Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಅಶ್ವತ್ಥನಾರಾಯಣ
  • ಬೆಂಗಳೂರು ನಗರ

ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಅಶ್ವತ್ಥನಾರಾಯಣ

The Bengaluru Live March 21, 2022 7:45 PM 1 minute read
State to place Cyber Security Policy to sustain digital economy: Dr.C.N.Ashwatha Narayana

ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಅಶ್ವತ್ಥನಾರಾಯಣ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಡಿಜಿಟಲ್ ಆರ್ಥಿಕತೆಯ ಸುಸ್ಥಿರತೆಗೆ ಸುರಕ್ಷತೆ, ಭದ್ರತೆ ಮತ್ತು ವಿಶ್ವಸಾರ್ಹತೆಗಳು ಆಧಾರಸ್ತಂಭಗಳಾಗಿದ್ದು, ನಾವೀನ್ಯತೆ ಕೂಡ ವ್ಯಾಪಕ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಸೈಬರ್ ವಂಚನೆಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಕಾರವು ಶೀಘ್ರದಲ್ಲೇ `ಸೈಬರ್ ಭದ್ರತಾ ನೀತಿ’ಯನ್ನು ಜಾರಿಗೆ ತರಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಅಸೋಚಂ’ ಸಂಘಟನೆಯು ವರ್ಚುಯಲ್ ರೂಪದಲ್ಲಿ ಏರ್ಪಡಿಸಿರುವ ಎರಡು ದಿನಗಳ ತನ್ನ 12ನೇ ಜಾಗತಿಕ ಸಮಾವೇಶದಲ್ಲಿ ಸೋಮವಾರ ಅವರು ಮಾತನಾಡಿದರು. ಸಮಾವೇಶದಲ್ಲಿವಂಚನೆಗಳು ಮತ್ತು ವಿಧಿವಿಜ್ಞಾನ: ಮುನ್ನೆಲೆಗೆ ಬರುತ್ತಿರುವ ಪ್ರವೃತ್ತಿಗಳು ಹಾಗೂ ಸವಾಲುಗಳ ನಿಗ್ರಹ’ ಕುರಿತು ಪ್ರಧಾನವಾಗಿ ಚರ್ಚಿಸಲಾಗುತ್ತಿದೆ.

ಉದ್ದೇಶಿತ ಸೈಬರ್ ಭದ್ರತಾ ನೀತಿಯು ಎಲ್ಲ ಆಯಾಮಗಳನ್ನೂ ಪರಿಗಣನೆಗೆ ತೆಗೆದುಕೊಂಡಿದೆ. ಈ ನೀತಿಯು ಜಾರಿಗೆ ಬಂದರೆ ಸರಕಾರದ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳಾದ ರಾಜ್ಯ ದತ್ತಾಂಶ ಕೇಂದ್ರ, ವೈಡ್ ಏರಿಯಾ ನೆಟ್ವರ್ಕ್ ಮತ್ತು ಇ-ಆಡಳಿತ ಸೌಲಭ್ಯಗಳು ಸುರಕ್ಷಿತವಾಗಿರಲಿವೆ ಎಂದು ಅವರು ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ವರದಿಯಂತೆ 2021-22ರಲ್ಲಿ ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ 1.38 ಟ್ರಿಲಿಯನ್ ರೂಪಾಯಿಗಳಷ್ಟು ಅಗಾಧ ಮೊತ್ತವು ಸೈಬರ್ ವಂಚನೆಗೆ ಒಳಗಾಗಿದೆ. ಅದರಲ್ಲೂ ಖಾಸಗಿ ಬ್ಯಾಂಕುಗಳಲ್ಲಿ ಕಾರ್ಡುಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಗಳು ಅಗಾಧವಾಗಿ ನಡೆಯುತ್ತಿವೆ. ಇವುಗಳನ್ನು ನಿಗ್ರಹಿಸಬೇಕಾದ್ದು ಈಗಿನ ಜರೂರಾಗಿದೆ ಎಂದು ಅವರು ವಿವರಿಸಿದರು.

ಭಾರತೀಯ ಡೇಟಾ ಸುರಕ್ಷತೆ ಮಂಡಲಿಯ ಪ್ರಕಾರ, ಸೈಬರ್ ಭದ್ರತಾ ಉದ್ಯಮವು ಸದ್ಯಕ್ಕೆ 80 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದು 190 ಶತಕೋಟಿ ಡಾಲರ್ ಗಾತ್ರಕ್ಕೆ ಬೆಳೆಯಲಿದೆ. ಇಂತಹ ಉದ್ಯಮವನ್ನು ಸುರಕ್ಷತೆಯೊಂದಿಗೆ ಬೆಳೆಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ನುಡಿದರು.

ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳಗೊಂಡಿದ್ದು, ಡಿಜಿಟಲ್ ವಹಿವಾಟಿನ ಪ್ರಮಾಣವು ಕಳೆದ ಆರು ವರ್ಷಗಳಲ್ಲಿ 8 ಪಟ್ಟು ಹೆಚ್ಚಿದೆ. ಇದರ ಜತೆಗೆ ಬ್ರಾಡ್-ಬ್ಯಾಂಡ್ ಅಂತರ್ಜಾಲ ಬಳಕೆದಾರರ ಸಂಖ್ಯೆಯು 2016ರಿಂದ 2021ರ ನಡುವೆ ಶೇ.79ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ. ಒಟ್ಟಿನಲ್ಲಿ ಸಾರ್ವಜನಿಕರು ವಂಚನೆಯ ಉದ್ದೇಶದ ಮೊಬೈಲ್ ಕರೆಗಳು, ಸಂದೇಶಗಳು, ಅಪರಿಚಿತ ಲಿಂಕ್ ಗಳು, ಅನಧಿಕೃತ ಕ್ಯೂಆರ್ ಕೋಡ್ ಇತ್ಯಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು.

ಕೇಂದ್ರ ಸರಕಾರವು ಕೈಗೆತ್ತಿಕೊಂಡಿರುವ `ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸರಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಬಳಕೆದಾರರನ್ನು ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಶಿಕ್ಷಿತರನ್ನಾಗಿ ಮಾಡುವುದು ಮತ್ತು ಸರಕಾರ ಹಾಗೂ ಖಾಸಗಿ ವಲಯಗಳೆರಡರಲ್ಲೂ ತಾಂತ್ರಿಕ ಪರಿಣತಿಯನ್ನು ಬೆಳೆಸುವ ಎರಡು ಆಯಾಮಗಳ ಉಪಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅಸೋಚಮ್ ಪದಾಧಿಕಾರಿಗಳಾದ ಶೋಭಿತ್ ಅಗರವಾಲ್, ಬಸುದೇವ್ ಮುಖರ್ಜಿ, ಐಸಿಎಐ ಮುಖ್ಯಸ್ಥ ಡಾ.ಅಶೋಕ್ ಹಾಲ್ದಿಯಾ, ಸೆಬಿಯ ಮುಖ್ಯ ವಿಚಕ್ಷಣಾಧಿಕಾರಿ ಆರತಿ ಶ್ರೀವಾಸ್ತವ ಮತ್ತಿತರರು ಈ ವರ್ಚುಯಲ್ ಸಮಾವೇಶದಲ್ಲಿ ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: `ದಾಳಿಕೋರರ ವಿರುದ್ಧ ಭಾವಸಾರ ಕ್ಷತ್ರಿಯರ ಹೋರಾಟ ಅನನ್ಯ’
Next: ಮಹಿಳೆಯರ ಸಮಗ್ರ ಸಬಲೀಕರಣಕ್ಕೆ ಒತ್ತು: ಅಶ್ವತ್ಥ ನಾರಾಯಣ

Related Stories

ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM
ವಿಧಾನಸೌಧ ಆವರಣದಲ್ಲಿ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಪ್ರತಿಮೆ ಮತ್ತು ಕೆಳಗೆ ಅವರ ಭಾವಚಿತ್ರ
  • ಬೆಂಗಳೂರು ನಗರ
  • ರಾಜಕೀಯ

ನೆಹರು ಪ್ರತಿಮೆಗೆ ಪುಷ್ಪನಮನ; ನಿಗಮ ಮಂಡಳಿ ನೇಮಕದ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ: ಸಿಎಂ ಶಿವಕುಮಾರ್

The Bengaluru Live November 14, 2026 10:28 PM
ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

The Bengaluru Live November 14, 2026 10:05 PM

Latest Post

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

November 15, 2026 10:00 AM
ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

November 15, 2026 10:00 AM
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ ಮೈಸೂರು ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡಿಕೆ
  • ಕರ್ನಾಟಕ

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ

November 15, 2026 10:00 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ವಿಜಯಪುರ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 14, 2026 10:47 PM
ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ವಿಜಯಪುರ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

November 14, 2026 10:30 PM
ನೆಹರು ಪ್ರತಿಮೆಗೆ ಪುಷ್ಪನಮನ; ನಿಗಮ ಮಂಡಳಿ ನೇಮಕದ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ: ಸಿಎಂ ಶಿವಕುಮಾರ್ ವಿಧಾನಸೌಧ ಆವರಣದಲ್ಲಿ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಪ್ರತಿಮೆ ಮತ್ತು ಕೆಳಗೆ ಅವರ ಭಾವಚಿತ್ರ
  • ಬೆಂಗಳೂರು ನಗರ
  • ರಾಜಕೀಯ

ನೆಹರು ಪ್ರತಿಮೆಗೆ ಪುಷ್ಪನಮನ; ನಿಗಮ ಮಂಡಳಿ ನೇಮಕದ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ: ಸಿಎಂ ಶಿವಕುಮಾರ್

November 14, 2026 10:28 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

The Bengaluru Live November 15, 2026 10:00 AM
ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM
ಮೈಸೂರು ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡಿಕೆ
  • ಕರ್ನಾಟಕ

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ

The Bengaluru Live November 15, 2026 10:00 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ವಿಜಯಪುರ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 14, 2026 10:47 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ
  • ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ
  • ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ
  • ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ
©Copyright 2025 The Bengaluru Live All rights reserved. | MoreNews by AF themes.