Home ಬೆಂಗಳೂರು ನಗರ ಡಿಸೆಂಬರ್ 31ರ ವರೆಗೆ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್

ಡಿಸೆಂಬರ್ 31ರ ವರೆಗೆ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್

250
0
Peenya Elevated FlyOver closed due to repair until December 31
Pic Source: https://publictv.in/
Advertisement
bengaluru

ಬೆಂಗಳೂರು:

ಮುಂದಿನ ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್​ನ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ, ಫ್ಲೈ ಓವರ್​ಗೆ ಅಳವಡಿಸಿರುವ ಕೇಬಲ್ ದುರಸ್ತಿ ಕಾರಣದಿಂದ ಒಂದು ವಾರ ರಸ್ತೆ ಬಂದ್ ಆಗಿರಲಿದೆ. ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.

ಫ್ಲೈ ಓವರ್ ದುರಸ್ತಿ ಹಿನ್ನಲೆ ಎರಡು ಬದಿ ಸಂಚಾರ ನಿರ್ಬಂಧಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಸೂಚನೆ ಮೇರೆಗೆ ಒಂದು ವಾರ ಫ್ಲೈ ಓವರ್​ನಲ್ಲಿ ವಾಹನ ಸಂಚಾರ ನಿರ್ಬಂಧ ಆಗಿರಲಿದೆ. ಇಂದಿನಿಂದ ಡಿಸೆಂಬರ್ 31ರ ವರೆಗೆ ಫ್ಲೈ ಓವರ್ ಬಂದ್ ಆಗಿರಲಿದೆ. ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಫ್ಲೈ ಓವರ್ ಬಂದ್ ಹಿನ್ನಲೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

Peenya Elevated FlyOver closed due to repair until December 31

ತುಮಕೂರು ಕಡೆಯಿಂದ ಬರುವವರು ಮಾದಾವಾರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆ ಮೂಲಕ ನಗರ ಪ್ರವೇಶಕ್ಕೆ ಸೂಚನೆ ಕೊಡಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆ ಹೋಗುವವರು, ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚನೆ ಕೊಡಲಾಗಿದೆ. ಫ್ಲೈ ಓವರ್ ಬಂದ್ ಹಾಗೂ ಮಾರ್ಗ ಬದಲಾವಣೆ ಬಗ್ಗೆ ಸಂಚಾರಿ ಪೊಲೀಸರು ಪ್ರಕಟಣೆ‌ ನೀಡಿದ್ದಾರೆ.

bengaluru bengaluru

ಗೊರಗುಂಟೆ ಪಾಳ್ಯ ಹಾಗೂ ನೆಲಮಂಗಲ ಎಲಿವೇಟೆಡ್ ರಸ್ತೆಯಲ್ಲಿ ರೋಪ್‌‌ಗಳ ಬಿರುಕು ಕಂಡುಬಂದಿದ್ದು ಘಟನೆ ಸಂಭವಿಸಿದೆ. ಫ್ಲೈ‌ಓವರ್‌ನಲ್ಲಿ ರೋಪ್‌ಗಳದ್ದೆ ಮಹತ್ವದ ಪಾತ್ರ ಇರುತ್ತದೆ. ಇದೀಗ ಪಿಲ್ಲರ್ 101 ಹಾಗೂ 102 ರ ನಡುವಿನ ರೋಪ್‌ ಸಡಿಲ ಆಗಿದೆ. ತಕ್ಷಣ ಎಚ್ಚೆತ್ತ ಟೋಲ್ ಆಡಳಿತ ಮಂಡಳಿ ಫ್ಲೈ‌ಓವರ್ ಸಂಚಾರ ಬಂದ್ ಮಾಡಿದೆ. ಸರ್ವೀಸ್ ರಸ್ತೆಯಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ NHAI ಅಧಿಕಾರಿಗಳು ಹಾಗೂ ಪೀಣ್ಯ ಪೊಲೀಸರು ದೌಡಾಯಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here