ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದ ಬಿಬಿಎಂಪಿಯ ಮಳೆನೀರು ಚರಂಡಿ (ಎಸ್‌ಡಬ್ಲ್ಯುಡಿ) ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ್ ಆರ್ ಕಬಾಡೆ ಅವರನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದ ಬಿಬಿಎಂಪಿಯ ಮಳೆನೀರು ಚರಂಡಿ (ಎಸ್‌ಡಬ್ಲ್ಯುಡಿ) ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ್ ಆರ್ ಕಬಾಡೆ ಅವರನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ (ಯುಡಿಡಿ) ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.
ಮಳೆನೀರು ಚರಂಡಿ ವಿಭಾಗದ ಮುಖ್ಯಸ್ಥರಾಗಿ ಚರಂಡಿಗಳ ಮರು-ಮಾದರಿ ಮತ್ತು ಡಿ-ಸಿಲ್ಟಿಂಗ್‌ಗೆ ಸಂಬಂಧಿಸಿದ 5,000-ಕೋಟಿ ಮೌಲ್ಯದ ಯೋಜನೆಗಳ ನಿರ್ವಹಣೆಯ ಉಸ್ತುವಾರಿಯನ್ನು ಕಬಾಡೆ ಅವರು ವಹಿಸಿಕೊಂಡಿದ್ದರು. ಇದಲ್ಲದೆ, ಮುಖ್ಯ ಜನರಲ್ ಮ್ಯಾನೇಜರ್ (CGM) ಹುದ್ದೆಯನ್ನು ಕೂಡ ನಿಭಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.