Home ಬೆಂಗಳೂರು ನಗರ Laxman Savadi seens with BJP Leaders in Belagavi| ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜೊತೆ...

Laxman Savadi seens with BJP Leaders in Belagavi| ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜೊತೆ ಲಕ್ಷ್ಮಣ ಸವದಿ ಓಡಾಟ

10
0
Laxman Savadi seens with BJP Leaders in Belagavi

ಬೆಳಗಾವಿ:

ಲಕ್ಷ್ಮಣ ಸವದಿ ಸಹ ಬಿಜೆಪಿಗೆ ಘರ್ ವಾಪ್ಸಿ ಮಾಡುತ್ತಾರೆ ಎನ್ನುವ ಚರ್ಚೆಗಳು ನಡೆದಿವೆ. ಆದ್ರ,​ ಬಿಜೆಪಿಗೆ ಹೋಗಲ್ಲ ಎಂದು ಲಕ್ಷ್ಮಣ ಸವದಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೂ ಇದರ ನಡುವೆ ಲಕ್ಷ್ಮಣ ಸವದಿ ಅವರು ಬಿಜೆಪಿ ನಾಯಕರ ಜತೆಗೆ ಓಡಾಟ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇಂದು ಲಕ್ಷ್ಮಣ ಸವದಿ ಕಾರಿನಲ್ಲೇ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬಿಜೆಪಿಯ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಸುತ್ತಾಡಿದ್ದಾರೆ. ಅಲ್ಲದೇ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಒಟ್ಟಾಗಿ ಆಗಮಿಸಿದ್ದಾರೆ. ಆದರೆ, ಬ್ಯಾಂಕ್​ ಸಭೆಗೆ ಬರುವ ಮುನ್ನ ಬೆಳಗಾವಿಯ ಸದಾಶಿವನಗರದಲ್ಲಿರುವ ಸವದಿ ನಿವಾಸದಲ್ಲಿ ಊಟದ ನೆಪದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.

Laxman Savadi seens with BJP Leaders in Belagavi
Laxman Savadi seens with BJP Leaders in Belagavi

ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳುತ್ತಿರುವ ಶಾಸಕ ಲಕ್ಷ್ಮಣ ಸವದಿ, ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಯ ನೆಪದಲ್ಲಿ ರಾಜಕೀಯ ಚರ್ಚೆ ನಡೆಸಿದ್ರಾ ? ಸವದಿ ವಾಪಸ್ ಬಿಜೆಪಿಗೆ ಹೋಗುತ್ತಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ ಸವದಿ ಬಿಜೆಪಿ ನಾಯಕರ ಜತೆ ಓಡಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here