Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • DK Shivakumar | ಮಿಸ್ಟರ್ ಡಿ.ಕೆ.ಶಿವಕುಮಾರ್… ನಿಮ್ಮ ಕನಸು ಈಡೇರುವುದಿಲ್ಲ
  • ಬೆಂಗಳೂರು ನಗರ

DK Shivakumar | ಮಿಸ್ಟರ್ ಡಿ.ಕೆ.ಶಿವಕುಮಾರ್… ನಿಮ್ಮ ಕನಸು ಈಡೇರುವುದಿಲ್ಲ

Vighnesh Pawar October 1, 2023 8:30 PM
Mr. DK Shivakumar... Your dream will not come true

Mr. DK Shivakumar... Your dream will not come true

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ
  • ಡಿಸಿಎಂ ಡಿಕೆಶಿ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಾಗ್ದಾಳಿ
  • ಮಿಸ್ಟರ್ ಡಿಕೆ ಶಿವಕುಮಾರ್ ಎಂದು ದೇವೇಗೌಡರ ಕಿಡಿ
  • ನಿಮ್ಮ ಕೆಟ್ಟ ರಾಜಕೀಯ. ಆಟ ನಡೆಯಲ್ಲ ಎಂದು ಆಕ್ರೋಶ
  • ಕುಮಾರಸ್ವಾಮಿ ಅವರು ಇವತ್ತು ಗಟ್ಟಿ ಸಂದೇಶ ನೀಡಿದ್ದಾರೆ*

ರಾಮನಗರ/ಬೆಂಗಳೂರು:

ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿಬಿಡುತ್ತೇನೆ. ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್… ನಿಮ್ಮ ಕನಸು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.

ಡಿಕೆ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿಯ ಕೇತಿಗಾನಹಳ್ಳಿಯ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಮಾತಿನುದ್ಧಕ್ಕೂ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಕುತಂತ್ರ ರೂಪಿಸಿರುವ ಡಿಕೆಶಿ ವಿರುದ್ಧ ಮಾಜಿ ಪ್ರಧಾನಿಗಳು ಹರಿಹಾಯ್ದರಲ್ಲದೆ, ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ. ಇವತ್ತು ಕುಮಾರಸ್ವಾಮಿ ಅವರು ಗಟ್ಟಿಯಾದ ಸಂದೇಶ ಕೊಟ್ಟಿದ್ದಾರೆ ಎಂದರು.

ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ನುಡಿದರು ಮಾಜಿ ಪ್ರಧಾನಿಗಳು.

ಬಹಳ ಆಕ್ರೋಶಭರಿತರಾಗಿ ಭಾಷಣ ಮಾಡಿದ ಮಾಜಿ ಪ್ರಧಾನಿಗಳು, ನಿಮ್ಮನ್ನು (ಕಾರ್ಯಕರ್ತರು) ನಂಬಿದ್ದೇನೆ. ಪಕ್ಷದ ಬೆಳೆವಣಿಗೆಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿ ಅವರನ್ನು ಭೇಟಿ ಮಾಡಿದ್ದೆ. ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಿದೆ ಎಂದು ಹೇಳಿದರು.

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ. ಆದರೆ, ಕಾಂಗ್ರೆಸ್ ನವರು ರಾಜಕೀಯವನ್ನು ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ದಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಅವರು ಟೀಕಾಪ್ರಹಾರ ನಡೆಸಿದರು.

ರಾಜಕೀಯವಾಗಿ ನನ್ನ ಜತೆ ಇದ್ದ ಅನೇಕರು ಐಶ್ವರ್ಯ ಹುಡುಕಿಕೊಂಡು ಎಲ್ಲೆಲ್ಲೋ ಹೋದರು, ಬೇರೆ ಬೇರೆ ಪಕ್ಷಗಳಿಗೆ ಹೊರಟು ಹೋದರು. ನಾನು ಇಲ್ಲಿಯೇ ಇದ್ದೇನೆ. ನನಗೇನೂ ಬೇಸರ ಇಲ್ಲ. ಈ ಇಳಿ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುತ್ತಿದ್ದೇನೆ ಎಂದರು ಅವರು.

ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲಾಗಲ್ಲ.
ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇದೆ, ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ಅವರು ಹೇಳಿದರು.

