Home Uncategorized ಜಿ-20 ಸಭೆ: ಆಶೀಶ್‌ ಸಿನ್ಹಾ ನೇತೃತ್ವದ 6 ಸದಸ್ಯರ ತಂಡ ಹಂಪಿಗೆ ಭೇಟಿ

ಜಿ-20 ಸಭೆ: ಆಶೀಶ್‌ ಸಿನ್ಹಾ ನೇತೃತ್ವದ 6 ಸದಸ್ಯರ ತಂಡ ಹಂಪಿಗೆ ಭೇಟಿ

6
0

ಈ ವರ್ಷದ ಜುಲೈ ತಿಂಗಳಲ್ಲಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ.20 ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಭೆಯ ಪೂರ್ವಭಾವಿಯಾಗಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಇಎಎಂ) ಆಶೀಶ್‌ ಸಿನ್ಹಾ ನೇತೃತ್ವದ ಆರು ಸದಸ್ಯರ ತಂಡವು ಇತ್ತೀಚೆಗೆ ಹಂಪಿಗೆ ಭೇಟಿ ನೀಡಿ, ಸಭೆ ನಡೆಸಿತು. ಹೊಸಪೇಟೆ: ಈ ವರ್ಷದ ಜುಲೈ ತಿಂಗಳಲ್ಲಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ.20 ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಭೆಯ ಪೂರ್ವಭಾವಿಯಾಗಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಇಎಎಂ) ಆಶೀಶ್‌ ಸಿನ್ಹಾ ನೇತೃತ್ವದ ಆರು ಸದಸ್ಯರ ತಂಡವು ಇತ್ತೀಚೆಗೆ ಹಂಪಿಗೆ ಭೇಟಿ ನೀಡಿ, ಸಭೆ ನಡೆಸಿತು.

ಭಾರತ ಜಿ.20 ದೇಶಗಳ ಮುಖ್ಯಸ್ಥನಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ 200ಕ್ಕೂ ಅಧಿಕ ಸ್ಥಳಗಳಲ್ಲಿ ಸಭೆಗಳು ನಡೆಯಲಿವೆ. ಹಂಪಿಯಲ್ಲೂ ಒಂದು ಸಭೆ ನಡೆಸಲು ಭಾರತೀಯ ವಿದೇಶಾಂಗ ಸಚಿವಾಲಯ ಉತ್ಸುಕವಾಗಿದೆ.

ಭಾರತೀಯ ವಾಸ್ತುಶಿಲ್ಪ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ವಿಜಯನಗರದ ಆಳರಸರ ರಾಜಧಾನಿ ಹಂಪಿಯಲ್ಲಿ ಜಿ-20 ಸಮಿಟ್‌ ನಡೆಸುವ ಮೂಲಕ ಸ್ಮರಣೀಯವಾಗಿಸುವ ಚಿಂತನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿವೆ.

ಸಭೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡ ಕೆಲ ದಿನಗಳಿ ಹಿಂದೆ ವಿಜಯನಗರ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ವಿವಿಧೆಡೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ವಿಜಯನಗರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮಾತನಾಡಿ, ಹಂಪಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿ20 ರಾಷ್ಟ್ರಗಳ 200 ಅತಿಥಿಗಳು ಭಾಗವಹಿಸಲಿದ್ದಾರೆ. ಕಳೆದ ವಾರ ಹಂಪಿಯ ವಿಜಯ ವಿಠಲ ದೇವಸ್ಥಾನ ಆವರಣ, ವಿರೂಪಾಕ್ಷ ದೇವಸ್ಥಾನ, ಎಡರು ಬಸವಣ್ಣನ ದೇವಸ್ಥಾನ ಆವರಣ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆದರೆ ಸಭೆ ನಡೆಯುವ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತಗಳೊಂದಿಗೆ ಇನ್ನೂ ಕೆಲವು ಸುತ್ತಿನ ಸಭೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಅಧಿಕಾರಿ ಮಾತನಾಡಿ, ಹಂಪಿ ಸೇರಿದಂತೆ ಹಲವು ಎಎಸ್‌ಐ ಸಂರಕ್ಷಿತ ತಾಣಗಳಲ್ಲಿ ಜಿ20 ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಭಾರತದ ಜಿ 20 ಅಧ್ಯಕ್ಷ ಸ್ಥಾನವನ್ನು ಗುರುತಿಸಿ, ಹಂಪಿ ಸೇರಿದಂತೆ ಭಾರತದಲ್ಲಿ 100 ಆಯ್ದ ಸ್ಮಾರಕಗಳನ್ನು ದೀಪಾಲಂಕಾರದಿಂದ ಅಲಂಕರಿಸಲಾಗುವುದು. ಇನ್ನೊಂದು ತಂಡ ಶೀಘ್ರದಲ್ಲೇ ಹಂಪಿಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here