Home Uncategorized ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಸಾವು, ಇದು 40% ಸರ್ಕಾರದ ಫಲಿತಾಂಶ: ಡಿ ಕೆ ಶಿವಕುಮಾರ್ 

ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಸಾವು, ಇದು 40% ಸರ್ಕಾರದ ಫಲಿತಾಂಶ: ಡಿ ಕೆ ಶಿವಕುಮಾರ್ 

4
0
bengaluru

ಬೆಂಗಳೂರಿನ  ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಬೆಳಗ್ಗೆ ಕುಸಿದು ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ತಂದೆ ಮತ್ತು ಇನ್ನೊಬ್ಬ ಮಗಳು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು: ಬೆಂಗಳೂರಿನ  ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಬೆಳಗ್ಗೆ ಕುಸಿದು ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ತಂದೆ ಮತ್ತು ಇನ್ನೊಬ್ಬ ಮಗಳು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಡಿ ಕೆ ಶಿವಕುಮಾರ್ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು 40% ಕಮಿಷನ್ ಸರ್ಕಾರದ ಫಲಿತಾಂಶವಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಗುಣಮಟ್ಟವಿಲ್ಲ. ಸರ್ಕಾರದ ಸಚಿವರು, ಶಾಸಕರು, ಅಧಿಕಾರಿಗಳು ತಾವು ದುಡ್ಡು ಮಾಡಿಕೊಂಡು ಜನರಿಗೆ ಕಳಪೆ ಮಟ್ಟದ ಕೆಲಸ ಮಾಡಿಕೊಡುತ್ತಾರೆ. ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯವಲ್ಲದೆ ಇನ್ನೇನು, ಸಾಮಾನ್ಯ ಜನರ ಜೀವನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. 33 yr old woman and her son (1.5 yrs) died in the accident. The under construction structure fell on their vehicle. Father who was riding vehicle and young daughter survived, says a top traffic cop. https://t.co/3oJrxMEdLE— S. Lalitha (@Lolita_TNIE) January 10, 2023

bengaluru

LEAVE A REPLY

Please enter your comment!
Please enter your name here