ಬೆಂಗಳೂರು:
ರಾಜ್ಯದದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ರಂಜಾನ್ ಆಚರಣೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ಸಾರ್ವಜನಿಕವಾಗಿ ಇಫ್ತಾರ್ ಕೂಟ ನಡೆಸುವಂತಿಲ್ಲ.
ನಮಾಜ್‌ಗೂ ಐದು ನಿಮಿಷ ಮೊದಲಷ್ಟೇ ಮಸೀದಿ ತೆರೆಯುವುದು ಸೇರಿದಂತೆ ಸಭೆ, ಸಮಾರಂಭಗಳು ಹಾಗೂ ಹಬ್ಬಗಳ ಆಚರಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.
ಅಗತ್ಯವಿದ್ದರೆ ಜುಮ್ಮಾ ನಮಾಜ್‌ನ ಸಮಯದಲ್ಲಿ ಮೂರು ಪಾಳಿ ಮಾಡಿಕೊಳ್ಳಬಹುದಾಗಿದ್ದು, ಮಧ್ಯಾಹ್ನ 12.45ರಿಂದ 1.15, 1:30ರಿಂದ 2 ಗಂಟೆ ಹಾಗೂ 2:30 ರಿಂದ 3 ಗಂಟೆಯವರೆಗೆ ಒಟ್ಟು ಮೂರು ಪಾಳಿಯಲ್ಲಿ ಜುಮ್ಮಾ ನಮಾಜ್ ಮಾಡಬಹುದು ಎಂದು ತಿಳಿಸಲಾಗಿದೆ.
ಇಫ್ತಾರ್‌ಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್ ಮಾಡಬಹುದಾಗಿದೆ.