ಬೆಂಗಳೂರು:
ಕೊರೋನ ದಂತಹ ಸಾಂಕ್ರಾಮಿಕ ಜಾಡ್ಯ ಎದುರಿಸುವ ನಿಟ್ಟಿನಲ್ಲಿ ಯೋಗಾ ಬಹಳ ಮಹತ್ವ, ಮತ್ತು ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ಅಂತಾರಾಷ್ಟ್ರೀಯ ಯೋಗ ದಿನ. ಒಳ್ಳೆಯ ಆರೋಗ್ಯ, ದೀರ್ಘಾಯುಷ್ಯ ಸೇರಿ ನಮ್ಮ ಜೀವನದ ಅನೇಕ ಬದಲಾವಣೆಗೆ ಯೋಗ ಒಂದು ಮದ್ದು ಎಂಬುವುದು ಈಗಾಗಲೇ ಸಾಬೀತಾಗಿದೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಯೋಗದ ಪಾತ್ರ ಮಹತ್ವವಾದದು. ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಲಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನ, ಏಕಾಗ್ರತೆಯ ಜೊತೆಗೆ ಸಮಾಜ ನಿರ್ಮಾಣದಲ್ಲಿಯೂ ಯೋಗ ಸಹಕಾರಿಯಾಗಿದೆ. ಯೋಗ, ವ್ಯಾಯಾಮಗಳು ನಮ್ಮ ಜೀವನಕ್ರಮವಾಗಿರಲಿ.#YogaDay2021#YogaForAll pic.twitter.com/D0ifXaxOUS
— B.S. Yediyurappa (@BSYBJP) June 21, 2021
ಯೋಗದ ಪ್ರಮುಖ್ಯತೆ ಸಾರುವ ಸಲುವಾಗಿ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ಯೋಗ ದಿನದ ಶುಭಾಶಯ ತಿಳಿಸಿದ್ದಾರೆ.