Home Uncategorized ಬಿಎಂಟಿಸಿಗೆ ಮತ್ತೊಂದು ಬಲಿ: ದ್ವಿಚಕ್ರ ವಾಹನ ಸವಾರ ಸಾವು

ಬಿಎಂಟಿಸಿಗೆ ಮತ್ತೊಂದು ಬಲಿ: ದ್ವಿಚಕ್ರ ವಾಹನ ಸವಾರ ಸಾವು

19
0

ನಗರದಲ್ಲಿ ಬಿಎಂಟಿಸಿ ಬಸ್ಸಿನಡಿಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಯಶವಂತಪುರದ ಸತ್ವ ಅಪಾರ್ಟ್​​ಮೆಂಟ್​ ಬಳಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಮತ್ತೆ  ಬಿಎಂಟಿಸಿ ಬಸ್​ಗೆ ಮತ್ತೊಂದು ಬಲಿ ಸಂಭವಿಸಿದೆ. ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿನಡಿಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಯಶವಂತಪುರದ ಸತ್ವ ಅಪಾರ್ಟ್​​ಮೆಂಟ್​ ಬಳಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಮತ್ತೆ  ಬಿಎಂಟಿಸಿ ಬಸ್​ಗೆ ಮತ್ತೊಂದು ಬಲಿ ಸಂಭವಿಸಿದೆ. ನಾಗವಾರ-ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತವಾಗಿದೆ. ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ.

ಅತೀ ವೇಗದಲ್ಲಿದ್ದ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರಿಗೆ ಗಾಯಗಳಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here