ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿಡಿ ಬಿಡುಗಡೆ ಮಾಡಿ ಕಬ್ಬನ್ ಪಾರ್ಕ್ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ಬೆಂಗಳೂರು:
ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ಸಿ.ಡಿ. ಬಿಡುಗಡೆಯಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿಡಿ ಬಿಡುಗಡೆ ಮಾಡಿದ್ದಾರೆ.
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿ.ಡಿ. ಬಿಡುಗಡೆ ಮಾಡಿದ್ದಾರೆ.ಇದಲ್ಲದೆ. ವೀಡಿಯೊ ತುಣುಕುಗಳು ಮತ್ತು ಹಲವಾರು ಆಡಿಯೊ ತುಣುಕುಗಳನ್ನು ಹಲವಾರು ಸ್ಥಳೀಯ ಕನ್ನಡ ಟಿವಿ ಚಾನೆಲ್‌ಗಳಿಗೆ ಬಿಡುಗಡೆ ಮಾಡಲಾಯಿತು.
ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಗ್ಗೆ ದಿನೇಶ್ ದೂರು ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ನಂತರ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸರ ಬಳಿ ಹೋಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿರ್ದೇಶನದಂತೆ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಯವತಿಯೊಬ್ಬರು ಎರಡು ತಿಂಗಳ ಹಿಂದೆ ಉದ್ಯೋಗ ಅರಸಿ ರಮೇಶ್ ಜಾರಕಿಹೊಳಿ ಅವರ ಬಳಿ ಬರುತ್ತಾರೆ. ಆಗ ಸಮಾಧಾನ ಪಡಿಸಿದ ರಮೇಶ್ ಜಾರಕಿಹೊಳಿ ಉದ್ಯೋಗ ನೀಡುವ ಭರವಸೆ ನೀಡುತ್ತಾರೆ. ಆದರೆ ಮುಂದೆ ಅವರು ಯವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇದನ್ನು ಅರಿತ ಯುವತಿ (ಸಂತ್ರಸ್ತೆ), ಗೌಪ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಅದಾದನಂತರ ಸಂತ್ರಸ್ತ ಯುವತಿಯು ನನ್ನನ್ನು ಸಂಪರ್ಕಿಸಿ, ಆರೋಪಿಯು ಪ್ರಭಾವಶಾಲಿಯಾಗಿದ್ದು, ನನಗೆ ಮತ್ತು ನನ್ನ ಕುಟುಂಬದವರಿಗೆ ಅವರನ್ನು ಎದುರಿಸಲು ಸಾಧ್ಯವಿಲ್ಲ. ಹಾಗಾಗಿ, ನೀವು ನೆರವು ನೀಡಬೇಕು. ನಿಮ್ಮ ಮೂಲಕ ಇದನ್ನು ಪೊಲೀಸರಿಗೆ ದೂರು ನೀಡುವಂತೆ ಮಾಡಬೇಕು ಎಂದು ನನ್ನನ್ನು ಭೇಟಿಯಾದರು. ಮತ್ತು ಆ ವೇಳೆ ಸದರಿ ಸಿ.ಡಿ. ಯನ್ನು ನನಗೆ ನೀಡಿದರು. ಅದರಂತೆ ನಾನು ನಿಮಗೆ (ಬೆಂಗಳೂರು ಪೊಲೀಸ್ ಕಮೀಷನರ್) ದೂರು ನೀಡುತ್ತಿದ್ದೇನೆ ಎಂದು ದೂರುದಾರರಾದ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಬಗ್ಗೆ ತನಿಖೆಗಾಗಿ ದೂರು ಸಲ್ಲಿಸಿದ್ದೇನೆ ಎಂದು ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದರು.