Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಸಂಸದ ಶ್ರೀ ತೇಜಸ್ವೀ ಸೂರ್ಯ ಪ್ರಯಾಣ, ಮೋದಿ ಸರ್ಕಾರಕ್ಕೆ ಕೃತಜ್ಞತೆ
  • ಬೆಂಗಳೂರು ನಗರ

‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಸಂಸದ ಶ್ರೀ ತೇಜಸ್ವೀ ಸೂರ್ಯ ಪ್ರಯಾಣ, ಮೋದಿ ಸರ್ಕಾರಕ್ಕೆ ಕೃತಜ್ಞತೆ

The Bengaluru Live February 4, 2021 4:30 PM 1 minute read
‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಸಂಸದ ಶ್ರೀ ತೇಜಸ್ವೀ ಸೂರ್ಯ ಪ್ರಯಾಣ, ಮೋದಿ ಸರ್ಕಾರಕ್ಕೆ ಕೃತಜ್ಞತೆ

‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಸಂಸದ ಶ್ರೀ ತೇಜಸ್ವೀ ಸೂರ್ಯ ಪ್ರಯಾಣ, ಮೋದಿ ಸರ್ಕಾರಕ್ಕೆ ಕೃತಜ್ಞತೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

‘ಏರೋ ಇಂಡಿಯಾ 2021’ ಪ್ರಯುಕ್ತ ಆಯೋಜನೆಗೊಂಡಿರುವ ಏರ್ ಶೋ ನ ಭಾಗವಾಗಿ 2ನೇ ದಿನವಾದ ಇಂದು ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ಪಯಣಿಸುವ ಮೂಲಕ ನೂತನ ಕಾರ್ಯವೊಂದಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಬಾನಂಗಳದಲ್ಲಿ 30 ನಿಮಿಷಗಳ ಮಟ್ಟಿಗೆ ಬೆಂಗಳೂರು ದಕ್ಷಿಣ ಸಂಸದರನ್ನೊಳಗೊಂಡ ಈ ವಿಶೇಷ ಹಾರಾಟವು, ಬೆಂಗಳೂರಿನ ಹೆಚ್.ಎ. ಎಲ್ ಗೆ, 48,000 ಕೋಟಿ ರೂ,ಗಳ ಗುತ್ತಿಗೆಯನ್ನು ನೀಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಎಂಬುದು ವಿಶೇಷ.

  • IMG 20210204 WA0002
  • IMG 20210204 WA0001
  • IMG 20210204 WA0004

ವಿಶೇಷ ಪ್ರಯಾಣದ ನಂತರ ಮಾತನಾಡಿದ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ‘ಮೇಕ್ ಇನ್ ಇಂಡಿಯಾ’ ಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಅದರ ಭಾಗವಾಗಿ 83 ಎಲ್.ಸಿ.ಎ ತೇಜಸ್ ಉತ್ಪಾದನಾ ಕಾಮಗಾರಿಯನ್ನು ಬೆಂಗಳೂರಿನ ಪ್ರತಿಷ್ಠಿತ ಹೆಚ್.ಎ. ಎಲ್ ಗೆ ಒದಗಿಸಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ವಿದೇಶಿ ಅವಲಂಬನೆಯನ್ನು ತಪ್ಪಿಸಲು ಹಾಗೂ ಸ್ವದೇಶಿ ತಂತ್ರಜ್ಞರನ್ನು ಹುರಿದುಂಬಿಸಲು ಇದರಿಂದ ಸಾಧ್ಯವಾಗಲಿದೆ. ‘ತೇಜಸ್’ ಉತ್ಪಾದನೆಯಿಂದ ಬೆಂಗಳೂರು ನಗರದಲ್ಲಿ ಔದ್ಯೋಗಿಕ ಅವಕಾಶಗಳು ಹೆಚ್ಚಲಿದ್ದು, ತೇಜಸ್ ಅನ್ನು ಜಾಗತಿಕ ಮಟ್ಟದ ಬ್ರಾಂಡ್ ಆಗಿ ಪರಿವರ್ತನೆಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ” ಎಂದು ಸಂಸದ ಶ್ರೀ ತೇಜಸ್ವೀ ಸೂರ್ಯ ತಿಳಿಸಿದರು.

