ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 17 ತಿಂಗಳ ತಮ್ಮ ಸಂಪುಟಕ್ಕೆ ಬುಧವಾರ (ನಾಳೆ) ಹೊಸ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದಪಡಿಸಿದ್ದು, ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ನಾಳೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ನೂತನ ಸಚಿವರ ಪಟ್ಟಿಯನ್ನು ನಾಳೆಯೇ ಬಿಡುಗಡೆ ಮಾಡುವುದಾಗಿ ಹೇಳಿ, ಹೆಸರುಗಳನ್ನು ತೇಲಿಬಿಟ್ಟು ಊಹಾಪೋಹಗಳಿಗೆ, ವದಂತಿಗಳಿಗೆ ಅವಕಾಶ ಕೊಡಬೇಡಿ, ನಾನೇ ಪಟ್ಟಿ ಕೊಡುವುದಾಗಿ ಮಾಧ್ಯಮಗಳಿಗೂ ಮನವಿ ಮಾಡಿದರು.
ಕಳೆದ ಭಾನುವಾರ ಯಡಿಯೂರಪ್ಪ ದೆಹಲಿಗೆ ತೆರಳಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದರು. UNI