ಬೆಂಗಳೂರು: ವಿಡಿಯೋ ಗೇಮ್ಸ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಇಬ್ಬರು ಮ್ಯಾನೇಜರ್ ಸೇರಿ 11 ಜನರ ಬಂಧಿಸಲಾಗಿದೆ.
ರಾಜರಾಜೇಶ್ವರಿನಗರದ ರಘು ಆರ್ಕೆಡ್ ಬಿಲ್ಡಿಂಗ್ ಮೇಲೆ ಸಿಸಿಬಿ ರೇಡ್ ಮಾಡಿದ್ದು, ಇಬ್ಬರು ಮ್ಯಾನೇಜರ್ ಸೇರಿದಂತೆ 11 ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಡಿಯೋ ಗೇಮ್ಸ್ ಅಡ್ಡೆ ಮ್ಯಾನೇಜರ್ಗಳಾದ ನಿಖಿತ್, ಕೃಷ್ಣ ಬಂಧಿತರು. ಪ್ರಮುಖ ಆರೋಪಿಗಳಾದ ಪಂಚಲಿಂಗಯ್ಯ, ಆದರ್ಶನಿಗಾಗಿ ಹುಡುಕಾಟ ನಡೆಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಂಧಿತರಿಂದ 23 ಲಕ್ಷ ಮೌಲ್ಯದ 23 ವಿಡಿಯೋ ಗೇಮ್ ಯಂತ್ರಗಳ ಸಮೇತ 1.74 ಲಕ್ಷ ನಗದು ಜಪ್ತಿ ಮಾಡಿದ್ದಾರೆ.