Home Uncategorized ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ: ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡಿಸದಿದ್ದಲ್ಲಿ ಬೆಳಗಾವಿ ಚಲೋ –...

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ: ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡಿಸದಿದ್ದಲ್ಲಿ ಬೆಳಗಾವಿ ಚಲೋ – ವಿವೇಕ ಸುಬ್ಬಾರೆಡ್ಡಿ

6
0

ಬೆಂಗಳೂರ: ವಕೀಲರ ರಕ್ಷಣಾ ಕಾಯ್ದೆ (Iplement advocate protection act) ಜಾರಿಗೆ ಮಾಡುವಂತೆ ಆಗ್ರಹಿಸಿ ಇಂದು (ಡಿ.16) ವಕೀಲರು (Lawyers) ನಗರದ ಮೌರ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡಿಸದಿದ್ದಲ್ಲಿ ಬೆಳಗಾವಿ ಚಲೋ ನಡೆಸಲಾಗುವುದು. ಮತ್ತು ಬೀದಿಗಿಳಿದು ರಾಜ್ಯದ್ಯಂತ ಎಲ್ಲಾ ವಕೀಲರ ಸಂಘಗಳಿಂದ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಪ್ರತಿನಿಧಿಗಳೊಂದಿಗೆ ಮಾತನಾಡಿದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಸಚಿವ ಮಾಧುಸ್ವಾಮಿ ಬಹಳ ವರ್ಷಗಳ ಹಿಂದೆ ವಕೀಲ ವೃತ್ತಿ ಮಾಡಿದ್ದಾರೆ. ಈ ಬಗ್ಗೆ ಅವರು ಚಿಂತಿಸಬೇಕು. ಸದ್ಯ ಕಕ್ಷಿದಾರರ ಪರ ವಾದಿಸುವ ವಕೀಲರಿಗೆ ಹೆದರಿಸುವ ಅವ್ಯವಸ್ಥೆ ನಿರ್ಮಾಣವಾಗಿದೆ. ರಿಯಲ್ ಎಸ್ಟೇಟ್ ಮಾಫಿಯಾದಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ನ್ಯಾಯಕ್ಕಾಗಿ ಹೋರಾಡುವ ವಕೀಲರ ವಿರುದ್ದವೇ ಸುಳ್ಳು ಪ್ರಕರಣಗಳನ್ನು ಹಾಕಿಸುತ್ತಾರೆ ಎಂದು ಅಳಲು ತೋಡಿಕೊಂಡರು.

ವಕೀಲರ ರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತರುವವರಗೆ ಹೋರಾಟ ನಿರಂತವಾಗಿರುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ನಮಗೆ ವಿಶ್ವಾಸವಿದೆ. ಹೋರಾಟದ ರೂಪರೇಶೆ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ತಿಳಿಸಿದರು.

ವಕೀಲರ ರಕ್ಷಣಾ ಕಾಯ್ದೆ ಕುರಿತಂತೆ ಸಿಎಂ ಜತೆ ಚರ್ಚಿಸಲಾಗುವುದು

ವಕೀಲರ ಪ್ರತಿಭಟನಾ ಸ್ಥಳಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಕೀಲರ ಒತ್ತಾಯದ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಚರ್ಚಿಸುತ್ತೇನೆ. ವಕೀಲರಿಂದ ಮನವಿ ಪತ್ರ ಸ್ವೀಕರಿಸಿದ್ದೇನೆ, ಸದ್ಯ ಪ್ರತಿಭಟನೆ ವಾಪಾಸ್ ಪಡೆದಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here