Home Uncategorized ರೋಣ: ಎಎಪಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 300 ಕುರಿಗಳ ಕೊಡುಗೆ ನೀಡಿದ ಕುರಿಗಾಹಿಗಳು!

ರೋಣ: ಎಎಪಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 300 ಕುರಿಗಳ ಕೊಡುಗೆ ನೀಡಿದ ಕುರಿಗಾಹಿಗಳು!

16
0
bengaluru

ಶಾಂತಗೇರಿ, ಸರ್ಜಾಪುರ ಹಾಗೂ ಸುತ್ತಮುತ್ತಲಿನ ಕುರಿಗಾಹಿಗಳು ಆಪ್ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ವೆಚ್ಚಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಗದಗ: ಶಾಂತಗೇರಿ, ಸರ್ಜಾಪುರ ಹಾಗೂ ಸುತ್ತಮುತ್ತಲಿನ ಕುರಿಗಾಹಿಗಳು ಆಪ್ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ವೆಚ್ಚಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

ರೋಣ ತಾಲೂಕಿನ ಸಮಾಜಸೇವಕ ಆನೇಕಲ್ ದೊಡ್ಡಯ್ಯ ಆಮ್ ಆದ್ಮಿ ಪಕ್ಷದ ಟಿಕೆಟ್ ಮೇಲೆ ರೋಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕುರುಬರು ಆನೇಕಲ್ ಗೆ ಬೆಂಬಲ ನೀಡಿ 300 ಕುರಿಗಳನ್ನು ಅವರ ಚುನಾವಣಾ ವೆಚ್ಚಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಕೆಲವು ರೈತರು ದೊಡ್ಡಯ್ಯ ಅವರಿಗೆ 25 ಸಾವಿರ ರೂ. ನೀಡಿದ್ದಾರೆ. ದೊಡ್ಡಯ್ಯ ಮಾತನಾಡಿ, ನಾನು ಸಮಾಜ ಸೇವಕನಾಗಿದ್ದು, ಈ ಬಾರಿ ರೋಣದಲ್ಲಿ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಎಲ್ಲಾ ಕುರುಬರು ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here