Home Uncategorized ತಾಯಿಯ ಅಕ್ರಮ ಸಂಬಂಧ; ಅಪ್ರಾಪ್ತ ಮಗುವಿನ ಪಾಲನೆಯನ್ನು ತಂದೆಗೆ ನೀಡಿದ ಕರ್ನಾಟಕ ಹೈಕೋರ್ಟ್ 

ತಾಯಿಯ ಅಕ್ರಮ ಸಂಬಂಧ; ಅಪ್ರಾಪ್ತ ಮಗುವಿನ ಪಾಲನೆಯನ್ನು ತಂದೆಗೆ ನೀಡಿದ ಕರ್ನಾಟಕ ಹೈಕೋರ್ಟ್ 

19
0
Advertisement
bengaluru

ಅಪ್ರಾಪ್ತ ಮಗುವಿನ ಪಾಲನೆಯ ಹಕ್ಕನ್ನು ತಂದೆಗೆ ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಮಹಿಳೆಯು ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಮಗುವಿನ ತಂದೆ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಬೆಂಗಳೂರು: ಅಪ್ರಾಪ್ತ ಮಗುವಿನ ಪಾಲನೆಯ ಹಕ್ಕನ್ನು ತಂದೆಗೆ ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಮಹಿಳೆಯು ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಮಗುವಿನ ತಂದೆ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು.

ಆಕೆ ತನ್ನ ಅಕ್ರಮ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ ಮತ್ತು ಮಗುವನ್ನು ನಿರ್ಲಕ್ಷ್ಯಿಸಿದ್ದಾಳೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಮಗುವಿನೊಂದಿಗೆ ವೈವಾಹಿಕ ಮನೆಯನ್ನು ತೊರೆದ ನಂತರ, ಮಹಿಳೆ ತನ್ನ ಹೊಸ ಸಂಗಾತಿಯೊಂದಿಗೆ ಬೆಂಗಳೂರಿನಲ್ಲಿ ಉಲಿದುಕೊಂಡಿದ್ದು, ಚಂಡೀಗಢದಲ್ಲಿ ತನ್ನ ಪೋಷಕರ ವಶದಲ್ಲಿ ಮಗುವನ್ನು ಬಿಟ್ಟಿದ್ದರು. ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದು, ವಿಚ್ಛೇದಿತರಾಗಿದ್ದರು. ಅವರ ಹಿಂದಿನ ಮದುವೆಯಿಂದ ಅವರಿಗೆ ಯಾವುದೇ ಮಕ್ಕಳಿರಲಿಲ್ಲ.

ಅವರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾಗಿ 2011 ರಲ್ಲಿ ವಿವಾಹವಾದರು. 2015 ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಬಳಿಕ ಬಿನ್ನಾಭಿಪ್ರಾಯ ತಲೆದೋರಿ ಇಬ್ಬರು ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ನಂತರ, ಮಹಿಳೆ 2018 ರಲ್ಲಿ ಮಗುವಿನೊಂದಿಗೆ ವೈವಾಹಿಕ ಮನೆಯನ್ನು ತೊರೆದಿದ್ದರು.

bengaluru bengaluru

ಪತ್ನಿಯ ಅನೈತಿಕ ಸಂಬಂಧದ ವಿಚಾರ ತಿಳಿದ ಪತಿ, ಮಗುವನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಪ್ರಕರಣ ದಾಖಲಿಸಿದ್ದರು.

