Home Uncategorized ಏರೋ ಇಂಡಿಯಾ 2023: ಮಾಂಸ ಮಾರಾಟ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ, ಹೋಟೆಲ್‌ಗಳಲ್ಲಿ ಮಾಂಸಹಾರ ಮಾರಾಟ...

ಏರೋ ಇಂಡಿಯಾ 2023: ಮಾಂಸ ಮಾರಾಟ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ, ಹೋಟೆಲ್‌ಗಳಲ್ಲಿ ಮಾಂಸಹಾರ ಮಾರಾಟ ಷರತ್ತು ಬದ್ಧ ಅನುಮತಿ

20
0

ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ–2023’ ಪ್ರದರ್ಶನದ ಅಂಗವಾಗಿ ಮಾಂಸ ಮಾರಾಟ, ಹೋಟೆಲ್‌ಗಳಲ್ಲಿ ಮಾಂಸದೂಟಕ್ಕೆ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೆಂಗಳೂರು: ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ–2023’ ಪ್ರದರ್ಶನದ ಅಂಗವಾಗಿ ಮಾಂಸ ಮಾರಾಟ, ಹೋಟೆಲ್‌ಗಳಲ್ಲಿ ಮಾಂಸದೂಟಕ್ಕೆ ನಿಷೇಧ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದೆ.

ಫೆಬ್ರವರಿ13ರಿಂದ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಮಾಂಸ ಮಾರಾಟ, ಹೋಟೆಲ್‌ಗಳಲ್ಲಿ ಮಾಂಸದೂಟಕ್ಕೆ ಈ ಹಿಂದೆ ನಿಷೇಧ ಹೇರಲಾಗಿತ್ತು.

ಇದೀಗ ಈ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಹೋಟೆಲ್‌ಗಳಲ್ಲಿ ಮಾಂಸಹಾರ ಮಾರಾಟ ಮಾಡಲು ಷರತ್ತುಬದ್ಧ ಅನುಮತಿ ನೀಡಿದೆ.

ವಿಮಾನಗಳಿಗೆ ಹಕ್ಕಿಗಳು ಪ್ರಮುಖ ಶತ್ರು. ಮಾಂಸ ಮಾರಾಟ, ಮಾಂಸ ತ್ಯಾಜ್ಯಗಳು ಇರುವಲ್ಲಿ ಹಕ್ಕಿಗಳ ಹಾರಾಟ ಹೆಚ್ಚಿರುತ್ತದೆ. ಇದರಿಂದ ವಿಮಾನಗಳಿಗೆ ಅಪಾಯವಾಗುತ್ತದೆ.  ಹೀಗಾಗಿ, ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಹೋಟೆಲ್‌ಗಳಲ್ಲಿ ಮಾಂಸದ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಷರತ್ತಿಗೆ ಒಳಪಟ್ಟು ಮಾಂಸಹಾರ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಫೆ.13ರಿಂದ 17ರವರೆಗೆ ನಡೆಯಲಿರುವ ಪ್ರದರ್ಶನದ ಸಂದರ್ಭದಲ್ಲಿ ಹಕ್ಕಿಗಳ ಹಾರಾಟ ತಡೆಯುವ ಸಲುವಾಗಿ ವಿಂಗ್ ಕಮಾಂಡರ್ ಅವರ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮಾಂಸಾಹಾರಿ ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕವಾಗಿ ಬಿಸಾಡದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ ಮತ್ತು ಭಾರತೀಯ ಏರ್‌ಕ್ರಾಫ್ಟ್ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದೆ.

LEAVE A REPLY

Please enter your comment!
Please enter your name here