Home ಬೆಂಗಳೂರು ನಗರ ಕರ್ನಾಟಕ ಲೋಕಸೇವಾ ಆಯೋಗದ (KPSC) ಕಾರ್ಯದರ್ಶಿಯವರಿಂದ ಅಧಿಕಾರ ದುರ್ಬಳಕೆ; ಆಯೋಗದ ಹಾಗೂ ಸರ್ಕಾರದ ಗಮನಕ್ಕೆ ತರದೇ...

ಕರ್ನಾಟಕ ಲೋಕಸೇವಾ ಆಯೋಗದ (KPSC) ಕಾರ್ಯದರ್ಶಿಯವರಿಂದ ಅಧಿಕಾರ ದುರ್ಬಳಕೆ; ಆಯೋಗದ ಹಾಗೂ ಸರ್ಕಾರದ ಗಮನಕ್ಕೆ ತರದೇ 15 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ – ಕೆ.ಪಿ.ಎಸ್.ಸಿ ಅಧ್ಯಕ್ಷರಿಂದ ಸ್ಪಷ್ಟನೆ

36
0
KPSC Chairman Shivashankarappa Sahukar and KPSC Secretary KPSC Chairman Vikas Kishore Suralkar
KPSC Chairman Shivashankarappa Sahukar and KPSC Secretary KPSC Chairman Vikas Kishore Suralkar
Advertisement
bengaluru

ಬೆಂಗಳೂರು:

ಇಂದು ದಿನಾಂಕ:30-08-2023ರ ಪ್ರಜಾವಾಣಿ ಪತ್ರಿಕೆಯಲ್ಲಿ “ಅಭ್ಯರ್ಥಿಗಳ ಕಣ್ಗಾವಲಿಗೆ ಇನ್ನು ‘ಎಐ’ ಶೀರ್ಷಿಕೆಯಡಿ ಪ್ರಕಟವಾಗಿರುವ ವರದಿ ಮತ್ತು ಡೆಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ದಿನಾಂಕ: 30-08-2023ರಂದು “Al to help KPSC intensify vigilance of recruitment exams” ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ವರದಿಯನ್ನು ಆಯೋಗವು ಗಮನಿಸಿದೆ. ಅವುಗಳಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವಿವಿಧ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ಮಂಗಳವಾರ (ಆಗಸ್ಟ್ 29) ನಡೆದ ಆಯೋಗದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿಯವರು ಸದರಿ ಪತ್ರಿಕೆಗಳಿಗೆ ಮಾಹಿತಿ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಆದರೆ, ವಾಸ್ತವದಲ್ಲಿ ಈ ವಿಷಯದ ಬಗ್ಗೆ ದಿನಾಂಕ:29-08-2023ರ ಸಭೆಯಲ್ಲಿ ಅಜೆಂಡಾ ಇರಲಿಲ್ಲ. ಅಲ್ಲದೇ, ಕಾರ್ಯದರ್ಶಿಯವರು ಈ ವಿಷಯವನ್ನು ಆಯೋಗದ ಸಭೆಯಲ್ಲಿ ಪ್ರಸ್ತಾಪಿಸಿಲ್ಲ ಮತ್ತು ಆಯೋಗದ ಗಮನಕ್ಕೆ ಕೂಡ ತಂದಿಲ್ಲ.