ಜೀವ ಲೆಕ್ಕಿಸದೆ ಕಾಶ್ಮೀರಕ್ಕೆ ಹೋದೆ:

ದೆಹಲಿಯಲ್ಲಿ ಕಾಂಗ್ರೆಸ್ ನವರು ಅನೇಕ ವರ್ಷ ಆಡಳಿತ ನಡೆದರು. ಒಮ್ಮೆಯೂ ಯಾವ ಪ್ರಧಾನಿಯೂ ಕಾಶ್ಮೀರದ ಕಡೆ ತಲೆ ಹಾಕಿ ಮಲಗಲಿಲ್ಲ. ಕೊನೆಗೆ ನಾನು ಹೋದೆ. ಅಧಿಕಾರಿಗಳು ಬೇಡವೇ ಬೇಡ ಎಂದರು. ಭಯೋತ್ಪಾದಕರು ಹೊಡೆದು ಹಾಕುತ್ತಾರೆ ಎಂದು ಎಷ್ಟೋ ಹೇಳಲು ಪ್ರಯತ್ನ ಮಾಡಿದರು. ಆದರೂ ನಾನು ಜೀವ ಲೆಕ್ಕಿಸದೆ ನಾನು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದೆ. ದೇಶದ ಹಿತಾಸಕ್ತಿ ನನಗೆ ಮುಖ್ಯವಾಗಿತ್ತು. ಆ ರಾಜ್ಯದಲ್ಲಿ ಚುನಾವಣೆ ನಡೆಸಿದೆ. 12 ವರ್ಷಗಳ ನಂತರ ಅಲ್ಲಿ ಚುನಾವಣೆ ನಡೆದು ಸರಕಾರ ಅಧಿಕಾರಕ್ಕೆ ಬಂತು. ಲಂಡನ್ ನಲ್ಲಿ ಇದ್ದ ಫಾರೂಖ್ ಅಬ್ದುಲ್ಲಾ ಅವರು ಬಂದು ಚುನಾವಣೆ ಗೆದ್ದು ಸಿಎಂ ಆದರು. ಇದು ನಾನು ಮಾಡಿದ ತಪ್ಪೇ? ಎಂದು ಮಾಜಿ ಪ್ರಧಾನಿಗಳು ಪ್ರಶ್ನೆ ಮಾಡಿದರು.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ, ನಾನು ಏನು ಮಾಡಿದೀನಿ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಅವರು ಸವಾಲು ಹಾಕಿದರು.

ಪಕ್ಷವನ್ನು ಕಟ್ಟುತ್ತೇನೆ, ಈ ಜೀವ ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ, ಎಲ್ಲ ಕಡೆ ಹೋರಾಟ ಮಾಡುತ್ತೇನೆ ನನ್ನ ಆರೋಗ್ಯವನ್ನು ಲೆಕ್ಕ ಮಾಡುವುದಿಲ್ಲ ಎಂದ ಅವರು; ಉತ್ತರ ಕರ್ನಾಟಕದ ಜನತೆಗೆ ಒಳ್ಳೆಯದು ಮಾಡಿದ್ದೇನೆ. ಶಿವಶರಣರ ಕೈಲಿ ಅನ್ನ ಉಂಡಿದ್ದೇನೆ. ಆ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಗದ್ಗದಿತರಾರು ಅವರು.

ಇಬ್ರಾಹಿಂ ಬಗ್ಗೆ ಲಘುವಾಗಿ ಮಾತನಾಡಲ್ಲ:

ಇಬ್ರಾಹಿಂ ಬಗ್ಗೆ ನಾನು ಲಘುವಾಗಿ ಮಾತನಾಡಲಿಲ್ಲ ಎನ್ನುತ್ತಲೇ, ಭದ್ರಾವತಿ ದಿನಗಳನ್ನು ನೆನಪು ಮಾಡಿಕೊಂಡರು ಗೌಡರು. ಒಂದು ಸನ್ಮಾನಕ್ಕೆ ಎಂದು ಅಲ್ಲಿಗೆ ಹೋದೆ, ಅಲ್ಲಿ ನನಗೆ ಸನ್ಮಾನದ ಜತೆ ಇಬ್ರಾಹಿಂ ಅವರು ಸಿಕ್ಕಿದರು, ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ. ಈ ಸಭೆಗೆ ಅವರನ್ನು ಕರೆ ತರಲು ತಿಪ್ಪೇಸ್ವಾಮಿ ಅವರು ಬಹಳ ಪ್ರಯತ್ನಪಟ್ಟರು ಎಂದು ಅವರು ಹೇಳಿದರು.

