Home Uncategorized ನಗರದಲ್ಲಿ ಹೆಚ್ಚಿದ ಅಕ್ರಮ ಬ್ಯಾನರ್ ಗಳ ಹಾವಳಿ: ಆದೇಶ ಧಿಕ್ಕರಿಸುತ್ತಿರುವ ರಾಜಕೀಯ ಮುಖಂಡರ ವಿರುದ್ಧ ಕ್ರಮಕ್ಕೆ...

ನಗರದಲ್ಲಿ ಹೆಚ್ಚಿದ ಅಕ್ರಮ ಬ್ಯಾನರ್ ಗಳ ಹಾವಳಿ: ಆದೇಶ ಧಿಕ್ಕರಿಸುತ್ತಿರುವ ರಾಜಕೀಯ ಮುಖಂಡರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದು!

12
0
bengaluru

ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ನಗರದಲ್ಲಿ ಅಕ್ರಮ ಬ್ಯಾನರ್ ಗಳ ಹಾವಳಿ ಮುಂದುವರೆದಿದ್ದು, ಹೈಕೋರ್ಟ್ ಆದೇಶ ಧಿಕ್ಕರಿಸುತ್ತಿರುವ ರಾಜಕೀಯ ಮುಖಂಡರು ಹಾಗೂ ಇತರರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರು: ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ನಗರದಲ್ಲಿ ಅಕ್ರಮ ಬ್ಯಾನರ್ ಗಳ ಹಾವಳಿ ಮುಂದುವರೆದಿದ್ದು, ಹೈಕೋರ್ಟ್ ಆದೇಶ ಧಿಕ್ಕರಿಸುತ್ತಿರುವ ರಾಜಕೀಯ ಮುಖಂಡರು ಹಾಗೂ ಇತರರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ಹಳೆ ವಿಮಾನ ನಿಲ್ದಾಣದ ಮುಖ್ಯರಸ್ತೆಯಲ್ಲಿರುವ ದೊಮ್ಮಲೂರು ವಾರ್ಡ್‌ನಲ್ಲಿ ಬಿಜೆಪಿ ಮುಖಂಡರು ಶಾಂತಿನಗರ ಮಂಡಲ ಉಪಾಧ್ಯಕ್ಷ ಕೆ.ಸದಾ ರೆಡ್ಡಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿರುವುದು ಕಂಡು ಬಂದಿದೆ.

ಈ ಹಿಂದೆ ಆದೇಶ ಹೊರಡಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ವಾರಾಂತ್ಯದ ವೇಳೆಗೆ ಕನಿಷ್ಟ 10 ಎಫ್ಐಆರ್ ದಾಖಲಿಸುವಂತೆ ಪ್ರತಿ ವಲಯದ ಸಹಾಯಕ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಈ ವರೆಗೂ ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ತುಷಾರ್ ಗಿರಿನಾಥ್ ಅವರು, ಕಾರ್ಯಪಾಲಕ ಎಂಜಿನಿಯರ್‌ಗಳು ಫ್ಲೆಕ್ಸ್‌’ಗಳನ್ನು ತೆಗೆಯುವ ಕಾರ್ಯ ಕೈಗೊಂಡಿದ್ದಾರೆಂದು ಹೇಳಿದ್ದಾರೆ.

bengaluru

ಇದೇ ವೇಳೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ನಡುವೆ ಬ್ಯಾನರ್ ಗಳ ತೆರವು ಮಾಡುವ ಕುರಿತು ಗಿರಿನಾಥ್ ಅವರು ನೀಡಿರುವ ಹೇಳಿಕೆಯನ್ನು ನಗರದ ತಜ್ಞ ಅಶ್ವಿನ್ ಮಹೇಶ್ ಅವರು ಖಂಡಿಸಿದ್ದಾರೆ. ಬ್ಯಾನರ್ ತೆರವು ಅಗತ್ಯ. ಆದರೆ, ಅದಷ್ಟೇ ಸಾಕಾಗುವುದಿಲ್ಲ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ತಡೆ ಒಡ್ಡಿದಂತಾಗುತ್ತದೆ ಎಂದರು.

bengaluru

LEAVE A REPLY

Please enter your comment!
Please enter your name here