Home Uncategorized Ranji Trophy: ದ್ವಿತೀಯ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಭರ್ಜರಿ ಆರಂಭ: 133 ರನ್​ಗಳ ಮುನ್ನಡೆ

Ranji Trophy: ದ್ವಿತೀಯ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಭರ್ಜರಿ ಆರಂಭ: 133 ರನ್​ಗಳ ಮುನ್ನಡೆ

28
0
Advertisement
bengaluru

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ (Ranji Trophy) ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಕರ್ನಾಟಕ (Karnataka vs Services) ತಂಡ ಬೊಂಬಾಟ್ ಆಟ ಪ್ರದರ್ಶಿಸುತ್ತಿದೆ. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ನಿಕಿನ್ ಜೋಸ್ ಹಾಗೂ ಶರತ್ ಬಿಆರ್ (Sharath BR) ಅವರ ಅರ್ಧಶತಕದ ನೆರವಿನಿಂದ 304 ರನ್ ಕಲೆಹಾಕಿತು. ಬಳಿಕ ಸರ್ವಿಸಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ನಾಯಕ ರಜತ್ ಪಲಿವಾಲ್ ಅವರ ಆಕರ್ಷಕ ಶತಕದ ನೆರವಿನಿಂದ 261 ರನ್ ಗಳಿಸಿ ಆಲೌಟ್ ಆಯಿತು. ಅಲ್ಲ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕರ್ನಾಟಕ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಆರ್ ತಲಾ 8 ರನ್​ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿಶಾಲ್ ಓನತ್ ಮತ್ತು ನಿಕಿನ್ ಜೋಸ್ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ 84 ರನ್​ಗಳ ಕಾಣಿಕೆ ನೀಡಿತು. ವಿಶಾಲ್ 79 ಎಸೆತಗಳಲ್ಲಿ 33 ರನ್ ಗಳಿಸಿದರು. ಅನುಭವಿ ಮನೀಶ್ ಪಾಂಡೆ 10 ರನ್ ಹಾಗೂ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆ ಆಯಿತು.

IND vs BAN: ಪೂಜಾರ, ಅಯ್ಯರ್, ಅಶ್ವಿನ್ ಅರ್ಧಶತಕ; 404 ರನ್​ಗಳಿಗೆ ಮೊದಲ ಇನ್ನಿಂಗ್ಸ್​ ಮುಗಿಸಿದ ಭಾರತ

ನಿಕಿನ್ ಜೋಶ್ ಕೂಡ 83 ಎಸೆತಗಳಲ್ಲಿ 62 ರನ್ ಬಾರಿಸಿ ಔಟಾದರು. ಹೀಗೆ 133 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಧಾರವಾಗಿದ್ದು ಶರತ್ ಬಿಆರ್ ಹಾಗೂ ಕೃಷ್ಣಪ್ಪ ಗೌತಮ್. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. ಶರತ್ 115 ಎಸೆತಗಳಲ್ಲಿ 77 ರನ್ ಸಿಡಿಸಿದರೆ, ಗೌತಮ್ 52 ಎಸೆತಗಳಲ್ಲಿ 48 ರನ್​ಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ರೋನಿತ್ ಮೋರೆ 41 ಬಾಲ್​ಗಳಲ್ಲಿ 26 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ 74.4 ಓವರ್​ಗಳಲ್ಲಿ 304 ರನ್​ಗೆ ಆಲೌಟ್ ಆಯಿತು. ಸರ್ನಿಸಸ್ ಪರ ದಿವೇಶ್ ಪಥಾನಿಯ 5 ಹಾಗೂ ಪುಲ್ಕಿತ್ ನರಂಗ್ 3 ವಿಕೆಟ್ ಪಡೆದು ಮಿಂಚಿದರು.

bengaluru bengaluru

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿದ ಸರ್ವಿಸಸ್ ತಂಡ ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಶುಭಂ ರೋಹಿಲ 8 ರನ್​ಗೆ ಹಾಗೂ ಗೌಲತ್ ರಾಹುಲ್ ಸಿಂಗ್ ಸೊನ್ನೆ ಸುತ್ತಿದರು. ಅನ್ಶುಲ್ ಗುಪ್ತಾ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ದೇವೆಂದರ್ 6 ರನ್​ಗೆ ನಿರ್ಗಮಿಸಿದರು. ಈ ಮೂಲಕ 100 ರನ್​ಗೂ ಮೊದಲೇ ಸರ್ವಿಸಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾದ ರವಿ ಚೌಹಾಣ್ ಹಾಗೂ ನಾಯಕ ರಜತ್ ಪಲಿವಾಲ್ ಉತ್ತಮ ಜೊತೆಯಾಟ ಆಡಿದರು. ರವಿ 99 ಎಸೆತಗಳಲ್ಲಿ 56 ರನ್ ಗಳಿಸಿದರು.

ಬಳಿಕ ಬಂದ ಬ್ಯಾಟರ್​ಗಳ ಪೈಕಿ ರಾಹುಲ್ ಸಿಂಗ್ 36 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ನಾಯಕನಿಗೆ ಸಾಥ್ ನೀಡಲಿಲ್ಲ. ಹೀಗಿದ್ದರೂ ಏಕಾಂಗಿ ಹೋರಾಟ ನಡೆಸಿದ ಪಲಿವಾಲ್ ತಂಡದ ಮೊತ್ತವನ್ನು ಹೆಚ್ಚಿಸಿ ಶತಕ ಸಿಡಿಸಿ ಔಟಾದರು. 217 ಎಸೆತಗಳಲ್ಲಿ ಇವರು 124 ರನ್ ಗಳಿಸಿದರು. ಅಂತಿಮವಾಗಿ ಸರ್ವಿಸಸ್ ತಂಡ 83.2 ಓವರ್​ಗಳಲ್ಲಿ 261 ರನ್​ಗೆ ಆಲೌಟ್ ಆಯಿತು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 4 ಹಾಗೂ ರೋನಿತ್ ಮೋರೆ 3 ವಿಕೆಟ್ ಪಡೆದುಕೊಂಡರು.

43 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಉತ್ತಮ ಆಟ ಪ್ರದರ್ಶಿಸುತ್ತಿದೆ. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ರಾಜ್ಯ ತಂಡ 25 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿ 133 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮಯಾಂಕ್ 69 ಎಸೆತಗಳಲ್ಲಿ 47 ಹಾಗೂ ಸಮರ್ಥ್ 82 ಎಸೆತಗಳಲ್ಲಿ 40 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here