ಜೀವನ ಪರ್ಯಂತ ಒಳ್ಳೆಯ ಬದುಕಿಗೆ ಗಾರಂಟಿ ಕೊಡುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದು ಬಹಳ ನೋವುಂಟು ಮಾಡಿದೆ. ಈ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳಿಂದ ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಉತ್ತಮ ಬದುಕಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ನಾವು ನಿರಾಶೆ ಪಡಬೇಕಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

About the Author

Vighnesh Pawar

Subscriber

View All Posts

Post navigation

Previous: JDS BJP Alliance | ಮೈತ್ರಿಯಿಂದ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ಐದು ವರ್ಷಗಳಲ್ಲಿ ಪರಿಹಾರ ಪಡೆಯದಿದ್ದರೆ ರಾಜಕೀಯ ನಿವೃತ್ತಿ
Next: SM Krishna on Cauvery Water Dispute | ಕೇಂದ್ರ ಸರಕಾರವು ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ

Related Stories

ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

The Bengaluru Live November 23, 2026 1:26 PM
ನೇರಳೆ ಬಣ್ಣದ ಅಂಗಿ ಧರಿಸಿ ಕೈಕಟ್ಟಿ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

The Bengaluru Live November 23, 2026 12:10 PM
ತ್ಯಾಜ್ಯ ಮತ್ತು ಅವಶೇಷಗಳ ರಾಶಿಯ ಪಕ್ಕದ ರಸ್ತೆಯಲ್ಲಿ ಪರಿಶೀಲನೆಯ ವೇಳೆ ನಡೆದು ಹೋಗುತ್ತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ

The Bengaluru Live November 22, 2026 6:00 PM

Latest Post

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ ಶಿವಮೊಗ್ಗದಲ್ಲಿ ಬಿಜೆಪಿ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ಕರ್ನಾಟಕ
  • ರಾಜಕೀಯ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ

November 23, 2026 2:29 PM
ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 1:26 PM
ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ ಸಚಿವರ ಗೃಹ ಕಚೇರಿಯ ಹೊರಗೆ ಬಿಸಿಯೂಟ ನೌಕರರ ಯೂನಿಯನ್ ನಿಯೋಗದ ಸದಸ್ಯರೊಂದಿಗೆ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಶಿಕ್ಷಣ

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

November 23, 2026 1:21 PM
ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ ನೇರಳೆ ಬಣ್ಣದ ಅಂಗಿ ಧರಿಸಿ ಕೈಕಟ್ಟಿ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

November 23, 2026 12:10 PM
ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಭಾರತ ಮತ್ತು ಜಪಾನ್ ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್

November 23, 2026 11:25 AM
ಗುರುಗಾಂವ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಭಾಗಿ ಗುರುಗಾಂವ್ ಕನ್ನಡ ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪದಾಧಿಕಾರಿಗಳಿಂದ ಸ್ಮರಣಿಕೆ ಸ್ವೀಕರಿಸುತ್ತಿರುವ ರಾಜ್ಯಪಾಲರಾದ ಡಾ. ಸುಧಾ ಯಾದವ್
  • ಕರ್ನಾಟಕ

ಗುರುಗಾಂವ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಭಾಗಿ

November 23, 2026 10:09 AM

ನೀವು ತಪ್ಪಿಸಿಕೊಂಡಿರಬಹುದು

ಶಿವಮೊಗ್ಗದಲ್ಲಿ ಬಿಜೆಪಿ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ಕರ್ನಾಟಕ
  • ರಾಜಕೀಯ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ

The Bengaluru Live November 23, 2026 2:29 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

The Bengaluru Live November 23, 2026 1:26 PM
ಸಚಿವರ ಗೃಹ ಕಚೇರಿಯ ಹೊರಗೆ ಬಿಸಿಯೂಟ ನೌಕರರ ಯೂನಿಯನ್ ನಿಯೋಗದ ಸದಸ್ಯರೊಂದಿಗೆ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಶಿಕ್ಷಣ

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

The Bengaluru Live November 23, 2026 1:21 PM
ನೇರಳೆ ಬಣ್ಣದ ಅಂಗಿ ಧರಿಸಿ ಕೈಕಟ್ಟಿ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

The Bengaluru Live November 23, 2026 12:10 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ
  • ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ
  • ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ
  • ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ
©Copyright 2025 The Bengaluru Live All rights reserved. | MoreNews by AF themes.