Home Uncategorized ಪ್ರೀತಿಯ ಹಸ್ಕಿಯನ್ನು ಕದ್ದೊಯ್ದ ಕಳ್ಳರು; ಹುಡುಕಿ ಮರಳಿ ತರುವಲ್ಲಿ ಯಶಸ್ವಿಯಾದ 20 ವರ್ಷದ ಬಾಲೆ

ಪ್ರೀತಿಯ ಹಸ್ಕಿಯನ್ನು ಕದ್ದೊಯ್ದ ಕಳ್ಳರು; ಹುಡುಕಿ ಮರಳಿ ತರುವಲ್ಲಿ ಯಶಸ್ವಿಯಾದ 20 ವರ್ಷದ ಬಾಲೆ

18
0
Advertisement
bengaluru

ರಾಜಾಜಿನಗರದ ನಿವಾಸಿ ಚೈತ್ರಾ ಎಂಬ ವಿದ್ಯಾರ್ಥಿನಿ ತನ್ನ 5 ತಿಂಗಳ ಹಸ್ಕಿ ತಳಿಯ ನಾಯಿ ‘ಶೌರ್ಯ’ ಕಳ್ಳತನವಾದ ನಂತರ ಮೂರು ದಿನಗಳಲ್ಲಿ ಅದನ್ನು ಹುಡುಕಿ ತನ್ನೊಂದಿಗೆ ಕರೆತರಲು ‘ಪೊಲೀಸ್’ ಮತ್ತು ‘ಪತ್ತೆದಾರ’ರಾಗಬೇಕಾಯಿತು. ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಕದ್ದ ನಾಯಿಯನ್ನು ಪತ್ತೆ ಹಚ್ಚುವ ಮೂಲಕ ಸಾಕುಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸಿದ್ದಾಳೆ. ರಾಜಾಜಿನಗರದ ನಿವಾಸಿ ಚೈತ್ರಾ ಎಂಬ ವಿದ್ಯಾರ್ಥಿನಿ ತನ್ನ 5 ತಿಂಗಳ ಹಸ್ಕಿ ತಳಿಯ ನಾಯಿ ‘ಶೌರ್ಯ’ ಕಳ್ಳತನವಾದ ನಂತರ ಮೂರು ದಿನಗಳಲ್ಲಿ ಅದನ್ನು ಹುಡುಕಿ ತನ್ನೊಂದಿಗೆ ಕರೆತರಲು ‘ಪೊಲೀಸ್’ ಮತ್ತು ‘ಪತ್ತೆದಾರ’ರಾಗಬೇಕಾಯಿತು. ಶೌರ್ಯ 3000 ರೂ.ಗೆ ಮಾರಾಟವಾಗಿದ್ದ.

ನಾಯಿ ಮಾಲೀಕರು, ಪ್ರಾಣಿ ಕಾರ್ಯಕರ್ತರು ಮತ್ತು ಸಾಕುಪ್ರಾಣಿ ಅಂಗಡಿಗಳ ವಿವಿಧ ವಾಟ್ಸಾಪ್ ಗುಂಪುಗಳನ್ನು ಸಂಪರ್ಕಿಸಿದ ಚೈತ್ರಾಗೆ ತನ್ನ ನಾಯಿಯನ್ನು ಮಾರಾಟಕ್ಕೆ ಇಡಲಾಗಿದೆ ಎಂಬುದು ತಿಳಿದುಬಂದಿದೆ. ಬಳಿಕ ತನ್ನ ಪ್ರದೇಶದಲ್ಲಿನ ಮನೆಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಳ್ಳಲು ನೆರೆಹೊರೆಯವರಲ್ಲಿ ವಿನಂತಿಸಿದಳು. ಆಕೆಯ ಅದೃಷ್ಟಕ್ಕೆ ಶೌರ್ಯನನ್ನು ಕದಿಯಲು ಬಳಸಿದ್ದ ಬೈಕ್‌ನ ನೋಂದಣಿ ಸಂಖ್ಯೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳು ತಮ್ಮ ಮುಖವನ್ನು ಹೂಡಿಯಿಂದ ಮುಚ್ಚಿಕೊಂಡಿದ್ದರು.