ಆಯೋಗದ ಕಾರ್ಯದರ್ಶಿಯವರು ಮೇಲಿನ ಸುಧಾರಣಾ ಕ್ರಮಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡದೇ ಅವುಗಳಿಗಾಗಿ ಸುಮಾರು 45 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಆಹ್ವಾನಿಸಿರುವುದು ಸಹ ಆಯೋಗಕ್ಕೆ ಗೊತ್ತಿಲ್ಲ. M/s Exergy Solutions, Noida, Delhi’ ಎಂಬ ಸಂಸ್ಥೆಯವರು ದಿನಾಂಕ: 23-08-2023ರಂದು ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಸದರಿ ಟೆಂಡರ್‍ನ ಬಗ್ಗೆ ಕೆಲವೊಂದು ಆಕ್ಷೇಪಣೆಗಳನ್ನು ಸಲ್ಲಿಸಿದಾಗಲμÉ್ಟೀ ಆಯೋಗಕ್ಕೆ ಸದರಿ ಟೆಂಡರ್ ಆಹ್ವಾನಿಸಿರುವ ವಿಷಯ ಗೊತ್ತಾಗಿರುತ್ತದೆ. ಸದರಿ ಸಂಸ್ಥೆಯವರ ಆಕ್ಷೇಪಣೆಗಳಿಗೆ ಉತ್ತರ ನೀಡಲು ಕಾರ್ಯದರ್ಶಿಯವರಿಗೆ ಸೂಚಿಸಿದ್ದು, ಅವರು ಕೆಲವೊಂದು ಮಾಹಿತಿಗಳನ್ನು ಟಿಪ್ಪಣಿ ಮೂಲಕ ನೀಡಿದ್ದಾರೆ. ಅವುಗಳನ್ನು ಆಯೋಗವು ಪರಿಶೀಲಿಸುತ್ತಿದೆ. ಈ ಮಧ್ಯೆ, ಪರೀಕ್ಷಾ ಸುಧಾರಣಾ ಕ್ರಮಗಳಿಗೆ ಆಯೋಗವು ಅನುಮೋದನೆ ನೀಡಿದೆ ಎಂದು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯದ ಬಗ್ಗೆ ಆಯೋಗದ ಸಭೆಯಲ್ಲಿ ಚರ್ಚಿಸಿಲ್ಲ ಹಾಗೂ ಯಾವುದೇ ನಿರ್ಧಾರವನ್ನು ಸಹ ಕೈಗೊಂಡಿಲ್ಲ. ಇದು ಆಯೋಗದ ಕಾರ್ಯದರ್ಶಿಯವರ ಏಕಪಕ್ಷೀಯ ನಿರ್ಧಾರವಾಗಿರುತ್ತದೆ ಹಾಗೂ ತನ್ಮೂಲಕ ಆಯೋಗದ ಸಭೆಯ ದುರ್ಬಳಕೆ ಮಾಡಿಕೊಂಡಿರುತ್ತಾರೆ.

ಆಯೋಗದ ಕಾರ್ಯದರ್ಶಿಯವರು ಈ ರೀತಿಯ ಏಕ ಪಕ್ಷೀಯ ನಿರ್ಧಾರಗಳನ್ನು ಈಗಾಗಲೇ ಹಲವಾರು ಭಾರಿ ಕೈಗೊಂಡಿದ್ದು, ಅವುಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿರುತ್ತದೆ.

bengaluru bengaluru

ಆಯೋಗದ ಕಾರ್ಯದರ್ಶಿಯವರು ಆಯೋಗದ ಅನುಮೋದನೆ ಇಲ್ಲದೇ, ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಅಭಿಯಂತರರು(ಸಿವಿಲ್) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದರು.

ಆಯೋಗವು ಅನುಮೋದನೆ ನೀಡುವ ಮೊದಲೇ ಆಯೋಗದ ಗಣಕ ಕೇಂದ್ರಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಗುತ್ತಿಗೆ ಆಧಾರದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಜಾರಿ ಮಾಡಿ ನೇಮಕಮಾಡಿಕೊಂಡಿದ್ದರು.

ಆಯೋಗದ ವ್ಯಾಪ್ತಿಯ ವಿಷಯಗಳ ಬಗ್ಗೆ ಆಯೋಗದ ಅನುಮತಿಯಿಲ್ಲದೇ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಯೂಟ್ಯೂಟ್‍ಗಳಲ್ಲಿ, ಇಂತಹ ದಿನ ಸಂವಾದ ಇದೆ ಎಂದು ಪತ್ರಿಕೆಗಳಲ್ಲಿ ದಿನಾಂಕ ಸಹಿತ ಮಾಹಿತಿ ನೀಡಿ ಅಭ್ಯರ್ಥಿಗಳೊಂದಿಗೆ, ಸಂವಾದ ಮಾಡಿದ್ದರು.

ಆಯೋಗದ ಅನುಮೋದನೆ ಇಲ್ಲದೇ ಹೆಚ್ಚುವರಿ ಪಟ್ಟಿಗಳನ್ನು ವೆಬ್ ಸೈಟ್‍ನಲ್ಲಿ ಪ್ರಕಟಿಸಿದ್ದರು. ಆಯೋಗದ ಅಧ್ಯಕ್ಷರೊಡನೆ ಸಮಾಲೋಚಿಸದೇ ಆಯೋಗದ ವಿಶೇಷ ಸಭೆಗಳನ್ನು ನಿಗದಿಪಡಿಸಿದ್ದರು.

