Home Uncategorized ಕರಾವಳಿಗೆ ಬಜೆಟ್ ನಲ್ಲಿ ದೊಡ್ಡ ಕಾರ್ಯಕ್ರಮಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕರಾವಳಿಗೆ ಬಜೆಟ್ ನಲ್ಲಿ ದೊಡ್ಡ ಕಾರ್ಯಕ್ರಮಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

8
0
bengaluru

ಕರಾವಳಿ ನಮ್ಮ ರಾಜ್ಯದ ಆರ್ಥಿಕ ವಲಯದಲ್ಲಿ ಪ್ರಮುಖವಾಗಿರುವಂಥ ಪ್ರದೇಶ.  ಇಲ್ಲಿಯ ಚಟುವಟಿಕೆಗಳು, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ ಕಾರ್ಯಕ್ರಮಗಳು ಮನದಲ್ಲಿವೆ-ಸಿಎಂ ಉಡುಪಿ: ಕರಾವಳಿ ನಮ್ಮ ರಾಜ್ಯದ ಆರ್ಥಿಕ ವಲಯದಲ್ಲಿ ಪ್ರಮುಖವಾಗಿರುವಂಥ ಪ್ರದೇಶ.  ಇಲ್ಲಿಯ ಚಟುವಟಿಕೆಗಳು, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ ಕಾರ್ಯಕ್ರಮಗಳು ಮನದಲ್ಲಿವೆ. ಬಜೆಟ್ ಬರುವವವರೆಗೆ  ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಾರ್ಕಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪತ್ರಕರ್ತರಿಗೆ ಬೆಂಬಲ

ಉಡುಪಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ರಜತಮಹೋತ್ಸವ ಆಚರಣೆ ಮಾಡುತ್ತಿದೆ. ಉಡುಪಿ  ಜಿಲ್ಲೆಯಾಗಿ 25 ವರ್ಷಗಳ ಸಂಭ್ರಮೋತ್ಸವ ಆಚರಣೆಯಾದಂತೆಯೇ ಉಡುಪಿ ಪತ್ರಕರ್ತರ ಸಂಘ ಅದೇ ವರ್ಷ ಸ್ಥಾಪನೆಯಾಗಿದ್ದು 25 ವರ್ಷಗಳು ತುಂಬಿವೆ.

bengaluru

ಒಂದು ಸಂಘಕ್ಕೆ 25 ವರ್ಷ ನಿರಂತರವಾಗಿ ಸಾರ್ವಜನಿಕ ವಲಯದದಲ್ಲಿ ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕ, ನಿಷ್ಠೆಯಿಂದ ನಿಭಾಯಿಸಿ, ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ  ಪತ್ರಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಇಡೀ ವರ್ಷ ಹಮ್ಮಿಕೊಂಡಿರುವ 25 ಕಾರ್ಯಕ್ರಮಗಳು ಯಶಸ್ವಿಯಾಗಲಿ. ಸರ್ಕಾರ ಕ್ಷೇಮನಿಧಿಯಿಂದ ಹಿಡಿದು ಇತರೆ ಎಲ್ಲಾ ಬೆಂಬಲವನ್ನು ನೀಡಲಿದೆ ಎಂದರು.

bengaluru

LEAVE A REPLY

Please enter your comment!
Please enter your name here