Home Uncategorized ಕರ್ನಾಟಕ: ಹೆಲ್ಪ್ ಲೈನ್ ನಂಬರ್ ಮೂಲಕ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿದ ವ್ಯಕ್ತಿಗೆ 99,997 ರೂಪಾಯಿ...

ಕರ್ನಾಟಕ: ಹೆಲ್ಪ್ ಲೈನ್ ನಂಬರ್ ಮೂಲಕ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿದ ವ್ಯಕ್ತಿಗೆ 99,997 ರೂಪಾಯಿ ವಂಚನೆ! 

23
0

ಇಂಟರ್ ನೆಟ್ ನಲ್ಲಿ ಲಭ್ಯವಿದ್ದ ಹೆಲ್ಪ್ ಲೈನ್ ಮುಖಾಂತರ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿದ ವ್ಯಕ್ತಿಗೆ 99,997 ರೂಪಾಯಿ ವಂಚನೆಯಾಗಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ವರದಿಯಾಗಿದೆ.  ಇಂಟರ್ ನೆಟ್ ನಲ್ಲಿ ಲಭ್ಯವಿದ್ದ ಹೆಲ್ಪ್ ಲೈನ್ ಮುಖಾಂತರ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿದ ವ್ಯಕ್ತಿಗೆ 99,997 ರೂಪಾಯಿ ವಂಚನೆಯಾಗಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ವರದಿಯಾಗಿದೆ. 
 
ಜ.29 ರಂದು ಫ್ರಾನ್ಸಿಸ್ ಪಿಯಸ್ ಎಂಬ ವ್ಯಕ್ತಿ ಬ್ರಹ್ಮಾವರದಿಂದ ಮಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು ಹೆಜಮಾಡಿ ಬಳಿ ಟೋಲ್ ಪ್ಲಾಜಾ ದಾಟಬೇಕಿತ್ತು ಆದರೆ ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಕಡಿಮೆ ಇತ್ತು.  ಇದಕ್ಕಾಗಿ ಇಂಟರ್ ನೆಟ್ ನಲ್ಲಿ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ನಂಬರ್ ಪಡೆದಿದ್ದರು. ಪರಿಣಾಮ 5 ಬೇರೆ ಬೇರೆ ವಹಿವಾಟುಗಳಲ್ಲಿ 99,997 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. 

ಹೆಲ್ಪ್ ಲೈನ್ ಮೂಲಕ ಪಡೆದ ನಂಬರ್ ನಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ, ಆತನನ್ನು ಪೇಟಿಎಂ ಫಾಸ್ಟ್ ಟ್ಯಾಗ್ ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ ಹಾಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ.  ವಂಚಕ ವ್ಯಕ್ತಿ ಪಿಯಸ್ ಗೆ ಒಟಿಪಿ ನೀಡುವಂತೆ ಕೇಳಿದ್ದ. ಒಟಿಪಿ ನೀಡಿದ್ದರ ಪರಿಣಾಮ ಪಿಯಸ್ ಮೊದಲ ಬಾರಿಗೆ 49,000 ರೂಪಾಯಿಗಳನ್ನು ಕಳೆದುಕೊಂಡರು ಅಷ್ಟೇ ಅಲ್ಲದೇ ಇದೇ ರೀತಿ ನಾಲ್ಕು ವಹಿವಾಟುಗಳಲ್ಲಿ ಒಟ್ಟು 99,997 ರೂಪಾಯಿಗಳನ್ನು ಫ್ರಾನ್ಸಿಸ್ ಕಳೆದುಕೊಂಡರು.

ಈ ಪ್ರಕರಣದ ಸಂಬಂಧ ಸಂತ್ರಸ್ತ ಫ್ರಾನ್ಸಿಸ್ ನೀಡಿದ ದೂರಿನ ಆಧಾರದಲ್ಲಿ ಉಡುಪಿ ಸಿಇಎನ್ ಪೊಲೀಸರು ಸೈಬರ್ ವಂಚನೆ ಪ್ರಕರಾಣವನ್ನು ದಾಖಲಿಸಿಕೊಂಡಿದಾರೆ.

ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಸಂತ್ರಸ್ತ ನಕಲಿ ನಂಬರ್ ಗೆ ಕರೆ ಮಾಡಿದ್ದ. ಅನುಮಾನಾಸ್ಪದ ಮೊಬೈಲ್ ಆಪ್ ನ್ನು ಡೌನ್ ಲೋಡ್ ಮಾಡಿ ಹಣ ಕಳೆದುಕೊಂಡಿದ್ದಾರೆ. ಕಡಿತಗೊಂಡಿರುವ ಹಣ ಯಾವ ಬ್ಯಾಂಕ್ ಗೆ ಹೋಗಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. 

LEAVE A REPLY

Please enter your comment!
Please enter your name here