Home ಬೆಂಗಳೂರು ನಗರ ಬೆಂಗಳೂರಿನ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳನ್ನು ಮರುನಾಮಕರಣ ಮಾಡುವಂತೆ ಬಿಜೆಪಿ ಸಂಸದ ಪಿ ಸಿ ಮೋಹನ್...

ಬೆಂಗಳೂರಿನ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳನ್ನು ಮರುನಾಮಕರಣ ಮಾಡುವಂತೆ ಬಿಜೆಪಿ ಸಂಸದ ಪಿ ಸಿ ಮೋಹನ್ ಮನವಿ

27
0
BJP MP PC Mohan appeals for renamed government institutions and public places in Bangalore

ಬೆಂಗಳೂರು:

ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ ಸಿ ಮೋಹನ್ ರವರು ಬುಧವಾರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಮನವಿ ಮಾಡಿ, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ರಿಟಿಷ್‌ ಸಂಸ್ಕೃತಿ ಹಾಗೂ ಪರಂಪರೆ ಸಂಬಂಧಿಸಿದ ಹೆಸರುಗಳನ್ನು ಹೊಂದಿರುವ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಕರ್ನಾಟಕ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಮರುನಾಮಕರಣ ಮಾಡುವಂತೆ ಮನವಿ ಮಾಡಿದರು.

ಈ ಸಂಬಂಧ ಮುಖ್ಯಮಂತ್ರಿಗಳಾದ ಬೊಮ್ಮಾಯಿ ರವರಿಗೆ ಬಿಜೆಪಿ ಸಂಸದ ಪತ್ರವನ್ನು ಬರೆದಿದ್ದಾರೆ.

“ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿದೆ. ಆದರೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳು ಬ್ರಿಟೀಷರು ಆಡಳಿತಾವಧಿಯಲ್ಲಿಟ್ಟ ಹೆಸರುಗಳಿಂದ ಇಂದಿಗೂ ಪರಿಚಿತವಾಗಿವೆ,” ಎಂದು ಮೋಹನ್ ಪತ್ರವನ್ನು ಟ್ವೀಟ್‌ನಲ್ಲಿ ಹಾಗೂ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ವೀರರ ಸ್ಮರಣಾರ್ಥವಾಗಿ, ಬ್ರಿಟೀಷರ ಹೆಸರಿನಲ್ಲಿರುವ ಬೆಂಗಳೂರು ಕೇಂದ್ರದ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಅಧಿಕೃತವಾಗಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಿಂದ ಗಣರಾಜ್ಯೋತ್ಸವದಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಯಿತು ಎಂದು ಅವರು ಹೇಳಿದರು.

ಪತ್ರದಲ್ಲಿ, ಅವರು ಮೂರು ಸರ್ಕಾರಿ ಆಸ್ಪತ್ರೆಗಳ ಹಾಗೂ ಕೆಲವು ರಸ್ತೆಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ – ಬೌರಿಂಗ್ ಮತ್ತು ಲೇಡಿ ಕರ್ಜನ್, ವಿಕ್ಟೋರಿಯಾ ಮತ್ತು ಮಿಂಟೋ – ಜೊತೆಗೆ ಅವೆನ್ಯೂ, ಲ್ಯಾವೆಲ್ಲೆ ಮತ್ತು ಕನ್ನಿಂಗ್ಹ್ಯಾಮ್‌ನಂತಹ ಪ್ರಮುಖ ರಸ್ತೆಗಳು.

ಸ್ವತಂತ್ರ ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳ ಹೆಸರನ್ನು ಹೊಂದಿರುವ ಸರ್ಕಾರಿ ಕಟ್ಟಡಗಳು ಮತ್ತು ಬೀದಿಗಳು “ಗುಲಾಮಗಿರಿ” ಯ ಸಂಕೇತವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ವಿದೇಶಿ “ದಬ್ಬಾಳಿಕೆಯ” ಆಡಳಿತದ ವಿರುದ್ಧ ಸಮರ ಸಾರಿದ ಕರ್ನಾಟಕದ ಅನೇಕ ರಾಜರು, ರಾಣಿಯರು ಮತ್ತು ವೀರ ಹೃದಯಿಗಳ ಹೆಸರನ್ನು ಅಂತಹ ಸಂಸ್ಥೆಗಳು ಮತ್ತು ಬೀದಿಗಳಿಗೆ ಮರುನಾಮಕರಣ ಮಾಡುವುದರಿಂದ ಅವರನ್ನು ಗೌರವಿಸುವುದು ಮಾತ್ರವಲ್ಲದೆ ಯುವ ಪೀಳಿಗೆಯಲ್ಲಿ ದೇಶಪ್ರೇಮವನ್ನು ತುಂಬುತ್ತದೆ ಎಂದು ಅವರು ಹೇಳಿದ್ದಾರೆ.

Also Read: Rename govt institutions public spaces in Bengaluru having colonial names BJP MP

LEAVE A REPLY

Please enter your comment!
Please enter your name here