Onboard LCA Tejas at #AeroIndia2021#CelebrateLCATejas pic.twitter.com/3z0OQapyRB

— Tejasvi Surya (@Tejasvi_Surya) February 4, 2021

ಭದ್ರತೆ ಮೇಲಿನ ಕ್ಯಾಬಿನೆಟ್ ಕಮಿಟಿಯು 48,000 ಕೋಟಿ ರೂ, ಗಳ 73 ಮಾರ್ಕ್ 1 ಎ ವರ್ಷನ್ ಮತ್ತು 10 ಮಾರ್ಕ್ 2 ಟ್ರೆನರ್ ತೇಜಸ್ ಯುದ್ಧ ವಿಮಾನಗಳ ಗುತ್ತಿಗೆಯನ್ನು ಜನವರಿ 13 2021 ರಂದು ಹೆಚ್.ಎ. ಎಲ್ ಗೆ ವಹಿಸಿದ್ದು, ವಿದ್ಯುಕ್ತವಾಗಿ ಹೆಚ್.ಎ. ಎಲ್ ಚೇರ್ಮನ್& ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಆರ್ ಮಾಧವನ್ ರಿಗೆ ಡೈರೆಕ್ಟರ್ ಜನರಲ್ (ರಕ್ಷಣಾ ಇಲಾಖೆ, ಸ್ವಾಧೀನ ವಿಭಾಗ) ಶ್ರೀ ವಿ ಎಲ್ ಕಾಂತರಾವ್ ರವರು ಬುಧವಾರದಂದು ಏರೋ ಇಂಡಿಯಾ ಶೋ ನಲ್ಲಿ ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Tejasvi Surya, MP Bengaluru South, on Thursday was a part of special sortie of the Tejas LCA at #AeroIndiashow #LCAMk1 #HAL #Bengaluru #Bangalore #Karnataka .@Tejasvi_Surya .@TejasviSuryaOfc .@BJYM .@BJYMKarnataka #AeroIndia2021 pic.twitter.com/aCdXPiOe40

— Thebengalurulive/ಬೆಂಗಳೂರು ಲೈವ್ (@bengalurulive_) February 4, 2021

‘ತೇಜಸ್’ ಲಘು ಯುದ್ಧ ವಿಮಾನದ ಸೇರ್ಪಡೆಯಿಂದ ಭಾರತದ ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮ ನಿರ್ಭರತೆ’ ಹೆಚ್ಚುವುದಲ್ಲದೇ ಇತರ ದೇಶಗಳಿಗೆ ರಪ್ತು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ. ಪ್ರಪಂಚದ ಕೆಲವೇ ನಗರಗಳು ಜಾಗತಿಕ ಮಟ್ಟದ ಯುದ್ಧವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು ‘ತೇಜಸ್’ ಲಘು ಯುದ್ಧ ವಿಮಾನದ ಉತ್ಪಾದನೆ, ನಮ್ಮ ಬೆಂಗಳೂರಿನ ಹೆಮ್ಮೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ” ಎಂದು ಸಂಸದರು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ನಿವೃತ್ತ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ನಿಧನ
Next: ಶಾಲಾ ಸಮಯಕ್ಕೆ ಬಸ್ ಸಂಚಾರಕ್ಕೆ ಸುರೇಶ್ ಕುಮಾರ್ ಮನವಿ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ ಪರಿಶೀಲನಾ ಸಭೆಯಲ್ಲಿ ಇಬ್ಬರು ಅಧಿಕಾರಿಗಳೊಂದಿಗೆ ಸಮ್ಮೇಳನ ಮೇಜಿನ ಬಳಿ ಕುಳಿತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

November 11, 2026 3:02 PM
ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್ ನಿವಾಸದ ಹೊರಗೆ ದೂರದರ್ಶನ ಮೈಕ್‌ಗಳ ಗುಂಪಿನ ಎದುರು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್

November 11, 2026 2:42 PM
ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ವರ್ಚುವಲ್ ಸಭೆಯಲ್ಲಿ ಸಮ್ಮೇಳನ ಮೇಜಿನ ಬಳಿ ಕುಳಿತಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
  • ಬೆಂಗಳೂರು

ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

November 11, 2026 2:22 PM
ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

November 11, 2026 10:33 AM
ಆರ್‌ಎಸ್‌ಎಸ್ ಮತ್ತು ಕಾರ್ಟ್ರಿಡ್ಜ್ ವಶದ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್‌ಗೆ ಆಗ್ರಹ ಸಮಾವೇಶದ ವೇದಿಕೆಯಲ್ಲಿ ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಆರ್‌ಎಸ್‌ಎಸ್ ಮತ್ತು ಕಾರ್ಟ್ರಿಡ್ಜ್ ವಶದ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

November 11, 2026 9:55 AM
ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

November 11, 2026 8:20 AM

ನೀವು ತಪ್ಪಿಸಿಕೊಂಡಿರಬಹುದು

ಪರಿಶೀಲನಾ ಸಭೆಯಲ್ಲಿ ಇಬ್ಬರು ಅಧಿಕಾರಿಗಳೊಂದಿಗೆ ಸಮ್ಮೇಳನ ಮೇಜಿನ ಬಳಿ ಕುಳಿತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

The Bengaluru Live November 11, 2026 3:02 PM
ನಿವಾಸದ ಹೊರಗೆ ದೂರದರ್ಶನ ಮೈಕ್‌ಗಳ ಗುಂಪಿನ ಎದುರು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್

The Bengaluru Live November 11, 2026 2:42 PM
ವರ್ಚುವಲ್ ಸಭೆಯಲ್ಲಿ ಸಮ್ಮೇಳನ ಮೇಜಿನ ಬಳಿ ಕುಳಿತಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
  • ಬೆಂಗಳೂರು

ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

The Bengaluru Live November 11, 2026 2:22 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

The Bengaluru Live November 11, 2026 10:33 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ
  • ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್
  • ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ
  • ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ
©Copyright 2025 The Bengaluru Live All rights reserved. | MoreNews by AF themes.