Home ಬೆಂಗಳೂರು ನಗರ ಬೆಂಗಳೂರಿಗರೇ, ಇನ್ನೊಂದೂವರೆ ವರ್ಷ ಬಿಬಿಎಂಪಿ ಚುನಾವಣೆ‌ ನಡೆಯೋದೇ ಅನುಮಾನ

ಬೆಂಗಳೂರಿಗರೇ, ಇನ್ನೊಂದೂವರೆ ವರ್ಷ ಬಿಬಿಎಂಪಿ ಚುನಾವಣೆ‌ ನಡೆಯೋದೇ ಅನುಮಾನ

79
0
bengaluru

ಆರು ತಿಂಗಳಿಗಿಂತ ಹೆಚ್ಚು ಸಮಯ ಮುಗಿದಿದ್ದರೂ ವಾರ್ಡ್ ಡಿಲಿಮಿಟೇಶನ್ ಸಮಿತಿ ಇನ್ನೂ ಮೊದಲ ಸಭೆ ನಡೆಸಿಲ್ಲ

ಬೆಂಗಳೂರು:

ಬಿಬಿಎಂಪಿ ಚುನಾವಣೆ ಈಗ ನಡೆಯುತ್ತೆ ನಾಳೆ ನಡೆಯುತ್ತೆ ಅನ್ನೋ ನಿರೀಕ್ಷೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು ಇನ್ನೂ ಒಂದುವರೆ ವರ್ಷ ಚುನಾವಣೆ ನಡೆಯೋದು ಅನುಮಾನವಾಗಿದೆ. ಬಿಬಿಎಂಪಿ ಮುಖ್ಯಸ್ಥರ ನೇತೃತ್ವದ ವಾರ್ಡ್ ಡಿಲಿಮಿಟೇಶನ್ ಸಮಿತಿ, ಆರು ತಿಂಗಳಿಗಿಂತ ಹೆಚ್ಚು ಸಮಯ ಮುಗಿದಿದ್ದರೂ ಇನ್ನೂ ಮೊದಲ ಸಭೆ ನಡೆಸಿಲ್ಲ.

ಏತನ್ಮಧ್ಯೆ, ಈ ವಿಷಯವು ಸಂಪೂರ್ಣವಾಗಿ ಧ್ರುವೀಕರಣಗೊಂಡಿದೆ, ಹಿಂದಿನ 198 ವಾರ್ಡ್‌ಗಳಿಗೆ ಚುನಾವಣೆಯ ನಡೆಸಲು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಪಟ್ಟುಹಿಡಿದಿದ್ದರು, ಬಿಬಿಎಂಪಿ ಆಡಳಿತವು 243 ವಾರ್ಡ್‌ಗಳಿಗೆ ಬ್ಯಾಟಿಂಗ್ ಮಾಡುತ್ತಿದೆ.

ಮಾಜಿ ಕಾರ್ಪೋರೇಟರ್ಸ್ ಗಳು ತಕ್ಷಣವೇ ಚುನಾವಣೆ ನಡೆಸಬೇಕೆಂದು ಸುಪ್ರಿಂ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಇನ್ಮೂ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಇಂಥ ಸಮಯದಲ್ಲಿ ತಕ್ಷಣಕ್ಕೆ ಚುನಾವಣೆ ನಡೆಸೋದು ಸೂಕ್ತವಲ್ಲ ಎನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.

bengaluru

ಈ ಹಿಂದೆ ಚುನಾವಣಾ ಆಯೋಗ 198 ವಾರ್ಡ್ ಗಳಿಗೆ ಮೀಸಲಾತಿಯನ್ನ ಪ್ರಕಟ ಮಾಡಿತ್ತು. ಇದರ ಬೆನ್ನಲ್ಲೇ ಸರ್ಕಾರ ಸಚಿವ ಸಂಪುಟದಲ್ಲಿ 198 ರಿಂದ 243 ವಾರ್ಡ್ ಗೆ ಹೆಚ್ಚಿಸಿ ಅನುಮೋದನೆ ನೀಡಿದ್ದು, ವಾರ್ಡ್ ವಿಂಗಡನೆ, ಹೊಸ ಏರಿಯಾಳ ಸೇರ್ಪಡೆ, ಗಡಿ ಅಂತಿಮ ಹಾಗೂ ಮೀಸಲಾತಿ ಅಂತಿಮವಾಗಿಲ್ಲ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾಗೋಕೆ ಕನಿಷ್ಠ ವರ್ಷವಾದರೂ ಬೇಕಿದೆ.

