Home Uncategorized ಖರ್ಗೆ ಹೇಳಿಕೆ ಖಂಡಿಸುವ ಭರದಲ್ಲಿ ಕಾಂಗ್ರೆಸ್​​ ನಾಯಕರನ್ನು ಸೋನಿಯಾ ಗಾಂಧಿಯ ದರ್ಬಾರ್​​ನ ನಾಯಿ ಎಂದ ಬಿಜೆಪಿ...

ಖರ್ಗೆ ಹೇಳಿಕೆ ಖಂಡಿಸುವ ಭರದಲ್ಲಿ ಕಾಂಗ್ರೆಸ್​​ ನಾಯಕರನ್ನು ಸೋನಿಯಾ ಗಾಂಧಿಯ ದರ್ಬಾರ್​​ನ ನಾಯಿ ಎಂದ ಬಿಜೆಪಿ ಶಾಸಕ

3
0

ದೇಶಕ್ಕಾಗಿ ನಿಮ್ಮ ನಾಯಿಯಾದರೂ ಸತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸಿತ್ತು. ಸಂಸತ್ ಅಧಿವೇಶನದಲ್ಲೂ ಖರ್ಗೆ ಹೇಳಿಕೆ ಚರ್ಚೆಯಾಗಿದ್ದು ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಆದರೆ ಖರ್ಗೆಯವರು ಕ್ಷಮೆ ಕೇಳಲು ನಿರಾಕರಿಸಿದ್ದರು. ಈ ನಡುವೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಖರ್ಗೆ ಅವರ ಹೇಳಿಕೆ ಖಂಡಿಸುವ ಭರದಲ್ಲಿ ಕಾಂಗ್ರೆಸ್ ನಾಯಕರನ್ನು ದರ್ಬಾರಿ ಕುತ್ತೇ (ದರ್ಬಾರ್​ನ ನಾಯಿಗಳು) ಎಂದು ಕರೆದಿದ್ದಾರೆ. ಭೋಪಾಲದ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ (Rameshwar Sharma) ಅವರು ಕಾಂಗ್ರೆಸ್​​ನವರು ಸೋನಿಯಾ ಗಾಂಧಿಯವರ ದರ್ಬಾರಿ ನಾಯಿಯಂತೆ ಸುತ್ತುತ್ತಿರುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿನವರಿಗೆ ನಾಯಿಗಳನ್ನು ಲೆಕ್ಕ ಹಾಕುವುದು ಅಭ್ಯಾಸವಾಗಿ ಹೋಗಿದೆ. ಅವರಿಗೆ ವ್ಯಕ್ತಿ ಮತ್ತು ನಾಯಕರು ಬೇಕಾಗಿಲ್ಲ. ದೇಶಭಕ್ತರ ಬಗ್ಗೆ ಅವರಿಗೆ ಗೌರವ ಇಲ್ಲ. ಈ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ದರ್ಬಾರಿ ನಾಯಿಗಳಂತೆ ಸುತ್ತುತ್ತಿರುತ್ತಾರೆ. ಹಾಗಾಗಿ ಅವರು ಮತ್ತೊಬ್ಬರನ್ನೂ ಹಾಗೇ ನೋಡುತ್ತಾರೆ. ಖರ್ಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

#WATCH | Speaking on Congress chief Mallikarjun Kharge’s “dog” remark, Madhya Pradesh BJP MLA Rameshwar Sharma says, “…Congress people roam around like ‘darbari kutte’ of Sonia Gandhi so they view others as the same…” pic.twitter.com/8XCgDA1OFm

— ANI MP/CG/Rajasthan (@ANI_MP_CG_RJ) December 21, 2022

ಅಂದಹಾಗೆ ಈ ಹೇಳಿಕೆಗೆ ಕಾಂಗ್ರೆಸ್ ಈವರೆಗೆ ಪ್ರತಿಕ್ರಿಯಿಸಿಲ್ಲ.

ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಚೀನಾ ಪಡೆ ನಡುವೆ ಭಾರತೀಯ ಸೇನೆಯ ಮುಖಾಮುಖಿಯಾಗಿರುವ ವಿಷಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಬಿಜೆಪಿ ಹೊರಗಡೆ ಸಿಂಹದಂತೆ ಮಾತಾಡುತ್ತದೆ, ಆದರೆ ಅದು ಇಲಿಯಂತೆ ವರ್ತಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್ ಇನ್ನೂ ಮುಗಿದಿಲ್ಲ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧ: ಮನ್ಸುಖ್ ಮಾಂಡವಿಯ

ಭಾರತ್ ಜೋಡೋ ಯಾತ್ರೆಯ 100ನೇ ದಿನ ರಾಜಸ್ಥಾನದ ಅಲ್ವಾರ್ ನಲ್ಲಿ ಮಾತನಾಡಿದ ಖರ್ಗೆ, ನಮ್ಮ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಬಲಿದಾನ ನೀಡಿದೆ. ಆದರೆ ನಿಮ್ಮ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯಾ ಎಂದು ಕೇಳಿದ್ದರು. ಖರ್ಗೆ ಮಾತಿಗೆ ಆಕ್ಷೇಪ ವ್ಯಕ್ತ ಪಡಿಸಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್, ಕಿರಣ್ ರಿಜಿಜು ಒತ್ತಾಯಿಸಿದ್ದರು.

ಆದಾಗ್ಯೂ, ತಾವು ಕ್ಷಮೆ ಕೇಳುವುದಿಲ್ಲ ಎಂದು ಖರ್ಗೆ ಪ್ರತಿಕ್ರಿಯಿಸಿದ್ದಾರೆ.ನಾನು ಸದನದ ಹೊರಗೆ ಈ ಮಾತನ್ನು ಹೇಳಿದ್ದೇನೆ, ಸದನದ ಒಳಗೆ ಅಲ್ಲ. ಅದನ್ನು ಇಲ್ಲಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here