Home Uncategorized ಭತ್ತ-ಗೋಧಿ ಬೆಳೆ ಅಭಿವೃದ್ಧಿಪಡಿಸಲು ಸಿರಿಧಾನ್ಯಗಳ ಕಡೆಗಣಿಸಲಾಗಿತ್ತು: ಕೃಷಿ ವಿವಿ ಕುಲಪತಿ ಸುರೇಶ್

ಭತ್ತ-ಗೋಧಿ ಬೆಳೆ ಅಭಿವೃದ್ಧಿಪಡಿಸಲು ಸಿರಿಧಾನ್ಯಗಳ ಕಡೆಗಣಿಸಲಾಗಿತ್ತು: ಕೃಷಿ ವಿವಿ ಕುಲಪತಿ ಸುರೇಶ್

27
0

ಆಹಾರ ಭದ್ರತೆ, ಪೌಷ್ಠಿಕತೆ ಮತ್ತು ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಹೇಳಿದ್ದಾರೆ. ಬೆಂಗಳೂರು: ಆಹಾರ ಭದ್ರತೆ, ಪೌಷ್ಠಿಕತೆ ಮತ್ತು ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಹೇಳಿದ್ದಾರೆ.

2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಪರಿಗಣಿಸುವ ಸಲುವಾಗಿ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ಆಯೋಜಿಸಿದ್ದ ವಾಕಥಾನ್ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ವಾಕಥಾನ್‌ನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. “ಕಳೆದ 50 ವರ್ಷಗಳಿಂದ, ಅಕ್ಕಿ ಮತ್ತು ಗೋಧಿಯಂತಹ ಹೆಚ್ಚಿನ ಬೆಳೆಗಳನ್ನು ಅಭಿವೃದ್ಧಿಪಡಿಸಲು ಸಿರಿಧಾನ್ಯವನ್ನು ಕಡೆಗಳಿಸಲಾಗಿತ್ತು. ಆದರೆ, ವಿಶ್ವ ಕೃಷಿ ಬಿಕ್ಕಟ್ಟು ಹವಾಮಾನ ವೈಪರೀತ್ಯ ಮತ್ತು ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದೆ. ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಕೃಷಿ ಭೂಮಿಯನ್ನು ಈಗಾಗಲೇ ಗರಿಷ್ಠ ಮಟ್ಟಕ್ಕೆ ಬಳಸಿಕೊಂಡಿದ್ದೇವೆ. ಹಾಗಾಗಿ ಕೃಷಿ ಭೂಮಿ ಬಳಕೆಯತ್ತ ಗಮನಹರಿಸಿ, ಕಡಿಮೆ ನೀರಿನ ಅಗತ್ಯವಿರುವ ಸಿರಿಧಾನ್ಯದಂತಹ ಸುಸ್ಥಿರ ಬೆಳೆಗಳನ್ನು ಬೆಳೆಯುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಿರಿಧಾನ್ಯಗಳು ಆಹಾರ, ಪೋಷಣೆ ಮತ್ತು ಆರೋಗ್ಯ ಭದ್ರತೆಯನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಆದ್ದರಿಂದ ಸಿರಿಧಾನ್ಯಗಳನ್ನು ಭವಿಷ್ಯದ ಫಾಸ್ಟ್ ಸ್ಮಾರ್ಟ್ ಫುಡ್ ಎಂದು ಪುರಸ್ಕರಿಸುವ ಹಂತಕ್ಕೆ ಬಂದಿದ್ದೇವೆಂದು ತಿಳಿಸಿದರು.

ಸಿರಿಧಾನ್ಯಗಳು ಇತರ ಬೆಳೆಗಳಿಗೆ ಹೋಲಿಸಿದರೆ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲವು.ಹೀಗಾಗಿ ಸಿರಿಧಾನ್ಯವನ್ನು ಪವಾಡ ಧಾನ್ಯಗಳು ಎಂದೂ ಕರೆಯಲಾಗುತ್ತದೆ. ಭಾರತದ ಜನಸಂಖ್ಯೆಯ ಸುಮಾರು 20 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದನ್ನು ನಿವಾರಿಸಲು ಸಿರಿಧಾನ್ಯವು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರು ಸಿರಿಧಾನ್ಯ ಬಳಕೆಯಿಂದ ಸಮಸ್ಯೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here