Home Uncategorized ಮೈಸೂರು: ಚಿರತೆ ದಾಳಿಗೆ ಮೂರನೇ ಬಲಿ, ವೃದ್ಧೆ ಮೇಲೆ ಎರಗಿದ ಚಿರತೆ

ಮೈಸೂರು: ಚಿರತೆ ದಾಳಿಗೆ ಮೂರನೇ ಬಲಿ, ವೃದ್ಧೆ ಮೇಲೆ ಎರಗಿದ ಚಿರತೆ

6
0
bengaluru

ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರೆದಿದೆ. ಈ ಹಿಂದೆ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದು ಇದೀಗ ವೃದ್ಧ ಮಹಿಳೆಯೊಬ್ಬರನ್ನು ಚಿರತೆ ಬಲಿ ಪಡೆದಿದೆ. ಮೈಸೂರು: ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರೆದಿದೆ. ಈ ಹಿಂದೆ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದು ಇದೀಗ ವೃದ್ಧ ಮಹಿಳೆಯೊಬ್ಬರನ್ನು ಚಿರತೆ ಬಲಿ ಪಡೆದಿದೆ. 

ಕನ್ನನಾಯಕನಹಳ್ಳಿ ನಿವಾಸಿ 60 ವರ್ಷದ ಸಿದ್ದಮ್ಮ ಮೃತ ಮಹಿಳೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಸೌದೆ ತರಲು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಸಿದ್ದಮ್ಮರ ಮೇಲೆ ದಾಳಿ ಚಿರತೆ ದಾಳಿ ಮಾಡಿದೆ. ನಂತರ ಆಕೆಯನ್ನು ಎಳೆದುಕೊಂಡು ಹೋಗುತ್ತಿದ್ದುದ್ದನ್ನು ಕಂಡ ಗ್ರಾಮಸ್ಥರು ಕಿರುಚಾಡಿದ್ದಾರೆ. ಈ ವೇಳೆ ಸಿದ್ದಮ್ಮರನ್ನು ಅಲ್ಲೇ ಬಿಟ್ಟು ಚಿರತೆ ಓಡಿ ಹೋಗಿದೆ. 

ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಮ್ಮ ಮೃತಪಟ್ಟಿದ್ದಾರೆ. 

bengaluru
bengaluru

LEAVE A REPLY

Please enter your comment!
Please enter your name here