Home ಬೆಂಗಳೂರು ನಗರ ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾವಿರಾರು ಜನರಿಗೆ ದಿನಸಿ ಕಿಟ್ ವಿತರಣೆ

ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾವಿರಾರು ಜನರಿಗೆ ದಿನಸಿ ಕಿಟ್ ವಿತರಣೆ

40
0
Ugadi festival Thousands Distributed groceries in Subramanyanagar..
Advertisement
bengaluru

ಸಂಪತ್ತು, ಜ್ಞಾನ, ಸಂತೋಷ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಂಚಿಕೆಯಾಗಬೇಕು – ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್

ಬೆಂಗಳೂರು:

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸುಬ್ರಮಣ್ಯನಗರ ವಾರ್ಡ್ನನ ಸಂಗೊಳ್ಳಿ ರಾಯಣ್ಣ ಉದ್ಯಾನವನದ ಬಳಿ ಯುಗಾದಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಪೌರ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳ ದಿನಸಿ ಕಿಟ್ ಗಳನ್ನು ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರು ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಹೆಚ್.ಮಂಜುನಾಥ್ ರವರು ವಿತರಿಸಿದರು.

ಉತ್ತರ ಜಿಲ್ಲಾ ಬಿ.ಜೆ.ಪಿ.ಮಹಿಳಾ ಮೋರ್ಚಾ ಅಧ್ಯಕ್ಷರಾದ ಆಶಾ ರಾವ್ ,ಸುಬ್ರಮಣ್ಯನಗರ ವಾರ್ಡ್ ಅಧ್ಯಕ್ಷರಾದ ಯೋಗೇಶ್ ರವರು ಸ್ಥಳೀಯ ಬಿ.ಜೆ.ಪಿ.ಮುಖಂಡರು ಭಾಗವಹಿಸಿದ್ದರು.

Ugadi festival Thousands Distributed groceries in Subramanyanagar..

ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರು ಮಾತನಾಡಿ ಸುಬ್ರಮಣ್ಯನಗರ ವಾರ್ಡ್ ಸಾಂಸ್ಕೃತಿಕ ,ಶೈಕ್ಷಣಿಕ,ಸಂಪ್ರದಾಯವುಳ್ಳ ವಾರ್ಡ್ ಕಾಯಕದ ಮಹತ್ವ ಮತ್ತು ಅನ್ನ ದಾಸೋಹದ ಮಹತ್ವವನ್ನು ನಾಡಿಗೆ ಸಾರಿದ ಕ್ರಾಂತಿಯೋಗಿ ಬಸವೇಶ್ವರ ತತ್ವ ಸಿದ್ದಾಂತ ಅನುಸಾರ ಎಲ್ಲರು ಜೀವನ ಸಾಗಿಸಬೇಕು.

bengaluru bengaluru

ನಮ್ಮಲಿರುವ ಸಂಪತ್ತು,ಜ್ಞಾನ,ಸಂತೋಷವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಂಚಿಕೆಯಾಗಬೇಕು ಆಗ ಮಾತ್ರ ಸಮಾಜ ಅಭಿವೃದ್ದಿ ಸಾಧ್ಯ.

ನಮ್ಮ ನಾಡು ದಾಸೋಹ ಸಂಸ್ಕೃತಿಯ ನಾಡು .ಪ್ರತಿಯೊಬ್ಬ ದಾಸೋಹ ಸಂಸ್ಕೃತಿ ಚಿಂತನೆ ಆಳವಡಿಸಿಕೊಳ್ಳಬೇಕು. ನಿಸ್ಪಾರ್ಥವಾಗಿ, ಜನಪರವಾಗಿಮನಸ್ಸು ಪೂರ್ವಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಹೆಚ್.ಮಂಜುನಾಥ್ ರವರು ಮಾತನಾಡಿ ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರ ನೇತೃತ್ವದಲ್ಲಿ ನಮ್ಮ ಧರ್ಮ,ಸಂಸ್ಕೃತಿ ವೈಭವದ ಮೆರಗು ಯುಗಾದಿ ಹಬ್ಬ ಅದನ್ನ ನಮ್ಮ ವಾರ್ಡ್ ಜನರ ಜೊತೆಯಲ್ಲಿ ಅಚರಿಸಲಾಗುತ್ತಿದೆ.

ಸುಬ್ರಮಣ್ಯನಗರ ವಾರ್ಡ್ ಪ್ರಜ್ಞಾವಂತ,ಬುದ್ದಿವಂತರು ಹೆಚ್ಚು ಇರುವ ವಾರ್ಡ್ .ದೇವಾಲಯಗಳ ವಾರ್ಡ್ ಎಂದು ಸುಬ್ರಮಣ್ಯನಗರ ವಾರ್ಡ್ ಕೀರ್ತಿ ಗಳಿಸಿದೆ ಎಂದು ಹೇಳಿದರು.


bengaluru

LEAVE A REPLY

Please enter your comment!
Please enter your name here