Home Uncategorized ನಾಯಿ, ಇಲಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು: ಸಂಸತ್​​ನಲ್ಲಿ ಬಿಜೆಪಿ ಪಟ್ಟು

ನಾಯಿ, ಇಲಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು: ಸಂಸತ್​​ನಲ್ಲಿ ಬಿಜೆಪಿ ಪಟ್ಟು

15
0

ದೆಹಲಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಯನ್ನು ಖಂಡಿಸಿದ ಆಡಳಿತಾರೂಢ ಬಿಜೆಪಿ (BJP), ಕಾಂಗ್ರೆಸ್ ಮುಖ್ಯಸ್ಥರು ಕ್ಷಮೆಯಾಚಿಸಬೇಕು ಎಂದು ಸಂಸತ್​​​ನಲ್ಲಿ (Parliament) ಪಟ್ಟು ಹಿಡಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಹಲವಾರು ತ್ಯಾಗಗಳನ್ನು ಮಾಡಿದೆ, ಆದರೆ ಬಿಜೆಪಿ ಯಾರೊಬ್ಬರನ್ನೂ ಕಳೆದುಕೊಂಡಿಲ್ಲ ಎಂದು ಖರ್ಗೆ ಹೇಳಿದ್ದರು. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ತಮ್ಮ ಪಕ್ಷದ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣವನ್ನು ಕಳೆದುಕೊಂಡರು ಎಂದು ಸೋಮವಾರ ರಾಜಸ್ಥಾನದ ಅಲ್ವಾರ್​​ನಲ್ಲಿ ಮಾತನಾಡಿದ ಖರ್ಗೆ ಹೇಳಿದ್ದರು. ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯಾ?, ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ ಎಂದಿದ್ದರು ಖರ್ಗೆ. ಮಂಗಳವಾರ ಸಂಸತ್ ಅಧಿವೇಶನ ಆರಂಭವಾದ ಕೂಡಲೇ ಬಿಜೆಪಿ ಖರ್ಗೆಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಅಲ್ವಾರ್​​ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಖರ್ಗೆ ಕ್ಷಮೆ ಕೇಳ ಕೇಳಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯುಷ್ ಗೋಯಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಖರ್ಗೆ ಕ್ಷಮೆಗೆ ಒತ್ತಾಯ ಜಾಸ್ತಿಯಾಗಿ ಸದನದಲ್ಲಿ ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಅದನ್ನು ನಿಯಂತ್ರಿಸಲು ಹೆಣಗಾಡಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್, ಖರ್ಗೆಯವರು ಸಂಸತ್​​ನ ಹೊರಗಡೆ ಈ ಹೇಳಿಕೆ ನೀಡಿದ್ದಾರೆ. ದೇಶದ 135 ಕೋಟಿ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಯಾರೋ ಹೊರಗಡೆ ಏನಾದರೂ ಹೇಳಿರುತ್ತಾರೆ. ನೀವೇನೂ ಮಕ್ಕಳಲ್ಲ ಎಂದಿದ್ದಾರೆ.

#WATCH हमने देश को आज़ादी दिलाई और देश की एकता के लिए इंदिरा और राजीव गांधी ने अपनी जान की क़ुर्बानी दी। हमारे पार्टी के नेताओं ने अपनी जान दी, आपने क्या किया? आपके घर में कोई देश के लिए कुत्ता तक मरा है? क्या(किसी ने) कोई क़ुर्बानी दी है? नहीं:कांग्रेस अध्यक्ष मल्लिकार्जुन खड़गे pic.twitter.com/faoHQMGZM0

— ANI_HindiNews (@AHindinews) December 19, 2022

ಏತನ್ಮಧ್ಯೆ, ಕ್ಷಮೆ ಕೇಳಲು ನಿರಾಕರಿಸಿದ ಖರ್ಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ನೀವು ಕ್ಷಮೆ ಕೇಳಲು ಒತ್ತಾಯಿಸುತ್ತಿದ್ದೀರಾ ಎಂದು ಗುಡುಗಿದ್ದಾರೆ. ರಾಜಸ್ಥಾನದ ಅಲ್ವಾರ್​​ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ನಾನು ಹೇಳಿಕೆ ನೀಡಿದ್ದೆ.ನಾನು ಸಂಸತ್​​ನ ಹೊರಗಡೆ ಹೇಳಿದ್ದೇನೆಯೇ ಹೊರತು ಒಳಗಡೆ ಅಲ್ಲ. ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಇನ್ನೊಂದು ಮಾತು, ನಾನು ಇನ್ನೂ ಅದನ್ನೇ ಒತ್ತಿ ಹೇಳುತ್ತೇನೆ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: Taj Mahal: ಪ್ರೀತಿಯ ಪ್ರತೀಕವಾದ ತಾಜ್​ಮಹಲ್​ಗೂ ತಟ್ಟಿದ ಕೋಟಿ ಕೋಟಿ ತೆರಿಗೆ ಬಿಸಿ

ಭಾರತ್ ಜೋಡೋ ಯಾತ್ರೆಯಲ್ಲಿ ಖರ್ಗೆ ಹೇಳಿದ್ದೇನು? 

ಸೋಮವಾರ ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ನಮ್ಮ ಹಲವು ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಿಮ್ಮ (ಬಿಜೆಪಿ) ಮನೆಯ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ. ಅವರು (ಬಿಜೆಪಿ ಸರ್ಕಾರ) ಹೊರಗಡೆ ಸಿಂಹದಂತೆ ಮಾತಾಡುತ್ತಾರೆ, ಆದರೆ ನೀವು ಅವರನ್ನು ನೋಡಿದರೆ ಇಲಿಯಂತೆ ವರ್ತಿಸುತ್ತಾರೆ. ಸಮಸ್ಯೆಗಳನ್ನು ಗಮನಕ್ಕೆ ತಂದು ಅದರ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಅವರು ಅದನ್ನು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧರಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here