Home Uncategorized Cheteshwar Pujara: ಪೂಜಾರ ವೇಗದ ಶತಕ ಸಿಡಿಸಿದ ಸಂದರ್ಭ ಮೈದಾನದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

Cheteshwar Pujara: ಪೂಜಾರ ವೇಗದ ಶತಕ ಸಿಡಿಸಿದ ಸಂದರ್ಭ ಮೈದಾನದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

18
0

ಛತ್ತೋಗ್ರಾಮ್​ನ ಝಹೂರ್‌ ಅಹ್ಮದ್‌ ಚೌಧುರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Bangladesh) ಭರ್ಜರಿ ಪ್ರದರ್ಶನ ತೋರುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 258 ರನ್​ಗೆ ಡಿಕ್ಲೇರ್ ಘೋಷಿಸಿರುವ ಟೀಮ್ ಇಂಡಿಯಾ ಎದುರಾಳಿಗೆ ಗೆಲ್ಲಲು ಬರೋಬ್ಬರಿ 513 ರನ್​ಗಳ ಬಿಗ್ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ಬಾಂಗ್ಲಾದೇಶ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು ಪ್ರಥಮ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಪರ ಶುಭ್​ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ (Cheteshwar Pujara) ಇಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು. ಅದರಲ್ಲೂ ಪೂಜಾರ ತನ್ನ ಟೆಸ್ಟ್ ವೃತ್ತಿ ಜೀವನದಲ್ಲಿ ವೇಗದ ಸೆಂಚುರಿ ಬಾರಿಸಿದರು. ಈ ಸಂದರ್ಭ ವಿರಾಟ್ ಕೊಹ್ಲಿ (Virat Kohli) ಏನು ಮಾಡಿದ್ರು ನೋಡಿ.

ಬಾಂಗ್ಲಾದೇಶವನ್ನು ಕೇವಲ 150 ರನ್​ಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ ನಾಯಕ ಕೆಎಲ್ ರಾಹುಲ್ (23) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಗಿಲ್ ಹಾಗೂ ಪೂಜಾರ. 113 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ವೇಗವಾಗಿ ರನ್ ಕಲೆಹಾಕಿತು. ಗಿಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರೆ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲೇ ಅತಿ ವೇಗವಾಗಿ ಶತಕ ಸಿಡಿಸಿದ ಸಾಧನೆ ಮಾಡಿದರು. ಅಲ್ಲದೆ 52 ಇನ್ನಿಂಗ್ಸ್​ನಲ್ಲಿ ಮೂಡಿ ಬಂದ ಮೊದಲ ಸೆಂಚುರಿಯೂ ಆಗಿದೆ.

ಮತ್ತೊಂದು ಅದ್ಭುತ ಸೃಷ್ಟಿಸಿದ ಚಿನ್ನದ ಹುಡುಗ; ಉಸೇನ್ ಬೋಲ್ಟ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ನೀರಜ್!

ಒಟ್ಟು 130 ಎಸೆತಗಳಲ್ಲಿ ಎದುರಿಸಿದ ಪೂಜಾರ 13 ಫೋರ್ ಬಾರಿಸಿ ಅಜೇಯ 102 ರನ್ ಕಲೆಹಾಕಿದರು. ಈ ಸಂದರ್ಭ ನಾನ್​ಸ್ಟ್ರೈಕರ್​ನಲ್ಲಿದ್ದ ವಿರಾಟ್ ಕೊಹ್ಲಿ ಅವರು ಪೂಜಾರ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿ ಕೈ ಹಾಗೂ ಬ್ಯಾಟ್ ಅನ್ನು ಎತ್ತಿ ಖುಷಿ ಪಟ್ಟರು. ಜೊತೆಗೆ ಪೂಜಾರ ಅವರನ್ನು ಅಪ್ಪಿಕೊಂಡರು. ಪೂಜಾರ ಶತಕ ಬಾರಿಸುತ್ತಿದ್ದಂತೆ ಭಾರತ ಡಿಕ್ಲೇರ್ ಘೋಷಿಸಿತು. ಪ್ರಥಮ ಇನ್ನಿಂಗ್ಸ್​ನಲ್ಲಿ ಕೂಡ ಪೂಜಾರ 203 ಎಸೆತಗಳಲ್ಲಿ 11 ಫೋರ್ ಬಾರಿಸಿ 90 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಭಾರತ ದ್ವಿತೀಯ ಇನ್ನಿಂಗ್ಸ್​ನಲ್ಲಿ 61.4 ಓವರ್​ಗೆ 2 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಕೊಹ್ಲಿ ಅಜೇಯ 19 ರನ್ ಗಳಿಸಿದರು.

 

for #pujara #INDvBAN #TestCricket @cheteshwar1 pic.twitter.com/InChz7aFjR

— Deepak Mehta (@Dpak770) December 16, 2022

ಗಿಲ್ ಚೊಚ್ಚಲ ಸೆಂಚುರಿ:

ಎರಡನೇ ಇನ್ನಿಂಗ್ಸ್​ನಲ್ಲಿ ಆರಂಭಿಕರಾದ ನಾಯಕ ಕೆ ಎಲ್​ ರಾಹುಲ್​ ಮತ್ತು ಶುಭ್​ಮನ್​ ಗಿಲ್ ಮೊದಲ ವಿಕೆಟ್‌ಗೆ​ 70 ರನ್​ಗಳನ್ನು ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. ಇದರಲ್ಲಿ ಗಿಲ್ ಪಾಲೇ ಅಧಿಕವಾಗಿತ್ತು. ರಾಹುಲ್ ನಿರ್ಗಮನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಚೇತೇಶ್ವರ ಪೂಜಾರ ಜೊತೆಗೂಡಿ ಗಿಲ್ ಆಕರ್ಷಕ ಆಟವಾಡಿ 113 ರನ್​ಗಳ ಜೊತೆಯಾಟ ನೀಡಿದರು. ಗಿಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಸೆಂಚುರಿ ಬಾರಿಸಿ ಮಿಂಚಿದರು. 10 ಬೌಂಡರಿ ಮತ್ತು 3 ಸಿಕ್ಸರ್​ಗಳೊಂದಿಗೆ 152 ಎಸೆತಗಳಲ್ಲಿ 110 ರನ್​​ ಬಾರಿಸಿದ ಗಿಲ್, ಮೆಹಿದಿ ಹಸನ್ ಮಿರಾಜ್ ಬೌಲಿಂಗ್​ನಲ್ಲಿ ಔಟಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್‌ ಈವರೆಗೆ ಆಡಿರುವ 11 ಪಂದ್ಯಗಳಿಂದ ಒಟ್ಟಾರೆ 579 ರನ್‌ಗಳನ್ನು ಭಾರಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿದ್ದವು. ಇನ್ನು ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಚೇತೇಶ್ವರ್‌ ಪೂಜಾರ ಕೂಡ ಶತಕ ಬಾರಿಸಿ ಭಾರತದ ಒಟ್ಟು ಮುನ್ನಡೆಯನ್ನು 500ರ ಗಡಿ ದಾಟಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here