Home Uncategorized Multibagger Penny Stocks: ಒಂದೇ ವರ್ಷದಲ್ಲಿ ಶೇ 2500ರಷ್ಟು ರಿಟರ್ನ್ಸ್ ಗಳಿಸಿಕೊಟ್ಟಿವೆ ಈ ಷೇರುಗಳು

Multibagger Penny Stocks: ಒಂದೇ ವರ್ಷದಲ್ಲಿ ಶೇ 2500ರಷ್ಟು ರಿಟರ್ನ್ಸ್ ಗಳಿಸಿಕೊಟ್ಟಿವೆ ಈ ಷೇರುಗಳು

10
0

ಕೇವಲ ಒಂದು ವರ್ಷದ ಅವಧಿಯಲ್ಲಿ ಆರು ಪೆನ್ನಿ ಷೇರುಗಳು (Penny Stock) ಹೂಡಿಕೆದಾರರಿಗೆ ಗಮನಾರ್ಹ ಮಟ್ಟದಲ್ಲಿ ಗಳಿಕೆ ತಂದುಕೊಟ್ಟಿವೆ. 2022ರಲ್ಲಿ ಶೇಕಡಾ 2500ರಷ್ಟು ರಿಟರ್ನ್ಸ್ (Returns) ದೊರಕಿಸಿವೆ. ಸೊನಾಲ್ ಅಧಿಸೀವ್ಸ್ ಲಿಮಿಟೆಡ್, ಕೈಸರ್ ಕಾರ್ಪೊರೇಷನ್, ಹೆಮಂಗ್ ರಿಸೋರ್ಸಸ್, ಅಲಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್, ಕೆಬಿಎಸ್ ಇಂಡಿಯಾ ಲಿಮಿಟೆಡ್, ಬೀಕೆ ನಿರ್ಯಾತ್ ಲಿಮಿಟೆಡ್ ಷೇರುಗಳು ಕಡಿಮೆ ಬಂಡವಾಳದೊಂದಿಗೆ ಉತ್ತಮ ಗಳಿಕೆ ತಂದುಕೊಡುತ್ತಿವೆ ಎಂದು ‘ಗುಡ್​ರಿಟರ್ನ್ಸ್’ ವರದಿ ಉಲ್ಲೇಖಿಸಿದೆ. ಈ ಆರು ಷೇರುಗಳ ವಿವರ ಇಲ್ಲಿದೆ.

ಕೈಸರ್ ಕಾರ್ಪೊರೇಷನ್

2022ರ ಜನವರಿಯಲ್ಲಿ ಕೈಸರ್ ಕಾರ್ಪೊರೇಷನ್ ಷೇರಿನ ಬೆಲೆ 2.92 ರೂ. ಆಗಿತ್ತು. ಈ ಹಿಂದಿನ ದಿನದ ವಹಿವಾಟಿನ ಕೊನೆಗೆ 56 ರೂ.ನಲ್ಲಿ ವಹಿವಾಟು ನಡೆಸಿದೆ. ಜನವರಿಯಿಂದ ಡಿಸೆಂಬರ್​ ವೇಳೆಗೆ ಶೇಕಡಾ 2,700ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ 297 ಕೋಟಿ ರೂ. ಆಗಿದೆ. ಇದು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಲಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್

ಅಲಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್ ಷೇರು ಹಿಂದಿನ ದಿನದ ವಹಿವಾಟಿನಲ್ಲಿ 44 ರೂ.ನಲ್ಲಿ ವಹಿವಾಟು ನಡೆಸಿದೆ. ದಿನದ ಟ್ರೇಡಿಂಗ್​ನಲ್ಲಿ ಶೇಕಡಾ 1.65 ಕುಸಿದಿದೆ. ಆದಾಗ್ಯೂ ಜನವರಿಯಿಂದ ಈವರೆಗೆ ಶೇಕಡಾ 2100ರ ಗಳಿಕೆ ತಂದುಕೊಟ್ಟಿದೆ. ಜನವರಿಯಲ್ಲಿ ಷೇರು ಮೌಲ್ಯ 2.84 ರೂ. ಆಗಿತ್ತು. ಕಂಪನಿಯ ಮಾರುಕಟ್ಟೆ ಬಂಡವಾಳ 514 ಕೋಟಿ ರೂ. ಇದೆ.

ಹೆಮಂಗ್ ರಿಸೋರ್ಸಸ್ ಲಿಮಿಟೆಡ್

ಹೆಮಂಗ್ ರಿಸೋರ್ಸಸ್ ಲಿಮಿಟೆಡ್ ಷೇರು ಮೌಲ್ಯ ಜನವರಿಯಲ್ಲಿ 3 ರೂ. ಇತ್ತು. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿ 53 ರೂ.ನಲ್ಲಿ ವಹಿವಾಟು ನಡೆಸಿದೆ. ಒಟ್ಟಾರೆಯಾಗಿ ಹೂಡಿಕೆದಾರರಿಗೆ ಶೇಕಡಾ 1666ರ ರಿಟರ್ನ್ಸ್ ತಂದುಕೊಟ್ಟಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 70 ಕೋಟಿ ರೂ. ಆಗಿದೆ.