ಮೇಲ್ಮನವಿದಾರರ ಅಕ್ರಮ ಸಂಬಂಧದ ನಡುವೆ ಮಗು ಕೆಟ್ಟ ವಾತಾವರಣದಲ್ಲಿ ಬೆಳೆಯುತ್ತಿರುವುದರಿಂದ, ಪ್ರತಿವಾದಿಯು ಮಗುವಿನ ಯೋಗಕ್ಷೇಮ ಮತ್ತು ಅದರ ಭವಿಷ್ಯವು ಮೇಲ್ಮನವಿದಾರರಿಂದ ಸುರಕ್ಷಿತವಾಗಿಲ್ಲ ಮತ್ತು ಮಗುವನ್ನು ಅಲ್ಲಿಂದ ಕರೆತರುವ ಅಗತ್ಯವಿದೆ. ಮಗು ಸುರಕ್ಷಿತ ಮತ್ತು ಸ್ಥಿರ ವಾತಾವರಣದಲ್ಲಿ ಬೆಳೆಯಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

2022ರ ಮಾರ್ಚ್ 3ರಂದು ಕೌಟುಂಬಿಕ ನ್ಯಾಯಾಲಯವು ಅಪ್ರಾಪ್ತ ಮಗುವಿನ ಪಾಲನೆಯನ್ನು ಪತಿಗೆ ಹಸ್ತಾಂತರಿಸುವಂತೆ ಮಹಿಳೆಗೆ ಆದೇಶ ನೀಡಿತು. ಆಕೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮಹಿಳೆ ಮಗುವಿಗೆ ಆದ್ಯತೆ ನೀಡುತ್ತಿಲ್ಲ ಎಂದು ಪತಿ ಸಾಬೀತುಪಡಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.

ಪ್ರತಿವಾದಿಯು ಮೇಲ್ಮನವಿದಾರರ ಅಕ್ರಮ ಸಂಬಂಧವನ್ನು ಸಾಬೀತುಪಡಿಸಿದ್ದಾರೆ. ಮೇಲ್ಮನವಿದಾರರ ಸಂಬಂಧವು ವ್ಯವಹಾರ ಸಭೆಗಳನ್ನು ಮೀರಿದೆ ಎಂದು ನ್ಯಾಯಾಲಯದ ಮುಂದೆ ಯಶಸ್ವಿಯಾಗಿ ಸಾಬೀತಾಗಿದೆ ಮತ್ತು ಮಗುವಿನ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಹೋಲಿಸಿದರೆ ಅವರು ತಮ್ಮ ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ.
ಮಹಿಳೆ ಅಸಭ್ಯವಾಗಿ ವರ್ತಿಸಿದ್ದನ್ನೂ ಕೋರ್ಟ್ ಗಮನಿಸಿದೆ.

ಮೇಲ್ಮನವಿದಾರರು ಪ್ರತಿವಾದಿ ಮತ್ತು ಆಕೆಯ ಅತ್ತೆಯೊಂದಿಗೆ ಅಸಭ್ಯವಾಗಿ ವರ್ತಿಸುವುದು ಮಾತ್ರವಲ್ಲದೆ ಕೌಟುಂಬಿಕ ಸಮಾಲೋಚನೆಯ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆ ಪ್ರತಿವಾದಿಯೊಂದಿಗೆ ಸಾರ್ವಜನಿಕವಾಗಿ ಜಗಳವಾಡುವ ಅಭ್ಯಾಸವನ್ನು ಹೊಂದಿದ್ದರು ಎಂದು ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು ತಮ್ಮ ತೀರ್ಪಿನಲ್ಲಿ ಹೇಳಿದೆ.

ಹೀಗಾಗಿ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ ಮತ್ತು ‘ನ್ಯಾಯಾಲಯಗಳು ಅಪ್ರಾಪ್ತ ಮಗುವಿನ ಪಾಲನೆಯ ಪ್ರಶ್ನೆಯನ್ನು ಪರಿಗಣಿಸುವಾಗ, ಮಗುವಿನ ಒಟ್ಟಾರೆ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಭ್ಯ ಮತ್ತು ನೈತಿಕ ಕಲ್ಯಾಣದ ಜೊತೆಗೆ, ನ್ಯಾಯಾಲಯವು ಮಗುವಿನ ದೈಹಿಕ ಯೋಗಕ್ಷೇಮವನ್ನು ಪರಿಗಣಿಸಬೇಕು ಎಂಬುದು ನ್ಯಾಯಸಮ್ಮತ ಎಂದಿದೆ.


bengaluru

LEAVE A REPLY

Please enter your comment!
Please enter your name here