Home ಕರ್ನಾಟಕ ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಗೆ ಧಾರವಾಡ ಜಿಲ್ಲೆಯ ಶಶಿಮೌಳಿ ಡಿ. ಕುಲಕರ್ಣಿ, ಚಿಕ್ಕಮಗಳೂರು ಜಿಲ್ಲೆಯ...

ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಗೆ ಧಾರವಾಡ ಜಿಲ್ಲೆಯ ಶಶಿಮೌಳಿ ಡಿ. ಕುಲಕರ್ಣಿ, ಚಿಕ್ಕಮಗಳೂರು ಜಿಲ್ಲೆಯ ಎಂ.ಜೆ.ದಿನೇಶ್ ಅವರ ನೇಮಕ

155
0
Dharwad's ShashiMauli Kulkarni, Chikkamagaluru's MJ Dinesh elevated to BJP's Kisan Morcha National Executive
Advertisement
bengaluru

ಬೆಂಗಳೂರು:

ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಕರ್ನಾಟಕದ ಇಬ್ಬರನ್ನು ಕಿಸಾನ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ರಾಜ್‍ಕುಮಾರ್ ಚಾಹರ್ ಅವರು ನೇಮಿಸಿದ್ದಾರೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆ ಮತ್ತು ತಾಲ್ಲೂಕಿನ ಯಾದವಾಡದ ಶಶಿಮೌಳಿ ಡಿ.ಕುಲಕರ್ಣಿ ಮತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದೇವವೃಂದದ ಎಂ.ಜೆ.ದಿನೇಶ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ನೇಮಕದಿಂದ ಮೋರ್ಚಾದ ಸಂಘಟನೆ ಬಲಪಡಿಸಲು ನೆರವಾಗಲಿದೆ ಎಂದು ಈರಣ್ಣ ಕಡಾಡಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here