Home Uncategorized ಇನ್ನೂ ಬಿಡುಗಡೆಯಾಗದ ನಿಮ್ಮ ಬಸ್ ಆ್ಯಪ್: ಹೊಸ ಹೆಸರಿಗೆ ಬಿಎಂಟಿಸಿ ಹುಡುಕಾಟ!

ಇನ್ನೂ ಬಿಡುಗಡೆಯಾಗದ ನಿಮ್ಮ ಬಸ್ ಆ್ಯಪ್: ಹೊಸ ಹೆಸರಿಗೆ ಬಿಎಂಟಿಸಿ ಹುಡುಕಾಟ!

16
0
Advertisement
bengaluru

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಹು ನಿರೀಕ್ಷಿತ ನಿಮ್ಮ ಬಸ್ ಆ್ಯಪ್ ಇನ್ನೂ ಬಿಡುಗಡೆಯಾಗಿಲ್ಲ. ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಹು ನಿರೀಕ್ಷಿತ ನಿಮ್ಮ ಬಸ್ ಆ್ಯಪ್ ಇನ್ನೂ ಬಿಡುಗಡೆಯಾಗಿಲ್ಲ.

ಆ್ಯಪ್ ಗೆ ಹೊಸ ಹೆಸರಿಡಲು ಬಿಎಂಟಿಸಿ ಮುಂದಾಗಿದ್ದು, ಇದಕ್ಕಾಗಿ ಹುಡುಕಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಈ ಆ್ಯಪ್ ಡಿಸೆಂಬರ್ 23 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಈ ದಿನಾಂಕವನ್ನು ಮುಂದೂಡಲಾಗಿತ್ತು. ನಂತರ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಆ ದಿನವೂ ಆ್ಯಪ್’ನ್ನು ಬಿಡುಗಡೆ ಮಾಡಲಾಗಿಲ್ಲ. ಸೀಮಿತ ಜನರಿಗಷ್ಟೇ ಆ್ಯಪ್ ಬಳಕೆಗೆ ಬಿಎಂಟಿಸಿ ಅವಕಾಶ ನೀಡಿತ್ತು. ಈ ವೇಳೆ ಆ್ಯಪ್ ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದು, ಇದನ್ನು ಸರಿಪಡಿಸಿ, ಆ್ಯಪ್’ಗೆ ಹೊಸ ಹೆಸರು ನೀಡಲು ಬಿಎಂಟಿಸಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಬಹು ನಿರೀಕ್ಷಿತ ನಿಮ್ಮ​ಬಸ್ ಆ್ಯಪ್​ನಲ್ಲಿ ಬಿಎಂಟಿಸಿ ಬಸ್​ಗಳ ಕ್ಷಣಕ್ಷಣದ ಸಂಚಾರ ವಿವರ ಲಭ್ಯವಾಗಲಿದೆ. ಅದರ ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್​ಒಎಸ್ (SOS) ಎಚ್ಚರಿಕೆಯ ಸೌಲಭ್ಯವೂ ಇರಲಿದೆ. ಅಲ್ಲದೆ, ವಿವಿಧ ಮಾರ್ಗಗಳು ಮತ್ತು ಟಿಕೆಟ್ ದರಗಳ ಮಾಹಿತಿಯನ್ನೂ ಆ್ಯಪ್ ಹೊಂದಿರಲಿದೆ.

bengaluru bengaluru

2016 ರಲ್ಲಿ, ಸಾರಿಗೆ ನಿಗಮವು ತನ್ನ ಮೊದಲ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿತ್ತು. ಆದರೆ, ಈ ಆ್ಯಪ್ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ವಿಫಲಗೊಂಡಿತ್ತು. ನಂತರ, 2019 ರಲ್ಲಿ ಮತ್ತೊಂದು ಆ್ಯಪ್ ನ್ನು ಆರಂಭಿಸಲಾಗಿತ್ತು. ಇದರಲ್ಲಿಯೂ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಆ್ಯಪ್ ನ್ನು ಸ್ಥಗಿತಗೊಳಿಸಲಾಗಿತ್ತು. ಈ ಎರಡು ಆ್ಯಪ್ ಗಳಿಂದ ಕಲಿತ ಪಾಠಗಳನ್ನು ಗಮನದಲ್ಲಿಟ್ಟುಕೊಂಡು ಆ್ಯಪ್ ನ್ನು ಸಿದ್ಧಪಡಿಸುವಲ್ಲಿ ಬಿಎಂಟಿಸಿ ಬಹಳ ಎಚ್ಚರಿಕೆಯನ್ನು ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಆ್ಯಪ್ ಬಳಕೆ ವೇಳೆ ಎದುರಾಗುತ್ತಿರುವ ದೋಷಗಳು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಎಂಟಿಸಿ ಎಂಡಿ ಸತ್ಯವತಿ ತಿಳಿಸಿದ್ದಾರೆ.

ಆ್ಯಪ್ ನಲ್ಲಿರುವ ದೋಷಗಳನ್ನು ಸರಿಪಡಿಸುತ್ತಿದ್ದೇವೆ. ಹೀಗಾಗಿ ಆ್ಯಪ್ ಬಿಡುಗಡೆಗೆ ಸಮಯ ತೆಗೆದುಕೊಳ್ಳುತ್ತಿದೆ. ಅದಲ್ಲದೆ, ಅಪ್ಲಿಕೇಶನ್’ಗೆ ಹೊಸ ಹೆಸರಿಗೂ ಹುಡುಕಾಟ ನಡೆಸಲಾಗುತ್ತಿದೆ. ನಿಮ್ಮ ಬಸ್ ಹೆಸರು ಆಕರ್ಷಕವಾಗಿಲ್ಲದ ಕಾರಣ, ಹೊಸ ಹೆಸರಿಗೆ ಹುಡುಕಾಟ ಆರಂಭಿಸಿದ್ದೇವೆ. ಆ್ಯಪ್‌ಗೆ ಕನ್ನಡದ ಆಕರ್ಷಕ ಹೆಸರನ್ನು ನೀಡಲು ನಾವು ಬಯಸುತ್ತಿದ್ದೇವೆಂದು ಹೇಳಿದ್ದಾರೆ.

ಆ್ಯಪ್ ಬಿಡುಗಡೆಯಾಗುತ್ತಿದ್ದಂತೆಯೇ 10 ಲಕ್ಷಕ್ಕೂ ಹೆಚ್ಚು ಜನರು ಆ್ಯಪ್ ಡೌನ್‌ಲೋಡ್‌ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಆ ಆ್ಯಪ್ Android ಮತ್ತು IOS ಬಳಕೆದಾರರಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರಲಿದೆ.


bengaluru

LEAVE A REPLY

Please enter your comment!
Please enter your name here