Home ಶಿಕ್ಷಣ ಸುಬೇದಾರ್ ಪಾಳ್ಯ: ಸರಕಾರಿ ಶಾಲಾ ಮಕ್ಕಳಿಗೆ 60 ಲ್ಯಾಪ್ ಟಾಪ್, 150 ಟ್ಯಾಬ್ ವಿತರಣೆ

ಸುಬೇದಾರ್ ಪಾಳ್ಯ: ಸರಕಾರಿ ಶಾಲಾ ಮಕ್ಕಳಿಗೆ 60 ಲ್ಯಾಪ್ ಟಾಪ್, 150 ಟ್ಯಾಬ್ ವಿತರಣೆ

25
0
Subedar Palya 60 laptop, 150 tab distributed to government school students
Advertisement
bengaluru

ಬೆಂಗಳೂರು:

ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ 60 ಲ್ಯಾಪ್ ಟಾಪ್ ಮತ್ತು 150 ಟ್ಯಾಬ್ ಗಳನ್ನು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ವಿತರಿಸಿದರು.

ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನ, ಶಿಕ್ಷಣ ಫೌಂಡೇಶನ್ ಮತ್ತು ಇಂಡೋ-ಮಿಮ್ ಸಂಘಟನೆಗಳು ಸಂಯುಕ್ತವಾಗಿ ಸುಬೇದಾರ್ ಪಾಳ್ಯದ ಶಾಲೆ ಆವರಣದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳನ್ನು ಇಡೀ ದೇಶಕ್ಕೇ ಮಾದರಿಯಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಭಾಗವಾಗಿ ಶಾಲೆಗಳ ಡಿಜಿಟಲೀಕರಣ, ಪ್ರಯೋಗಾಲಯ, ಭಾಷಾ ಕಲಿಕೆ ಮತ್ತು ಗಣಿತ ಬೋಧನೆಗೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂದರು.

bengaluru bengaluru

ಸರಕಾರಿ ಶಾಲೆಗಳಿಗೆ ತಲಾ 5 ವಿದ್ಯಾರ್ಥಿಗಳಿಗೆ ಒಂದು ಲ್ಯಾಪ್ ಟಾಪ್ ಕೊಡಲಾಗುತ್ತಿದ್ದು, ಇವುಗಳು ಶಾಲೆಯಲ್ಲೇ ಇರಲಿವೆ. ಹಾಗೆಯೇ, 8ನೇ ತರಗತಿ ಮೇಲ್ಪಟ್ಟ ಒಬ್ಬೊಬ್ಬ ವಿದ್ಯಾರ್ಥಿಗೂ ಒಂದೊಂದು ಟ್ಯಾಬ್ ವಿತರಿಸಲಾಗುತ್ತಿದೆ. ಇವುಗಳನ್ನೆಲ್ಲ ಬಳಸಿಕೊಂಡು ವಿದ್ಯಾರ್ಥಿಗಳು ಪರಿಣಾಮಕಾರಿ ಕಲಿಕೆಯನ್ನು ರೂಢಿಸಿಕೊಳ್ಳಬೇಕು. ಕ್ಷೇತ್ರದಲ್ಲಿರುವ ಉಳಿದ ಸರಕಾರಿ ಶಾಲೆಗಳಿಗೂ ಈ ಸಾಧನಗಳನ್ನು ಸದ್ಯದಲ್ಲೇ ವಿತರಿಸಲಾಗುವುದು ಎಂದು ಅವರು ಹೇಳಿದರು.

ಸರಕಾರಿ ಶಾಲೆಗಳಿಗೆ ಬರುವವರೆಲ್ಲ ಸಾಮಾನ್ಯವಾಗಿ ಬಡಕುಟುಂಬಗಳ ಮಕ್ಕಳೇ ಆಗಿರುತ್ತಾರೆ. ಇವರಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಕರ್ನಾಟಕದಲ್ಲಿ ಬೇರೂರಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಲಾಭವು ಸರಕಾರಿ ಶಾಲೆಗಳಲ್ಲಿ ಓದುವವರಿಗೂ ಸಿಗುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಸರಕಾರಿ ಶಾಲೆಗಳ ಸಬಲೀಕರಣವು ಸಮಾನತೆಯನ್ನು ಆಧರಿಸಿದ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ. ಜತೆಗೆ, ಅವಕಾಶವಂಚಿತರ ಮಕ್ಕಳಿಗೆ ಇಲ್ಲಿ ಉಜ್ವಲ ಭವಿಷ್ಯದ ದಾರಿಗಳು ಸೃಷ್ಟಿಯಾಗಬೇಕು ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಫೌಂಡೇಶನ್ ಮತ್ತು ಇಂಡೋ-ಮಿಮ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here