Home ಬೆಂಗಳೂರು ನಗರ Bengaluru | ಪತ್ನಿಯನ್ನು ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ದೂಡಿ ಹತ್ಯೆಗೈದ ಪತಿ

Bengaluru | ಪತ್ನಿಯನ್ನು ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ದೂಡಿ ಹತ್ಯೆಗೈದ ಪತಿ

21
0

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯನ್ನು ನಿರ್ಮಾಣ ಹಂತದ ಕಟ್ಟಡ ಮೇಲಿಂದ ಕೆಳಕ್ಕೆ ದೂಡಿ ಹಾಕಿ ಹತ್ಯೆಗೈದಿರುವ ಘಟನೆ ಸರ್ಜಾಪುರದ ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

Screenshot 2025 02 17 12 20 30 74 40deb401b9ffe8e1df2f1cc5ba480b12

ಮಂಜುಳಾ(40) ಕೊಲೆಯಾದ ಮಹಿಳೆ. ಮಂಜುನಾಥ್(45) ಆರೋಪಿ ಪತಿ. ಮಂಜುಳಾ ಮಾನಸಿಕ ಅಸ್ವಸ್ಥತೆಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಮಂಜುನಾಥ್ ರವಿವಾರ ರಾತ್ರಿ ಪತ್ನಿಯನ್ನ ಭುಜದ ಮೇಲೆ ಎತ್ತೊಯ್ದು ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಕೆಳಕ್ಕೆ ದೂಡಿದ್ದಾನೆ. 

ಕೆಳಗೆ ಬಿದ್ದು, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಆವೇಳೆಗಾಗಲೇ ಆಕೆ ಮೃತಪಟ್ಟಿದ್ದರು ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ  ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

LEAVE A REPLY

Please enter your comment!
Please enter your name here