Home Uncategorized ರಾಜ್ಯದಲ್ಲಿ ಕೋವಿಡ್​ ಆತಂಕ ವಿಚಾರ: ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದ ಸಚಿವ ಕೆ...

ರಾಜ್ಯದಲ್ಲಿ ಕೋವಿಡ್​ ಆತಂಕ ವಿಚಾರ: ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದ ಸಚಿವ ಕೆ ಸುಧಾಕರ್

10
0
Advertisement
bengaluru

ಬೆಳಗಾವಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ (Corona) ಕೇಸ್​​ ಹೆಚ್ಚಳವಾಗಿದೆ. ನಿನ್ನೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನೇತೃತ್ವದಲ್ಲಿ ಸಭೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಹೇಳಿದರು. ಸುವರ್ಣಸೌಧದಲ್ಲಿ ಅವರು ಮಾತನಾಡಿ, ಚೀನಾ, ಜಪಾನ್ ಸೇರಿ ಹಲವು ದೇಶಗಳಲ್ಲಿ ಕೊವಿಡ್​ ಹೆಚ್ಚಾಗುತ್ತಿದೆ. ವಿಶೇಷವಾಗಿ ಚೀನಾದಲ್ಲಿ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಾಗ್ತಿದೆ. ರಾಜ್ಯದಲ್ಲಿ 3ನೇ ಡೋಸ್​ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಕೊವಿಡ್ ಪಾಸಿಟಿವ್​ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು. ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ಮಾಡಿದ್ದೇನೆ ಎಂದು ಡಾ. ಸುಧಾಕರ್ ತಿಳಿಸಿದರು.

ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡ್ತೇವೆ. ಸಭೆ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. ಬೆಂಗಳೂರು ಏರ್​ಪೋರ್ಟ್​​ನಲ್ಲಿ ಹೆಚ್ಚು ನಿಗಾ ವಹಿಸಲು ಸೂಚನೆ ನೀಡಲಾಗುವುದು. ಮೂರನೇ ಡೋಸ್​ ತೆಗೆದುಕೊಳ್ಳದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಮಕ್ಕಳಿಗೂ ಲಸಿಕೆ ಅವಶ್ಯಕತೆ ಇದೆ‌‌ ಅವರಿಗೂ ನೀಡಲಾಗುವುದು. ನಾವು ಈ ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೊರೊನಾ ಕಾಟ! ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ

ಲಸಿಕಕರಣ 100% ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಗಟ್ಟಿಯಾಗಿ ಮಾಡಬೇಕಿದೆ. ಇದರ ಜೊತೆಗೆ ಸಿದ್ಧತೆಗಳನ್ನು ಮಾಡಬೇಕಿದೆ. ಅತಿ ಹೆಚ್ಚು ಪ್ರಯಾಣಿಕರ ಬರುವ ಸ್ಥಳ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಿರುವುದರಿಂದ ಅಲ್ಲಿ ಸ್ವಲ್ಪ ನಿಗಾ ಇಡಲು ಪ್ರಾರಂಭ ಮಾಡಿದ್ದೇವೆ. ಆತಂಕ ಇಲ್ಲ,ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಮೂರನೇ ಡೋಸ್ ಯಾರೆಲ್ಲ ತೆಗೆದುಕೊಂಡಿಲ್ಲ ಅವರ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು. ಮಕ್ಕಳಿಗೂ ಲಸಿಕೆ ಅವಶ್ಯಕತೆ ಇದೆ‌‌ ಅವರಿಗೂ ನೀಡಲಾಗುವುದು. ನಾವು ಈ ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡಿಕೊಳ್ಳಬೇಕು.

bengaluru bengaluru

ಸಭೆಯಾದ ಬಳಿಕೆ ಬೇಕಾದ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಕೇಂದ್ರ ಆರೋಗ್ಯ ಇಲಾಖೆಯ ಜೊತೆ ಚರ್ಚೆ ಮಾಡುತ್ತೇವೆ. ಅಲ್ಲಿಂದಲ್ಲೂ ಮಾರ್ಗದರ್ಶನ, ಸಲಹೆ ಪಡೆಯುತ್ತೇವೆ. ಕೊವೀಡ್ ಎದುರಿಸುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಹೊಸ ತಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪಾಸಿಟಿವ್ ಕೇಸ್​ಗಳನ್ನು ಜಿನೋವಿಕ್ ಟೆಸ್ಟ್ ಮಾಡೋಕೆ ಹೇಳಿದ್ದೀನಿ ಎಂದು ಡಾ. ಸುಧಾಕರ್ ತಿಳಿಸಿದರು.

ಇದನ್ನೂ ಓದಿ: China Covid Updates: ಮುಂದಿನ 90 ದಿನಗಳಲ್ಲಿ ಚೀನಾದ ಶೇ.60ರಷ್ಟು ಜನತೆ ಕೊರೊನಾ ಸೋಂಕಿಗೆ ಒಳಗಾಗಬಹುದು: ಲಕ್ಷಾಂತರ ಮಂದಿ ಸಾಯಬಹುದು

ದೇಶದ ಕೋವಿಡ್​​ 19 ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ಕರೆದ ಕೇಂದ್ರ ಆರೋಗ್ಯ ಸಚಿವ; ಸಭೆಯ ಮುಖ್ಯಾಂಶಗಳು

ದೇಶದ ಕೋವಿಡ್ -19 (Covid 19) ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ (Mansukh Mandaviya) ಬುಧವಾರ ದೆಹಲಿಯಲ್ಲಿ ತಜ್ಞರ ತಂಡದೊಂದಿಗೆ ಸಭೆ ನಡೆಸಿದ್ದಾರೆ. ಚೀನಾ, ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಲು ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ.

ಈ ಸಭೆಯಲ್ಲಿ ಆರೋಗ್ಯ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳು, ಫಾರ್ಮಸ್ಯುಟಿಕಲ್ಸ್ ಮತ್ತು ಬಯೋಟೆಕ್ನಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿರ್ದೇಶಕ ರಾಜೀವ್ ಬೇಲ್, ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ ಪೌಲ್ ಮತ್ತು ನ್ಯಾಷನಲ್ ಟೆಕ್ನಿಕಲ್ ಅಡ್ವಸರಿ ಗ್ರೂಪ್ ಆನ್ ಇಮ್ಯುನೈಜೇಷನ್ (NTAGI) ಅಧ್ಯಕ್ಷ ಎನ್.ಎಲ್ ಆರೋರಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


bengaluru

LEAVE A REPLY

Please enter your comment!
Please enter your name here