Home Uncategorized ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 2ನೇ ಹಂತದ ಟೆಂಡರ್'ಗೆ ಆಹ್ವಾನ

ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 2ನೇ ಹಂತದ ಟೆಂಡರ್'ಗೆ ಆಹ್ವಾನ

19
0
Advertisement
bengaluru

ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ-ಆರ್‌ಐಡಿಇ) 15,767 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತದ ಟೆಂಡರ್’ಗೆ ಆಹ್ವಾನ ನೀಡಿದೆ. ಬೆಂಗಳೂರು: ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ-ಆರ್‌ಐಡಿಇ) 15,767 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತದ ಟೆಂಡರ್’ಗೆ ಆಹ್ವಾನ ನೀಡಿದೆ.

2ನೇ ಹಂತದಲ್ಲಿ ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ 4ನೇ ಕಾರಿಡಾರ್​ನ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್’ಗೆ ಆಹ್ವಾನ ನೀಡಲಾಗಿದೆ.

148 ಕಿಮೀ ಯೋಜನೆಯ 46.8 ಕಿಮೀ ಉದ್ದದ ಯಲಹಂಕ (ಕಾರಿಡಾರ್-4) ಮೂಲಕ ಹೀಲಲಿಗೆ-ರಾಜನಕುಂಟೆ ನಡುವಿನ ಕನಕ ಮಾರ್ಗದ ಸಿವಿಲ್ ಕಾಮಗಾರಿಯನ್ನು ಈ ಟೆಂಡರ್ ಒಳಗೊಂಡಿದೆ. ಏಪ್ರಿಲ್ 27 ಟೆಂಡರ್​ಗೆ ಬಿಡ್ ಸಲ್ಲಿಸಲು ಕೊನೆಯ ದಿನದ ಎಂದು ಘೋಷಿಸಲಾಗಿದೆ.

ಟೆಂಡರ್ ಅನ್ನು ಅಕ್ಟೋಬರ್ 2021 ರಲ್ಲಿ ಕರೆಯಬೇಕಾಗಿತ್ತು, ಆದರೆ, ಕೆಲ ಕಾರಣಗಳಿಂದ ಡಿಸೆಂಬರ್ 2021 ಕ್ಕೆ ಮುಂದೂಡಲಾಗಿತ್ತು.

bengaluru bengaluru

ಕೆ-ಆರ್‌ಐಡಿಇ ಅಧಿಕಾರಿಯೊಬ್ಬರು ಮಾತನಾಡಿ, ಇದೊಂದು ಇಪಿಸಿ (ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ) ಯೋಜನೆಯಾಗಿದ್ದು, ಇದರ ವೆಚ್ಚವು ಟೆಂಡರ್’ಗಳ ಮೇಲೆ ಅವಲಂಬಿತವಾಗಿರುತ್ತದೆ.” ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ (25.01 ಕಿ.ಮೀ.) ನಡುವಿನ ಒಂದು ಮಾರ್ಗಕ್ಕೆ ಈಗಾಗಲೇ ಟೆಂಡರ್ ನೀಡಲಾಗಿದೆ. ಲಾರ್ಸನ್ ಆ್ಯಂಡ್ ಟೂಬ್ರೊ ಸಂಸ್ಥೆಗೆ ಭೂಮಿ ಹಸ್ತಾಂತರಿಸುವಲ್ಲಿ ವಿಳಂಬವಾಗಿದ್ದರಿಂದ ಕಾಮಗಾರಿಯೂ ವಿಳಂಬವಾಗಿತ್ತು. ಇತ್ತೀಚೆಗೆ ಕಾಮಗಾರಿ ಆರಂಭವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಉಳಿದ ಎರಡು ಕಾರಿಡಾರ್‌ಗಳಿಗಿನ್ನೂ ಟೆಂಡರ್ ಕರೆಯುವುದು ಬಾಕಿ ಉಳಿದಿದೆ.

ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಮತ್ತು ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್. ಸಬ್ ಅರ್ಬನ್ ರೈಲು ಯೋಜನೆಯ ಗಡುವು 2026 ಆಗಿದೆ, ಪ್ರಕ್ರಿಯೆಗಳು ತಡವಾಗಿ ನಡೆಯುತ್ತಿರುವುದರಿಂದ ಯೋಜನೆಯು 2030 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕನಕ ​​ಲೈನ್ 19 ನಿಲ್ದಾಣಗಳನ್ನು ಒಳಗೊಂಡಿದ್ದು, ಅವುಗಳು ಇಂತಿವೆ…
ರಾಜನಕುಂಟೆ, ಮುದ್ದೇನಹಳ್ಳಿ, ಯಲಹಂಕ, ಜಕ್ಕೂರು, ಹೆಗಡೆ ನಗರ, ತಣ್ಣೀಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗೇನಹಳ್ಳಿ, ಕಗ್ಗದಾಸಪುರ, ಮಾರತ್ತಹಳ್ಳಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಂ, ಅಂಬೇಡ್ಕರ್ ನಗರ, ಹುಸ್ಕೂರ, ಸಿಂಗಾರ ಅಗ್ರಹಾರ, ಬೊಮ್ಮಸಂದ್ರ, ಹೀಲಲಿಗೆ.


bengaluru

LEAVE A REPLY

Please enter your comment!
Please enter your name here