ಆಯೋಗದ ಅನುಮೋದನೆ ಇಲ್ಲದೇ ಸ್ವ ಇಚ್ಛೆಯಿಂದ ತನಗೆ ಬೇಕಾದ ಹಾಗೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. (ಎ.ಸಿ.ಎಫ್ ಹುದ್ದೆಗಳ ಸಂದರ್ಶನ ಸಮಿತಿ ರಚನೆ ಕುರಿತು ಇಲಾಖೆಯವರು ಅವರ ಪತ್ರದಲ್ಲಿ ತಿಳಿಸಿದ್ದ ಅಂಶಗಳು, ಸರಿಯಾಗಿವೆ ಎಂದು ಆಯೋಗದ ನಿರ್ಣಯಕ್ಕೆ ವಿರುದ್ಧವಾಗಿ ಇಲಾಖೆಗೆ ಪತ್ರ ಒರೆದಿದ್ದರು)

ಅಭ್ಯರ್ಥಿಗಳು ಸ್ಪರ್ಧಾತ್ಮಕ ಗಳಿಸಿದ ಅಂಕಗಳನ್ನು ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವಾಗ ಘೋಷಿಸಬೇಕೆಂದು 2021ರ ನಿಯಮಗಳಲ್ಲಿ ತಿಳಿಸಿದ್ದರೂ, ಆಯೋಗದ ಅನುಮತಿ ಇಲ್ಲದೇ ಅರ್ಹತಾ ಪಟ್ಟಿಯನ್ನು ಪ್ರಕಟಿಸುವಾಗಲೇ ಅಂಕಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದರು.

ಆಯೋಗದ ವೆಬ್‍ಸೈಟ್ ಅನ್ನು ಅವರದೇ ಎಂಬಂತೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು. ಇದರಲ್ಲಿ ಎಲ್ಲದಕ್ಕೂ ಆಯೋಗವೇ ಕಾರಣ ಎಂದು ಬಿಂಬಿಸುವಂತಹ ಅಂಶಗಳನ್ನು ನಮೂದಿಸುತ್ತಿರುವುದು. ಕೀ ಉತ್ತರಗಳನ್ನು ಪ್ರಕಟಿಸುವ ಮುಂಚೆ ಆಯೋಗದ ಗಮನಕ್ಕೆ ತರಬೇಕೆಂದು ಆಯೋಗದ ಸಭೆಯ ನಿರ್ಣಯವಿದ್ದರೂ ಸಹ ಆಯೋಗದ ಗಮನಕ್ಕೆ ತರದೇ ಕೀ ಉತ್ತರಗಳನ್ನು ಪ್ರಕಟಿಸುತ್ತಿರುವುದು.

ಅಯೋಗಕ್ಕೆ ಸಲ್ಲಿಸುವ ಕಡತ ಮತ್ತು ಟಿಪ್ಪಣಿಗಳಲ್ಲಿ ಸಭ್ಯ ಭಾμÉಯನ್ನು ಬಳಸದೇ ಇರುವದು. ಆಯೋಗವು ಪಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅನುಮೋದಿಸದಿದ್ದರೆ ಮೆರಿಟ್ ಪಟ್ಟಿಯನ್ನೇ ಇಲಾಖೆಗೆ ರವಾನಿಸುತ್ತೇನೆಂದು ಮತ್ತು ಆಯ್ಕೆಪಟ್ಟಿಯನ್ನು ಅನುಮೋದಿಸದಿದ್ದರೆ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೇ ಇಲಾಖೆಗಳಿಗೆ ರವಾನಿಸುತ್ತೇನೆಂದು ಆಯೋಗಕ್ಕೆ ಒತ್ತಡ ಹೇರುವುದು.

ಹೆಚ್ಚುವರಿ ಪಟ್ಟಿಗೆ ಸಂಬಂಧಿಸಿದಂತೆ ಕಾಲಾವಧಿ ವಿಸ್ತರಣೆ ಮಾಡಲು ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ಆಯೋಗವು ಸೂಚಿಸಿದರೆ, ಹೆಚ್ಚುವರಿ ಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲು ಹಾಗೂ ಪ್ರಕಟಿಸಲು ಕಾಲಾವಧಿ ವಿಸ್ತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ನಮೂದಿಸಿರುವುದು.

ಆಯೋಗಕ್ಕೆ ಸಂಬಂಧಿಸಿದ ವಿಷಯಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಈ ವಿಷಯಗಳನ್ನು ಪತ್ರಿಕೆಗಳಿಗೆ ನೀಡುತ್ತಿರುವ ಮೂಲದ ಬಗ್ಗೆ ಮಾಹಿತಿ ಪಡೆಯಲು ಕಾರ್ಯದರ್ಶಿಯವರಿಗೆ ತಿಳಿಸಿದ್ದರೂ ಅವರು ಇದರ ಬಗ್ಗೆ ಸಕಾರಾತ್ಮಕ ಉತ್ತರ ನೀಡಿರುವುದಿಲ್ಲ. ಆಯೋಗದ ಸಭೆಗಳ ನಿರ್ಣಯಗಳನ್ನು ಆಗೌರವಿಸುವುದು.

