Home Uncategorized ಕೌಟುಂಬಿಕ ಕಲಹ: ವಿಜಯಪುರದಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹ: ವಿಜಯಪುರದಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

18
0

ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳ ಜೊತೆಗೆ ನೀರಿನ ಸಂಪಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.  ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳ ಜೊತೆಗೆ ನೀರಿನ ಸಂಪಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. 

ತಾಯಿ ಗೀತಾ ತನ್ನ ಮೂವರು ಮಕ್ಕಳೊಂದಿಗೆ ಇಂದು ನಸುಕಿನ ಜಾವ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಗೀತಾ ಮತ್ತು ಆಕೆಯ ಪತಿ ರಾಮು ಮಧ್ಯೆ ತೀವ್ರ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ತೀವ್ರ ನೊಂದಿದ್ದ ಗೀತಾ ಮಧ್ಯರಾತ್ರಿ ವೇಳೆ ಮಕ್ಕಳನ್ನು ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವಿಜಯಪುರ ತಿಕೋಠಾ ತಾಲ್ಲೂಕಿನ ವಿಠಲವಾಡಿ ತಾಂಡಾದಲ್ಲಿ ದುರ್ಘಟನೆ ನಡೆದಿದೆ. 

LEAVE A REPLY

Please enter your comment!
Please enter your name here