Home Uncategorized ಹಣದ ನೆರವಿನ ನಿರೀಕ್ಷೆಯಲ್ಲಿದ್ದ ಬಡ ಮಹಿಳೆಗೆ ತಾನೇ ಉಚಿತ ಶಸ್ತ್ರಚಿಕಿತ್ಸೆ ಮಾಡಿದ ಕಾಂಗ್ರೆಸ್ ಶಾಸಕ!

ಹಣದ ನೆರವಿನ ನಿರೀಕ್ಷೆಯಲ್ಲಿದ್ದ ಬಡ ಮಹಿಳೆಗೆ ತಾನೇ ಉಚಿತ ಶಸ್ತ್ರಚಿಕಿತ್ಸೆ ಮಾಡಿದ ಕಾಂಗ್ರೆಸ್ ಶಾಸಕ!

10
0
Advertisement
bengaluru

ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಹಣದ ನೆರವಿನ ನಿರೀಕ್ಷೆಯಲ್ಲಿದ್ದ ನಿರ್ಗತಿಕ ಮಹಿಳೆಗೆ ಉಚಿತವಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರ ನಡೆಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ತುಮಕೂರು: ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಹಣದ ನೆರವಿನ ನಿರೀಕ್ಷೆಯಲ್ಲಿದ್ದ ನಿರ್ಗತಿಕ ಮಹಿಳೆಗೆ ಉಚಿತವಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರ ನಡೆಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕುಣಿಗಲ್ ತಾಲೂಕಿನ ಕುಂದೂರು ನಿವಾಸಿ ಆಶಾ ಹತ್ತು ವರ್ಷಗಳ ಹಿಂದೆ ಮೊಣಕಾಲಿನ ಕೀಲು ಸ್ಥಾನಪಲ್ಲಟಕ್ಕೆ ಒಳಗಾಗಿದ್ದರು. ನಂತರ, ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಿ ಮೊಣಕಾಲು ಸಮಸ್ಯೆಯನ್ನು ನಿವಾರಿಸಲಾಗಿತ್ತು. ಆದರೆ, ಮತ್ತೆ ಆಕೆಯ ಮೊಣಕಾಲಿನ ಕೀಲು ಸ್ಥಾನಪಲ್ಲಟಗೊಂಡಿತು. 

ಬಡತನದ ಹಿನ್ನೆಲೆಯಿಂದ ಬಂದಿರುವ ಆಶಾ ಅವರಿಗೆ ಯೋಜನೆಯ ಅಡಿಯಲ್ಲಿ ಅದೇ ಶಸ್ತ್ರಚಿಕಿತ್ಸೆಯನ್ನು ಮತ್ತೆ ನಡೆಸಲಾಗುವುದಿಲ್ಲ ಮತ್ತು ವಿಮಾ ರಕ್ಷಣೆಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಯಿತು. ಖಾಸಗಿ ಆಸ್ಪತ್ರೆಗಳು ಆಪರೇಷನ್‌ಗೆ 4 ರಿಂದ 5 ಲಕ್ಷ ರೂಪಾಯಿ ವೆಚ್ಛವಾಗುವುದಾಗಿ ಹೇಳಿದ್ದು, ಆಕೆಯ ಕುಟುಂಬಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗಲಿಲ್ಲ.

ಈವೇಳೆ ಸ್ಥಳೀಯ ಶಾಸಕ ಡಾ. ರಂಗನಾಥ್ ಅವರನ್ನು ಭೇಟಿ ಮಾಡಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಮಾತನ್ನು ಕೇಳಿದ ಡಾ. ರಂಗನಾಥ್ ಸಹಾಯದ ಭರವಸೆ ನೀಡಿದರು.

bengaluru bengaluru

ಶಾಸಕರಾಗುವ ಮುನ್ನವೇ ತಮ್ಮ ಸೇವೆಗೆ ಹೆಸರಾಗಿದ್ದ ಮೂಳೆ ಶಸ್ತ್ರ ಚಿಕಿತ್ಸಕರೂ ಆಗಿರುವ ಶಾಸಕ ರಂಗನಾಥ್ ಅವರು ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ತಾವೇ ಸ್ವತಃ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಗೆ ಪರಿಹಾರ ನೀಡಿದ್ದಾರೆ.

ಶಾಸಕರ ಈ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಜನರ ಹೃದಯಗಳನ್ನು ಗೆದ್ದಿದೆ. ಅವರ ಈ ನಡೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಮಾನವೀಯ ಕಾರ್ಯಗಳು ರಾಜಕಾರಣಿಗಳ ಬಗೆಗಿನ ಗ್ರಹಿಕೆಯನ್ನು ಬದಲಾಯಿಸಲು ಸಹಕಾರಿಯಾಗಲಿವೆ ಎಂದು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here