Home Uncategorized ಮಂಗಳೂರು: ದಲಿತ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ‌ನಡೆಸಿ ಕೊಲೆ

ಮಂಗಳೂರು: ದಲಿತ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ‌ನಡೆಸಿ ಕೊಲೆ

2
0
bengaluru

ಮಂಗಳೂರು: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಎ.ಸಿ.ಕುರಿಯನ್ ಮಾಲಿಕತ್ವದ ಸಾರ ಫಾರ್ಮ್ ತೋಟದಲ್ಲಿ ನಡೆದಿದೆ. ಫಾರ್ಮ್ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಕೊಲೆಯಾದ ದಲಿತ. ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಪೂಜಾರಿ, ಮಹೇಶ್ ಪೂಜಾರಿ ಕೊಲೆ ಮಾಡಿರುವ ಆರೋಪಿಗಳು.

ಶ್ರೀಧರ ಮೇಲೆ ಡಿ. 17 ರಂದು ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ತೋಟದ ಸಿಬ್ಬಂದಿ ಅಬ್ರಾಹಂ ಮತ್ತು ಪರಮೇಶ್ವರ್ ರಕ್ಷಣೆ ಮಾಡಿದ್ದರು. ಇದಾದ ನಂತರ ಏಟು ತಿಂದ ಶ್ರೀಧರ ವಿಶ್ರಾಂತಿ ಪಡೆಯುತ್ತಿದ್ದನು. ಈ ವೇಳೆ ಆರೋಪಿಗಳು ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ತುಂಡರಿಸಿ ಬಂದು, ಕೊಲೆ ಮಾಡಿ ತೋಟದ ಅಣತೆ ದೂರದಲ್ಲಿ ಎಸೆದಿದ್ದಾರೆ. ಜೊತೆಗೆ ಕೊಲೆಯಾದ ಶ್ರೀಧರ ಬಳಿ ಇದ್ದ 9500 ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇಂದು(ಡಿ.18) ಬೆಳಗ್ಗೆ ಕೊಠಡಿ ಬಳಿ ಬಂದು ನೋಡಿದಾಗ ಶ್ರೀಧರ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆ ಶ್ರೀಧರನನ್ನು ಹುಡುಕಿದಾಗ ತೋಟದ 250 ರಿಂದ 300 ಮೀಟರ್ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಶ್ರೀಧರ್​ನ ಮೃತದೇಹ ಪತ್ತೆಯಾಗಿದೆ.

ಧರ್ಮಸ್ಥಳ ಠಾಣೆಯಲ್ಲಿ 323, 302, 392 ಜೊತೆಗೆ 34 IPC ಮತ್ತು ಕಲಂ 3(2) (va),3(2)(v) ಎಸ್ಟಿ /ಎಸ್ಸಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

bengaluru

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here