ಆಕೆಗೆ ವಾಟ್ಸಾಪ್ ಗ್ರೂಪ್ ಒಂದರಿಂದ ಶೌರ್ಯನಂತೆಯೇ ಕಾಣುವ ಹಸ್ಕಿ ನಾಯಿಯನ್ನು ಮಾರಾಟಕ್ಕೆ ಇಡಲಾಗಿದೆ ಮತ್ತು ಮಾರಾಟಗಾರನು ತನ್ನ ಸಂಪರ್ಕ ವಿವರಗಳನ್ನು ಸಹ ಹಂಚಿಕೊಂಡಿದ್ದಾನೆ ಎಂಬುದು ತಿಳಿಯುತ್ತದೆ. ಬಳಿಕ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ‘ನಾನು ಹೆಬ್ಬಾಳಕ್ಕೆ ಹೋಗಿದ್ದೆ ಮತ್ತು ಪಿಯು ವಿದ್ಯಾರ್ಥಿಯಾಗಿದ್ದ ಒಬ್ಬಾತನೊಂದಿಗೆ ನನ್ನ ನಾಯಿಯನ್ನು ಕದ್ದಿದ್ದು ಹೇಮಂತ್ ಎಂಬುದು ದೃಢಪಟ್ಟಿದೆ’ ಎನ್ನುತ್ತಾಳೆ ಚೈತ್ರಾ.

ಹಸ್ಕಿ ನಾಯಿಯನ್ನು ಖರೀದಿಸಲು ಆಸಕ್ತಿ ಹೊಂದಿರುವವರು ತನ್ನನ್ನು ಸಂಪರ್ಕಿಸುವಂತೆ ಹೇಮಂತ್ ತನ್ನ ಮೊಬೈಲ್ ನಂಬರ್‌ ಅನ್ನು ಹಂಚಿಕೊಂಡಿದ್ದ. ಈ ವೇಳೆ ಖರೀದಿದಾರರ ಸೋಗಿನಲ್ಲಿ ಚೈತ್ರಾ, ತನ್ನ ಸ್ನೇಹಿತರೊಂದಿಗೆ ಹೇಮಂತ್ ಮನೆಗೆ ಹೋದಾಗ ಅದು ಈಗಾಗಲೇ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ನಂತರ ಅವರು ಶೌರ್ಯನನ್ನು ಖರೀದಿಸಿದ್ದವರನ್ನು ಭೇಟಿಯಾಗಲು ಆರೋಪಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಬಳಿಕ ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾಗಿರುವ ರಾಜಾಜಿನಗರದ ಖರೀದಿದಾರರೊಬ್ಬರಿಂದ ತನ್ನ ನಾಯಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

bengaluru bengaluru

‘ಸಾಮಾನ್ಯವಾಗಿ ಹಸ್ಕಿ ನಾಯಿಗಳು ಕುತ್ತಿಗೆಗೆ ಕಟ್ಟುವುದನ್ನು ದ್ವೇಷಿಸುತ್ತವೆ. ಹಸ್ಕಿಯೊಂದಿಗೆ ನಮ್ಮಲ್ಲಿ ಮತ್ತೊಂದು ತಳಿ ಇದೆ. ಅದು ತಾನೇ ಗೇಟ್ ಅನ್ನು ತೆಗೆದುಕೊಂಡು ಹೊರಗೆ ಹೋಗಿದೆ. ಈ ವೇಳೆ ಶೌರ್ಯ ಅವನನ್ನು ಹಿಂಬಾಲಿಸಿದ್ದಾನೆ ಮತ್ತು ಮನೆಗೆ ಹಿಂತಿರುಗಲಿಲ್ಲ. ನಾನಿನ್ನು ಚಿಕ್ಕವಳಾಗಿರುವುದರಿಂದ ನಾನು ನನ್ನ ದೂರನ್ನು ಹಿಂಪಡೆದಿದ್ದೇನೆ’ ಎಂದು ಚೈತ್ರಾ ತಿಳಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here