Home Uncategorized Moto X40: ರಿಲೀಸ್​ಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ ಮೋಟೋ X40 ಸ್ಮಾರ್ಟ್‌ಫೋನ್‌: ಏನಿದರ ವಿಶೇಷತೆ?

Moto X40: ರಿಲೀಸ್​ಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ ಮೋಟೋ X40 ಸ್ಮಾರ್ಟ್‌ಫೋನ್‌: ಏನಿದರ ವಿಶೇಷತೆ?

9
0

ಮೋಟೋರೊಲಾ (Motorola) ಕಂಪನಿ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್​ಗಳನ್ನು ತಯಾರು ಮಾಡುತ್ತಿರುವ ಮೋಟೋ ಕಂಪನಿಯ ಪೋನ್​ಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ 200 ಮೆಗಾಫಿಕ್ಸೆಲ್​ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್​ಫೋನ್ (Smartphone) ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕಂಪನಿ ಇದೀಗ ತನ್ನ ಹೊಸ ಮೋಟೋ ಎಕ್ಸ್ 40 (Moto X40) ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಈ ಫೋನ್ ಇದೇ ಡಿಸೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ ಕೂಡ ಸೋರಿಕೆಯಾಗಿದೆ. ಲೀಕ್ ಆಗಿರುವ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಮೋಟೋ X40 ಸ್ಮಾರ್ಟ್‌ಫೋನ್‌ 3.0GHz ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆಯಂತೆ. 8GB RAM ಮತ್ತು 128 GB, 12GB RAM ಮತ್ತು 256GB ಹಾಗೂ 18GB RAM ಮತ್ತು 512GB ಹೀಗೆ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಲಿದೆ. ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 165Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದು ಟಚ್ ಮಾಡುವಾಗ ಅತ್ಯಂತ ಮೃದುವಾದ ಅನುಭವ ನೀಡುತ್ತದೆ.

Facebook: ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ತಪ್ಪಿಯೂ ಹೀಗೆ ಮಾಡಬೇಡಿ

ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಈ ಫೋನ್​ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಇದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ ಕೂಡ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಬರೋಬ್ಬರಿ 60 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆಯಂತೆ.

ಮೋಟೋ X40 ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68W ವೇಗದ ಚಾರ್ಜಿಂಗ್ ಅನ್ನು ಕೂಡ ಬೆಂಬಲಿಸುತ್ತದೆ. ಒಂದು ಗಂಟೆಯ ಒಳಗೆ 0-100% ಚಾರ್ಜ್ ಫುಲ್ ಮಾಡುತ್ತದೆ. ನಿಖರವಾದ ಸಮಯ ಬಹಿರಂಗಗೊಂಡಿಲ್ಲ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ, ಮಾಸ್‌ ಸ್ಟೋರೇಜ್‌ ಡಿವೈಸ್‌ ಬೆಂಬಲಿಸಲಿದೆ. ಈ ಫೋನಿನ ಬೆಲೆ ಇನ್ನಷ್ಟೆ ಹೊರಬರಬೇಕಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here