Also Read: Bengalureans, don’t expect BBMP elections for at least 1.5 years!

ಹಿಂದಿನ ಪಾಲಿಕೆ ಸದಸ್ಯರ ಅವಧಿ ಸೆಪ್ಟೆಂಬರ್ 10 2020 ಕ್ಕೆ ಪೂರ್ಣಗೊಂಡಿದ್ದು ಅಂದೇ ಆಡಳಿತಾಧಿಕಾರಿಯನ್ನ ನೇಮಕ ಮಾಡಿತ್ತು. ಅಂದಿನಿಂದ ಇಂದಿನ ವರೆಗೂ ವಾರ್ಡ್ ಡಿಲಿಮಿಟೇಷನ್ ಕಮಿಟಿ ಒಂದೂ ಸಭೆಯನ್ನೂ ನಡೆಸಿಲ್ಲ.

ರಾಜ್ಯ ಸರ್ಕಾರವು ಸೆಪ್ಟೆಂಬರ್ 10, 2020 ರಂದು ಆಡಳಿತಾಧಿಕಾರಿಯನ್ನ ನೇಮಕ ಮಾಡಿತ್ತು ಮತ್ತು ಕಳೆದ 302 ದಿನಗಳಿಂದ ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ಕಾರ್ಯವನ್ನು ಮುಂದುವರೆಸಿದೆ.

ನಾಗರಿಕ ಸಂಸ್ಥೆಗೆ ಮತದಾನ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ರಾಜ್ಯ ಸರ್ಕಾರ ಪ್ರಶ್ನಿಸಿ, ಸುಪ್ರಿಂ ನ ಮೊರೆ ಹೋಗಿತ್ತು. ಕಳೆದ ಏಳು ತಿಂಗಳಿನಿಂದ ಅಫಿಡವಿಟ್ ಸಲ್ಲಿಸುವಲ್ಲಿ ವಿಫಲವಾಗಿದೆ. ಉದ್ದೇಶ ಪೂರಕವಾಗಿಯೇ ಸರ್ಕಾರ ಚುನಾವಣೆ ಮುಂದೂಡುವ ಹುನ್ನಾರ ಮಾಡುತ್ತಿದೆ ಎಂದು ವಕೀಲ ಸಾಹಿಲ್ ಟಾಗೋತ್ರಾ ಅವರ ಮೂಲಕ ಸಲ್ಲಿಸಿರುವ 49 ಪುಟಗಳ ಅಫಿಡವಿಟ್ ಮೂಲಕ ತಿಳಿದುಬಂದಿದೆ.

‘ಆರ್ಟಿಕಲ್ 243-ಯುನ ಅಲ್ಟ್ರಾ ವೈರ್‌ಗಳು’

ಎಸ್‌ಇಸಿ ಅಫಿಡವಿಟ್‌ನ ಪ್ರಕಾರ, ಕೆಎಂಸಿ ಕಾಯ್ದೆ (ಮೂರನೇ ತಿದ್ದುಪಡಿ) 2020 ರ ಅಂಗೀಕಾರಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಹೊರಡಿಸಿದ ಎರಡು ಅಧಿಸೂಚನೆಗಳು ಸಂವಿಧಾನದ 243-ಯು ವಿಧಿಯ ಅಲ್ಟ್ರಾ ವೈರ್‌ಗಳಾಗಿವೆ. ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ನೆಪದಲ್ಲಿ ಚುನಾವಣೆಯನ್ನು ಮುಂದೂಡುವ ಪ್ರಯತ್ನ ಮಾಡುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಪ್ರಯತ್ನ 2006 ರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ವಿಚಾರದಲ್ಲಿ ಕಿಶನ್‌ಸಿಂಗ್ ತೋಮರ್ V/S ಸುಪ್ರೀಂ ಕೋರ್ಟ್‌ನ ನಿರ್ದೇಶನ ಇದಕ್ಕೆ ಸಾಕ್ಷಿ ಎಂದು ಎಸ್‌ಇಸಿ ಉದಾಹರಣೆ ಕೊಟ್ಟಿದೆ.

