Home Uncategorized ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಡಿಎ ನಿವೇಶನ ರದ್ದು: ತಮಟೆ ಜಾನಪದ ಕಲಾವಿದ ಮುನಿವೆಂಕಟಪ್ಪಗೆ ಪದ್ಮಶ್ರೀ...

ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಡಿಎ ನಿವೇಶನ ರದ್ದು: ತಮಟೆ ಜಾನಪದ ಕಲಾವಿದ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ

20
0

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಬಿಡಿಎ ನಿವೇಶನ (ಸಂಖ್ಯೆ ಬಿ4-ಎಸ್‌ಎ-70) ನೀಡಲಾಗಿದೆ. ಆದರೆ, ಹಣಕಾಸಿನ ಮುಗ್ಗಟ್ಟಿನಿಂದ ಸಂಪೂರ್ಣ 5 ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದೆ ಕೇವಲ 26,000 ರೂ. ಮಾತ್ರ ಪಾವತಿಸಿದ್ದರು. ಚಿಕ್ಕಬಳ್ಳಾಪುರ: ತಮಟೆ ಜಾನಪದ ಕಲಾವಿದ ಮುನಿವೆಂಕಟಪ್ಪ ಅವರನ್ನು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡುವ ಕೆಲವು ದಿನಗಳ ಮೊದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವರಿಗೆ ನೀಡಿದ್ದ ನಿವೇಶನವನ್ನು ರದ್ದುಗೊಳಿಸಿತ್ತು. ನಿಗದಿತ ಮೊತ್ತವನ್ನು ಪಾವತಿಸದ ಕಾರಣ 2016ರಲ್ಲಿ ನಿವೇಶನ ರದ್ದುಪಡಿಸಿರುವ ಬಗ್ಗೆ ತಿಳಿಸುವ ಪತ್ರವನ್ನು ಜನವರಿ 5ರಂದು ಅವರಿಗೆ ಕಳುಹಿಸಲಾಗಿತ್ತು.

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಬಿಡಿಎ ನಿವೇಶನ (ಸಂಖ್ಯೆ ಬಿ4-ಎಸ್‌ಎ-70) ನೀಡಲಾಗಿದೆ. ಆದರೆ, ಹಣಕಾಸಿನ ಮುಗ್ಗಟ್ಟಿನಿಂದ ಸಂಪೂರ್ಣ 5 ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದೆ ಕೇವಲ 26,000 ರೂ. ಮಾತ್ರ ಪಾವತಿಸಿದ್ದರು.

ಬಿಡಿಎ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸುವಂತೆ ನಿರ್ದೇಶಿಸಬೇಕು, ಯಾವುದೇ ಪಾವತಿಯಿಲ್ಲದೆ ಮರುಹಂಚಿಕೆ ಮಾಡುವುದರಿಂದ ತನಗೆ ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡುತ್ತದೆ ಎಂದು ಮುನಿವೆಂಕಟಪ್ಪ ಮನವಿ ಮಾಡಿದರು. ಯಾವುದೇ ಆದಾಯದ ಮೂಲವಿಲ್ಲ, ಹೀಗಿರುವಾಗ ನಿಗದಿತ ಶುಲ್ಕವನ್ನು ಪಾವತಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿದರು. ಮುನಿವೆಂಕಟಪ್ಪ ತಮ್ಮ 17ನೇ ವಯಸ್ಸಿನಲ್ಲಿ ತಂದೆ ಪಾಪಣ್ಣ ಅವರಿಂದ ತಮಟೆ ಜಾನಪದ ಕಲೆಯನ್ನು ಕಲಿತರು. ಚಿಕ್ಕಬಳ್ಳಾಪುರ ಜಿಲ್ಲೆಯ ಪಿಂಡಪಾಪನಹಳ್ಳಿ ಗ್ರಾಮದಲ್ಲಿ ಸಾವಿರಾರು ಮಂದಿಗೆ ಪಾಠ ಮಾಡಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವುದು ತಮಗೆ ಅಚ್ಚರಿ ತಂದಿದೆ ಎಂದ ಅವರು, ಈ ಮನ್ನಣೆಯು ಪ್ರಾಚೀನ ಜಾನಪದ ಕಲೆಗೆ ಉತ್ತೇಜನ ನೀಡುವಲ್ಲಿ ಸಾಕಷ್ಟು ಸಹಕಾರಿಯಾಗಲಿ ಎಂದು ಹಾರೈಸಿದರು. ದಶಕಗಳಿಂದ ಅವರ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದ ಅವರು, ತಮಗೆ ನೀಡಿದ ಗೌರವಕ್ಕೆ ದೇವರು ಹಾಗೂ ತಮ್ಮ ಪೂರ್ವಜರ ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಿದರು.

ಮುನಿವೆಂಕಟಪ್ಪ ಅವರ ಸೋದರಳಿಯ ಪ್ರಸನ್ನಕುಮಾರ್ (27) ಅವರು ಗ್ರಾಮದಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಾರೆ.  ಅವರು ಕೂಡ ತಮಟೆ ಭಾರಿಸುತ್ತಾರೆ.  ಮುನಿವೆಂಕಟಪ್ಪ ಅವರ ಮೂವರು ಹೆಣ್ಣುಮಕ್ಕಳು ವಿವಾಹವಾದ ನಂತರ ತಮ್ಮ ಚಿಕ್ಕಪ್ಪನನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಮುನಿವೆಂಕಟಪ್ಪ ಅವರ ಏಕೈಕ ಪುತ್ರ ಪ್ರವೀಣ್ 14ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಬಿಡಿಎ ತನ್ನ ಚಿಕ್ಕಪ್ಪನಿಗೆ ನಿವೇಶನ ಮಂಜೂರು ಮಾಡಿರುವುದನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದ್ದು, ಮುನಿವೆಂಕಟಪ್ಪ ಅವರಿಗೆ ಗೌರವ ಸೂಚಿಸಿ ನಿವೇಶನ ಮರು ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ ಎಂದು ಪ್ರಸನ್ನ ತಿಳಿಸಿದರು.

LEAVE A REPLY

Please enter your comment!
Please enter your name here