Home Uncategorized ಮೈಸೂರು: ಅಪ್ಪ ಅಮ್ಮನ ಜಗಳದಿಂದ ಬೇಸತ್ತು ಮಗ ಆತ್ಮಹತ್ಯೆಗೆ ಶರಣು

ಮೈಸೂರು: ಅಪ್ಪ ಅಮ್ಮನ ಜಗಳದಿಂದ ಬೇಸತ್ತು ಮಗ ಆತ್ಮಹತ್ಯೆಗೆ ಶರಣು

1
0
bengaluru

ಮೈಸೂರು: ಅಪ್ಪ ಅಮ್ಮನ ಜಗಳದಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು (Nanjangud) ತಾಲ್ಲೂಕು ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಮಹೇಂದ್ರ (20) ಮೃತ ದುರ್ದೈವಿ. ಮನೆಯಲ್ಲಿ ತಂದೆ ತಾಯಿಯ ನಡುವಿನ ಗಲಾಟೆ ಕಂಡು ಮಹೇಂದ್ರ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಡಬಲ್ ಮರ್ಡರ್ ಪ್ರಕರಣ: ಇಬ್ಬರು ಹಂತಕರು ಅರೆಸ್ಟ್; ಡಿ.17ರಂದು ಏನಾಯ್ತು ಎಂದು ಇಲ್ಲಿದೆ ನೋಡಿ

ದಾವಣಗೆರೆ: ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

ದಾವಣಗೆರೆ: ಜಲ್ಲಿಕಲ್ಲು ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹೊನ್ನಾಯಕನಹಳ್ಳಿಯ ನಿವಾಸಿ, ಚಾಲಕ ಶಿವರಾಜ್(25), ಹೆಬ್ಬಾಳದ ನಿವಾಸಿ, ಕ್ಲೀನರ್​​​ ತೇಜಸ್ ಕುಮಾರ್​(32) ಮೃತ ದುರ್ದೈವಿಗಳು. ಮೃತರು ಕಳೆದ ಎರಡು ವರ್ಷಗಳಿಂದ ಕ್ವಾರೆಗಳಿಂದ ಜಲ್ಲಿ ಕಲ್ಲು ಸಾಗಿಸುತ್ತಿದ್ದರು. ಹೀಗೆ ಇಂದು (ಡಿ.20) ಜಲ್ಲಿ ಕಲ್ಲು ಸಾಗಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:  ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ: ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಭೇಟಿ

bengaluru

ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆ

ವಿಜಯಪುರ: ವಿಜಯಪುರ  ನಗರದ ದೇವಗಿರಿ ಸ್ಮಶಾನದ ಬಾವಿಯಲ್ಲಿ  ನವಜಾತ ಹೆಣ್ಣು ಶಿಶುವಿನ  ಶವ ಪತ್ತೆಯಾಗಿದೆ. ಸ್ಮಶಾನದ ಬಾವಿಯಲ್ಲಿನ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಶಿಶುವಿನ ಶವ ಪತ್ತೆಯಾಗಿದ್ದು, ಪಾಪಿಗಳು ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಬಾವಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೆಣ್ಣು ಮಗುವಾಗಿದೆ ಎಂಬ ಕಾರಣಕ್ಕೆ ಬಾವಿಯಲ್ಲಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಆದರ್ಶ ನಗರ ಪಿಎಸ್ಐ ಯತೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

bengaluru

LEAVE A REPLY

Please enter your comment!
Please enter your name here