ವಾರ್ಡ್‌ಗಳ ಡಿಲಿಮಿಟೇಶನ್ ಮಾಡುವ ವಿಧಾನವನ್ನು ಡಿಲಿಮಿಟೇಶನ್ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಹಾಗೆನೇ 243 ವಾರ್ಡ್‌ಗಳ ಗಡಿಗಳನ್ನು ಗುರುತಿಸಿ ಆನಂತರವೇ ಅಧಿಸೂಚನೆ ಹೊರಡಿಸಬೇಕು ಎಂದೂ ಸರಕಾರದ ತಂತ್ರ ಎಂದು ಎಸ್‌ಇಸಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ

ಈ ಎಲ್ಲಾ ಪ್ರಕ್ರಿಯೆ ಸಂಪೂರ್ಣವಾಗಲು ಕನಿಷ್ಠ 12 ತಿಂಗಳುಗಳು ಬೇಕಾಗುತ್ತವೆ. ಇದಲ್ಲದೆ, ಹೊಸದಾಗಿ ರೂಪುಗೊಂಡ 243 ವಾರ್ಡ್‌ಗಳಿಗೆ ಹೊಸ ಮತದಾರರ ಪಟ್ಟಿಯನ್ನು ತಯಾರಿಸಿ ಅಂತಿಮ ಗೊಳಿಸಲು ಕನಿಷ್ಠ 4 ರಿಂದ 5 ತಿಂಗಳ ಅಗತ್ಯವಿರುತ್ತದೆ. ಈ ಎಲ್ಲಾ ಕಾರಣಗಳಿಂದ ಬಿಬಿಎಂಪಿ ಚುನಾವಣೆಯನ್ನು ಕನಿಷ್ಠ 1.5 ವರ್ಷ ವಿಳಂಬಗೊಳಿಸುತ್ತದೆ ಎಂದು ಎಸ್‌ಇಸಿ ಗಮನಿಸಿದೆ.

IAS Gupta with IAS Basavraju
ಡಿಲಿಮಿಟೇಶನ್ ಪ್ಯಾನಲ್ ಮುಖ್ಯಸ್ಥ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಬಸವರಾಜು (ವಿಶೇಷ ಆಯುಕ್ತರು, ಕಂದಾಯ) ಅವರ ಪ್ರತಿನಿಧಿ ಚಿತ್ರ.

ಆಡಳಿತ ವೃದ್ಧಿಸಲು ವಾರ್ಡ್ ಸಂಖ್ಯೆ ಹೆಚ್ಚಳ: ಬಿಬಿಎಂಪಿ

ಮತ್ತೊಂದೆಡೆ, ತಿದ್ದುಪಡಿ ಮಾಡಿದ ಕೆಎಂಸಿ ಕಾಯ್ದೆಯಡಿ ಹೊರಡಿಸಲಾದ ಅಧಿಸೂಚನೆಗಳ ಮೂಲಕ ಬೆಂಗಳೂರು ನಗರದ ವಾರ್ಡ್‌ಗಳ ಸಂಖ್ಯೆಯನ್ನು ಈಗಾಗಲೇ 243 ವಾರ್ಡ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿಯ ಕಾನೂನು ವಿಭಾಗದ ಮುಖ್ಯಸ್ಥ ಕೆ.ಡಿ. ದೇಶಪಾಂಡೆ ಪ್ರತಿ ಅಫಿಡವಿಟ್ ಸಲ್ಲಿಸಿದ್ದರು. ಆಡಳಿತವನ್ನ ಪರಿಣಾಮಕಾರಿಯಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಎಂದೂ ಬಿಬಿಎಂಪಿ ತನ್ನ ಅಫಿಡವಿಟ್ ನಲ್ಲಿ ಉಲ್ಲೇಖಿಸಿತ್ತು. ಹಾಗೆನೇ ಕೆಲ ವಾರ್ಡ್ ಗಳಲ್ಲಿ ಜನಸಂಖ್ಯೆ ಅಸಮತೋಲನ ವಿರುವುದರಿಂದ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಅನಿವಾರ್ಯ ಎಂಬ ಮಾದ ಬಿಬಿಎಂಪಿಯದ್ದು.

ಬೆಂಗಳೂರು ನಗರದಲ್ಲಿ 243 ವಾರ್ಡ್‌ಗಳನ್ನು ರಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರನ್ನು 2021 ರ ಜನವರಿ 29 ರಂದು ಡಿಲಿಮಿಟೇಶನ್ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಸರ್ಕಾರ ಹೊರಡಿಸಿದ ಅಧಿಸೂಚನೆಯ ಆರು ತಿಂಗಳೊಳಗೆ ಡಿಲಿಮಿಟೇಶನ್ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಮಿತಿಗೆ ಸೂಚನೆ ನೀಡಿತ್ತಯ. ಅಂದಿನಿಂದ ಇಲ್ಲೀವರೆಗೂ ಸಮಿತಿ ಒಂದೂ ಸಭೆಯನ್ನೇ ನಡೆಸಿಲ್ಲ.

bengaluru

LEAVE A REPLY

Please enter your comment!
Please enter your name here