು ವೇಳೆ ನಾನು ಕಮೀಷನರ್ ಆದರೆ ಕಾನ್‌ ಸ್ಟೇಬಲ್ಸ್​ಗೆ ಸಂಬಳ ಹೆಚ್ಚಿಸುವೆ’ ಎಂದರು.

ಇದನ್ನೂ ಓದಿ: Besharam Rang: ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿ ದೀಪಿಕಾ ಪಡುಕೋಣೆ ಪರ ನಿಂತ ರಮ್ಯಾ

ಪುನೀತ್​ರಾಜ್​ ಕುಮಾರ್​​ನ ನೆನೆದ ನಟ ವಿಶಾಲ್

bengaluru

‘ಲಾಠಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ವೇಳೆ ನಟ ವಿಶಾಲ್ ನಟ ಪುನೀತ್​ರಾಜ್​ ಕುಮಾರ್​ ಅವರನ್ನು ನೆನೆಪಿಸಿಕೊಂಡರು. ‘ಅಪ್ಪು ಅವರನ್ನು ಮರೆಯೋದಕ್ಕೆ ಸಾಧ್ಯವೆ ಇಲ್ಲ. 18 ವರ್ಷದಿಂದ ನನಗೆ ಪ್ರೀತಿ ಕೊಟ್ಟಿದ್ದೀರಾ. ನಾನು ಯಾವತ್ತು ಕನ್ನಡಿಗರನ್ನ ಮರೆಯಲ್ಲ. ಲಾಠಿ ಚಿತ್ರಕ್ಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀನಿ. ತುಂಬಾ ಫಿಸಿಕಲ್ ಹರ್ಟ್ ಮಾಡಿಕೊಂಡಿದ್ದೇನೆ. ಡಿ. 30ಕ್ಕೆ ಲಾಠಿ ಚಿತ್ರ ಹಿಂದಿಯಲ್ಲೂ ರಿಲೀಸ್ ಆಗುತ್ತೆ. ಚಿತ್ರದ ಕ್ಲೈಮಾಕ್ಸ್ ಒಂದೇ ಸ್ಥಳದಲ್ಲಿ ಆಗಿದೆ. ಅದನ್ನ ನೀವು ತೆರೆಮೇಲೆ ನೋಡಬೇಕು’ ಎಂದು ಹೇಳಿದರು.

ಸದ್ಯದಲ್ಲೇ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ

ನಟ ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರ ಡಿ. 23ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ‘ಲಾಠಿ’ ಮತ್ತು ‘ವೇದ’ ಚಿತ್ರಗಳ ಮಧ್ಯೆ ವಾರ್​ ನಡೆಯಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಕುರಿತಾಗಿ ವಿಶಾಲ್​ ಪ್ರತಿಕ್ರಿಯೆ ನೀಡಿದ್ದು, ವೇದ ಸಿನಿಮಾ ಜೊತೆಗೆ ಬರುತ್ತಿದ್ದೇವೆ. ಆದರೆ ಇದು ಕಾಂಪೀಟೀಷನ್ ಅಲ್ಲ ಎಂದರು. ಸದ್ಯದಲ್ಲೇ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ತಮ್ಮ ಆಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

bengaluru

LEAVE A REPLY

Please enter your comment!
Please enter your name here