Home ಬೆಂಗಳೂರು ನಗರ Ramnagar: ಜ್ಯೂಸ್ ಎಂದು ಕೀಟನಾಶಕ ಕುಡಿದು 2 ವರ್ಷದ ಮಗು ದಾರುಣ ಸಾವು

Ramnagar: ಜ್ಯೂಸ್ ಎಂದು ಕೀಟನಾಶಕ ಕುಡಿದು 2 ವರ್ಷದ ಮಗು ದಾರುಣ ಸಾವು

5
0
Ramnagar: 2-year-old child died after drinking pesticide as juice
Ramnagar: 2-year-old child died after drinking pesticide as juice
Advertisement
bengaluru

ಬೆಂಗಳೂರು:

ಜ್ಯೂಸ್ ಎಂದು ಕೀಟನಾಶಕ ಕುಡಿದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ರೈತ ದಂಪತಿ ಹನುಮಂತ್ ಮತ್ತು ಪುಷ್ಪಾ ಅವರ ಏಕೈಕ ಪುತ್ರ ಹೆಚ್.ಯಶ್ವಿಕ್ ಮೃತ ಮಗು. ರೇಷ್ಮೆ ಹುಳುವಿನ ಗೂಡಿಗೆ ಸಿಂಪಡಿಸಿಲು ಮನೆಯಲ್ಲಿ ಇರಿಸಿದ್ದ ದ್ರಾವಕವನ್ನು ಜ್ಯೂಸ್ ಎಂದು ಕುಡಿದಿದೆ.

ಕೆಲವೇ ನಿಮಿಷಗಳಲ್ಲಿ ಮಗು ಹೊಟ್ಟೆ ನೋವೆಂದು ಅಳಲು ಆರಂಭಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದೆ. ಕೂಡಲೇ ಪೋಷಕರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

bengaluru bengaluru


bengaluru

LEAVE A REPLY

Please enter your comment!
Please enter your name here