ಮೇಲೆ ವಿವರಿಸಿದ ಕಾರಣಗಳಿಂದಾಗಿ ಆಯೋಗದ ಕಾರ್ಯದರ್ಶಿಯವರಿಗೆ ದಿನಾಂಕ: 28-04-2023 ರಂದು ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ನಂತರದಲ್ಲೂ ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡಿಲ್ಲದ ಕಾರಣದಿಂದ ಅವರಿಗೆ ಸೂಕ್ತ ತಿಳುವಳಿಕೆ ನೀಡಲು ಕೋರಿ ಮುಖ್ಯ ಕಾರ್ಯದರ್ಶಿಯವರಿಗೆ ದಿನಾಂಕ:17-05-2023 ರಂದು ಪತ್ರ ಬರೆಯಲಾಗಿತ್ತು. ಅಲ್ಲದೇ, ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು.

ಆನಂತರ, ಮಾನ್ಯ ಮುಖ್ಯ ಮಂತ್ರಿಗಳಿಗೂ ಪತ್ರ ಬರೆದು ಮಾಹಿತಿ ನೀಡಲಾಗಿತ್ತು. ನಂತರ ಮಾನ್ಯ ಮುಖ್ಯ ಮಂತ್ರಿಗಳನ್ನೂ ದಿನಾಂಕ:03-06-2023 ರಂದು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಇμÉ್ಟಲ್ಲಾ ಬೆಳವಣಿಗೆಗಳಾದರೂ ಆಯೋಗದ ಕಾರ್ಯದರ್ಶಿಯವರು ತಮ್ಮ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನೂ ಮುಡಿಕೊಂಡಿರುವುದಿಲ್ಲ ಈ ಹಿಂದೆಯೂ ಎರಡು ಬಾರಿ ಟೆಂಡರ್ ಆಹ್ವಾನಿಸಿರುವುದು ಅವರ ದಿನಾಂಕ:28-08-2023ರ ಟಿಪ್ಪಣಿಯಿಂದ ತಿಳಿದು ಬಂದಿರುತ್ತದೆ. ಈ ವಿಷಯಗಳನ್ನು ಅವರು ಆಯೋಗದ ಗಮನಕ್ಕೆ ತಾರದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿರುತ್ತಾರೆ.

ಈಗ ಆಹ್ವಾನಿಸಿರುವ ರೂ.45 ಕೋಟಿಗಳ ಟೆಂಡರ್ ಬಗ್ಗೆ M/s Exergy Solutions ಎಂಬ ಸಂಸ್ಥೆಯವರು ಕೆಲವು ಆಕ್ಷೇಪಣೆಗಳನ್ನು ಸಲ್ಲಿಸಿದ ಮೇಲೆ ಈ ಹಿಂದೆ ಮತ್ತು ಈಗ ಟೆಂಡರ್ ಆಹ್ವಾನಿಸಿರುವ ಬಗ್ಗೆ ದಿ:28-08-2023ರ ಅವರ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಈ ರೀತಿ ಆಕ್ಷೇಪಣೆಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಸದರಿ ಟೆಂಡರ್ ಪ್ರಕ್ರಿಯೆಯನ್ನು ಆಯೋಗವು ಮುಂದಿನ ಸೂಚನೆ ನೀಡುವವರೆಗೂ ತಡೆಹಿಡಿಯಲು ಕಾರ್ಯದರ್ಶಿಯವರಿಗೆ ಟಿಪ್ಪಣಿ ಮೂಲಕ ಸೂಚಿಲಾಗಿದೆ.

ಮುಂದುವರೆದು, ಕಾರ್ಯದರ್ಶಿಯವರ ಟಿಪ್ಪಣಿಯನ್ನು ಪರಿಶೀಲಿಸಲಾಗುತ್ತಿದ್ದು, ಇನ್ನೂ ಕೆಲವು ಅಂಶಗಳ ಬಗ್ಗೆ ಕಾರ್ಯದರ್ಶಿಯವರಿಂದ ಮಾಹಿತಿ ಪಡೆಯಬೇಕಿದ್ದು, ಎಲ್ಲಾ ಮಾಹಿತಿಗಳು ಸ್ವೀಕೃತವಾದ ನಂತರ ಅವುಗಳನ್ನು ಗಮನಿಸಿ ನಂತರ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಕಾರ್ಯದರ್ಶಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಟೆಂಡರ್ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಕಟ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮೂಲ: ಕರ್ನಾಟಕ ಡಿಐಪಿಆರ್, ವಾರ್ತಾ ಇಲಾಖೆ


bengaluru

LEAVE A REPLY

Please enter your comment!
Please enter your name here