Home Uncategorized ನಾಳೆಯಿಂದ ಲಾರಿ ಮಾಲೀಕರ ಮುಷ್ಕರ: ಅಗತ್ಯ ವಸ್ತುಗಳು, ಸರಕು ಸಾಗಣೆಯಲ್ಲಿ ವ್ಯತ್ಯಯ

ನಾಳೆಯಿಂದ ಲಾರಿ ಮಾಲೀಕರ ಮುಷ್ಕರ: ಅಗತ್ಯ ವಸ್ತುಗಳು, ಸರಕು ಸಾಗಣೆಯಲ್ಲಿ ವ್ಯತ್ಯಯ

18
0

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಮತ್ತು ಸೇವೆಯಲ್ಲಿ ವ್ಯತ್ಯಯ ಮಾಡಿ ಮುಷ್ಕರ ನಡೆಸುವವರ ಪಟ್ಟಿ ಹೆಚ್ಚಾಗುತ್ತಿದೆ. ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 17ರಿಂದ ಪ್ರತಿಭಟನೆ ಮುಷ್ಕರ ನಡೆಸಲಿವೆ. ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಮತ್ತು ಸೇವೆಯಲ್ಲಿ ವ್ಯತ್ಯಯ ಮಾಡಿ ಮುಷ್ಕರ ನಡೆಸುವವರ ಪಟ್ಟಿ ಹೆಚ್ಚಾಗುತ್ತಿದೆ. ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 17ರಿಂದ ಪ್ರತಿಭಟನೆ ಮುಷ್ಕರ ನಡೆಸಲಿವೆ. ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ನಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

ವಾಣಿಜ್ಯ ವಾಹನಗಳ ಎಫ್‌.ಸಿ ನವೀಕರಣಕ್ಕೆ ಕ್ಯೂಆರ್‌ ಕೋಡ್‌ ಇರುವ ರೆಟ್ರೋ ರಿಫ್ಲೆಕ್ಟರ್‌ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಇದಕ್ಕೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರು ನಗರದಲ್ಲಿ ಸರಕು ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.

ಅಗತ್ಯ ಸೇವೆಗಳಿಗೆ ವ್ಯತ್ಯಯ: ಮುಷ್ಕರ ಹಿನ್ನೆಲೆ ಇಂದಿನಿಂದ ಅಗತ್ಯ ವಸ್ತುಗಳ ಸರಕು ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೂವು, ಹಣ್ಣು, ಹಾಲು ತರಕಾರಿಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಸರಕು ಸಾಗಣೆ ವಾಹನಗಳು ಅನಿರ್ದಿಷ್ಟವಧಿ ಮುಷ್ಕರ ನಡೆಯಲಿದೆ. 

ಸಂಘದ ಬೇಡಿಕೆಗಳು: ಕ್ಯೂಆರ್ ಕೋಡ್ ಆಧಾರಿತ ರಿಫ್ಲ್ಕ್ಟರ್ ಟೇಪುಗಳನ್ನು ಅಳವಡಿಸಿಕೊಳ್ಳಬೇಕೆನ್ನುವ ನಿಯಮ ರದ್ದುಪಡಿಸಬೇಕು. ಬೆಂಗಳೂರು- ಮೈಸೂರು ರಸ್ತೆಯಲ್ಲಿ ದ್ವಿಚಕ್ರ ಮತ್ತು ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್ ಆಟೋರಿಕ್ಷಾಗಳ ಓಡಾಟ ನಿಷೇಧಿಸಬೇಕು ನೈಸ್ ರಸ್ತೆಯಲ್ಲಿ ಕಳೆದ 10 ವರ್ಷಗಳಿಂದಲೂ ತೆಗೆದುಕೊಳ್ಳುತ್ತಿರುವ ಟೋಲ್ ಶುಲ್ಕವನ್ನು ತೆಗೆದುಹಾಕಬೇಕು ನಗರದ ಒಳಗೆ ಅವೈಜ್ಞಾನಿಕ ಕ್ರಮದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿರುವ ನಿಯಮವನ್ನ ವಾಪಸ್ಸು ಪಡೆಯಬೇಕು.

LEAVE A REPLY

Please enter your comment!
Please enter your name here