ಇದನ್ನೂ ಓದಿ: Banking Stocks: ಒಂದೇ ತಿಂಗಳಲ್ಲಿ ಶೇ 122ರವರೆಗೆ ಗಳಿಕೆ ದಾಖಲಿಸಿವೆ ಈ ಬ್ಯಾಂಕಿಂಗ್ ಷೇರುಗಳು

ಸೊನಾಲ್ ಅಧಿಸೀವ್ಸ್ ಲಿಮಿಟೆಡ್

ಸೊನಾಲ್ ಅಧಿಸೀವ್ಸ್ ಲಿಮಿಟೆಡ್ ಷೇರು ಕಳೆದ ಒಂದು ವರ್ಷದಲ್ಲಿ ಶೇಕಡಾ 1273ರಷ್ಟು ಗಳಿಕೆ ದಾಖಲಿಸಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಶೇಕಡಾ 4.97ರಷ್ಟು ಕುಸಿದು 110 ರೂ.ನಲ್ಲಿ ವಹಿವಾಟು ನಡೆಸಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 67 ಕೋಟಿ ರೂ. ಇದೆ. ಜನವರಿ 3ರಂದು ಷೇರು ಮೌಲ್ಯ 9.80 ರೂ. ಇತ್ತು. ಕಂಪನಿಯು ಪ್ಲಾಸ್ಟಿಕ್ ಕ್ಷೇತ್ರದ ಉದ್ಯಮದಲ್ಲಿ ತೊಡಗಿದೆ.

ಕೆಬಿಎಸ್ ಇಂಡಿಯಾ ಲಿಮಿಟೆಡ್

ಹಿಂದಿನ ದಿನ ಇಂಟ್ರಾ ಡೇ ಸೆಷನ್​​ನಲ್ಲಿ ಶೇಕಡಾ 5ರಷ್ಟು ಕುಸಿತ ಕಂಡಿರುವ ಕೆಬಿಎಸ್ ಇಂಡಿಯಾ ಲಿಮಿಟೆಡ್ ಷೇರು 116 ರೂ.ನಲ್ಲಿ ವಹಿವಾಟು ನಡೆಸಿದೆ. ಒಟ್ಟಾರೆಯಾಗಿ ವರ್ಷದ ಅವಧಿಯಲ್ಲಿ ಶೇಕಡಾ 1188ರ ಗಳಿಕೆ ತಂದುಕೊಟ್ಟಿದೆ. ಜನವರಿ 3ರಂದು ಷೇರು ಮೌಲ್ಯ 9 ರೂ. ಇತ್ತು. ಕಂಪನಿಯು ಹಣಕಾಸು ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೀಕೆ ನಿರ್ಯಾತ್ ಲಿಮಿಟೆಡ್

ಬೀಕೆ ನಿರ್ಯಾತ್ ಲಿಮಿಟೆಡ್ ಕಂಪನಿಯ ಷೇರು ಮೌಲ್ಯ ಹಿಂದಿನ ದಿನದ ವಹಿವಾಟಿನ ಕೊನೆಯಲ್ಲಿ 81.30 ರೂ. ಆಗಿತ್ತು. ಇಂಟ್ರಾಡೇ ಸೆಷನ್​​ನಲ್ಲಿ ಶೇಕಡಾ 4.70 ಗಳಿಕೆ ದಾಖಲಿಸಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 69 ಕೋಟಿ ರೂ. ಆಗಿದೆ. ಜನವರಿ 5ರಂದು ಕಂಪನಿಯ ಷೇರು ಮೌಲ್ಯ 7 ರೂ. ಆಗಿತ್ತು. ಶೇಕಡಾ 885ರ ಗಳಿಕೆ ದಾಖಲಿಸಿದೆ. ಕಂಪನಿಯು ಟ್ರೇಡಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

(ಷೇರುಪೇಟೆಯಲ್ಲಿ ಮಾಡುವ ಹೂಡಿಕೆಗಳು ಮಾರುಕಟ್ಟೆ ರಿಸ್ಕ್​​ಗಳಿಗೆ ಕಾರಣವಾಗುವುದರಿಂದ ಹೂಡಿಕೆ ಮಾಡುವ ಮುನ್ನ ನಿಮ್ಮ ಹಣಕಾಸು ಸಲಹೆಗಾರರ ಅಭಿಪ್ರಾಯ ಕೇಳಿಕೊಳ್ಳುವುದು ಉತ್ತಮ)

LEAVE A REPLY

Please enter your comment!
Please enter your name here