Home Uncategorized ಆಳ ಸಮುದ್ರದಲ್ಲಿ ಮೈನವಿರೇಳಿಸಿದ ಕೋಸ್ಟ್ ಗಾರ್ಡ್ ಅಣಕು ಪ್ರದರ್ಶನ

ಆಳ ಸಮುದ್ರದಲ್ಲಿ ಮೈನವಿರೇಳಿಸಿದ ಕೋಸ್ಟ್ ಗಾರ್ಡ್ ಅಣಕು ಪ್ರದರ್ಶನ

14
0
bengaluru

ಭಾರತೀಯ ಕೋಸ್ಟ್ ಗಾರ್ಡ್ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಮುದ್ರದಲ್ಲಿ ಒಂದು ದಿನ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆಳ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ನಡೆಸಿದ ಅಣಕು ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು. ಮಂಗಳೂರು: ಭಾರತೀಯ ಕೋಸ್ಟ್ ಗಾರ್ಡ್ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಮುದ್ರದಲ್ಲಿ ಒಂದು ದಿನ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆಳ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ನಡೆಸಿದ ಅಣಕು ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು.

ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಕೋಸ್ಟ್ ಗಾರ್ಡ್’ನ ವರಾನ ನೌಕೆಯಲ್ಲಿ ಕುಳಿತು ಈ ಅಣಕು ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಿದರು. ಮತ್ತೊಂದು ನೌಕೆಯಲ್ಲಿ ಆಹ್ವಾನಿತ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಮುದ್ರ ತಂಡದಿಂದ ಸುಮಾರು 15 ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ತಟ ರಕ್ಷಣಾ ಪಡೆಯ ಒಟ್ಟು 6 ಅತ್ಯಾಧುನಿಕ ನೌಕೆಗಳು, ಎರಡು ಹೆಲಿಕಾಪ್ಟರ್ ಗಳು, ಎರಡು ಡಾರ್ನಿಯರ್ ವಿಮಾನಗಳು ವಿವಿಧ ರೋಚಕ ಕಸರತ್ತುಗಳನ್ನು ಪ್ರದರ್ಶಿಸಿದವು.

ಸಮುದ್ರದ ನಡುವೆ ಯಾವುದಾದರೂ ಬೋಟ್ ಅವಘಡಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿದರೆ ಕೋಸ್ಟ್ ಗಾರ್ಡ್ ನೌಕೆಯಿಂದ ಅಗ್ನಿ ನಂದಿಸುವ ಕಾರ್ಯಾಚರಣೆಯನ್ನು ಈ ವೇಳೆ ಪ್ರದರ್ಶಿಸಲಾಯಿತು. ಡಾನ್ರಿಯರ್ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್ ಗಳ ಗಸ್ತು ಕಾರ್ಯಾಚರಣೆಯೂ ಈ ವೇಳೆ ನಡೆಯಿತು.

LEAVE A REPLY

Please enter your comment!
Please enter your name here